ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಕ್ರಮ-ಸಕ್ರಮ ಅರ್ಜಿ ಊರ್ಜಿತಗೊಳಿಸುವ ಪೂರ್ವದಲ್ಲಿಯೇ ಮತ್ತೊಂದು ಅಕ್ರಮ

ಭಟ್ಕಳ: ಅಕ್ರಮ-ಸಕ್ರಮ ಅರ್ಜಿ ಊರ್ಜಿತಗೊಳಿಸುವ ಪೂರ್ವದಲ್ಲಿಯೇ ಮತ್ತೊಂದು ಅಕ್ರಮ

Thu, 28 Jan 2010 15:21:00  Office Staff   S.O. News Service
ಭಟ್ಕಳ:28, ಗ್ರಾಮ ಸಮಿತಿಯು ಸ್ವೀಕರಿಸಿದ ಅಕ್ರಮ ಸಕ್ರಮ ಅರ್ಜಿಗಳನ್ನು ಇತ್ಯಾರ್ಥಗೊಳಿಸವ ಪೂರ್ವದಲ್ಲಿಯೆ ಇಲಾಖೆಯು ಅತಿಕ್ರಮಣದಾರರಿಗೆ ನೋಟಿಸು ನೀಡಿ ಕಾನೂನನ್ನು ಉಲ್ಲಂಘಿಸಿದ್ದು ಇನ್ನು ಮುಂದೆ ತಾಲೂಕಿನಲ್ಲಿರುವ ಯಾವುದೇ ಅತಿಕ್ರಮಣದಾರರಿಗೆ ಅರಣ್ಯ ಅಧಿಕಾರಿಗಳು ಅವರನ್ನು ಒಕ್ಕಲೆಬ್ಬಿಸಲು ಮುಂದಾದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾದೀತೆಂದು  ಭಟ್ಕಳ ತಾಲೂಕು ಅತಿಕ್ರಮಣಗಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ್ ಎಚ್ಚರಿಕೆಯನ್ನು ನೀಡಿದ್ದಾರೆ. 

ಬುಧವಾರದಂದು ನಗರದ ಪ್ರವಾಸಿ ಬಂಗ್ಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಅರಣ್ಯ ಇಲಾಖೆಯ ಅತಿಕ್ರಮಣದಾರರಿಗೆ ನೋಟಿಸು ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು ಈಗಾಗಲೆ ಅತಿಕ್ರಮಣದಾರರನ್ನು ಸಕ್ರಮಗೊಳಿಸುವಂತೆ ಸಾಕಾಷ್ಟುಬಾರಿ ಮನವಿಯನ್ನು ಮಾಡಲಾಗಿದೆ ಅದರಂತೆ ಪ್ರತಿಗ್ರಾಮದಲ್ಲಿ ಅಕ್ರಮಸಕ್ರಮ ಸಮಿತಿಯನ್ನು ನೇಮಿಸಿದ್ದು ಅದು ತನ್ನಲ್ಲಿ ಬಂದ ಅರ್ಜಿಗಳನ್ನು ಇತ್ಯಾರ್ಥಪಡಿಸುವ ಪೂರ್ವದಲ್ಲಿ ಅರಣ್ಯ ಇಲಾಖೆಯು ಅತಿಕ್ರಮಣದಾರರಿಗೆ ನೋಟಿಸನ್ನು ಜಾರಿ ಮಾಡಿರುವುದು ಕಾನೂನಿಗೆ ವಿರುದ್ದವಾದ ಕ್ರಮವಾಗಿದೆ ಎಂದು ಅವರು ತಿಳಿಸಿದರು. 

ಕೇಂದ್ರ ಸರ್ಕಾರವು ಅತಿಕ್ರಮಣದಾರರಿಗೆ ಹಕ್ಕು ಪತ್ರವನ್ನು ನೀಡಲು ಅಕ್ರಮ ಸಕ್ರಮ ಯೋಜನೆಯನ್ನು ಜಾರಿಗೊಳಿಸಿದ್ದು ಇದು ಭಟ್ಕಳ ತಾಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದ ಅವರು ಜಿಲ್ಲೆಯಲ್ಲಿ ಬೇರೆಕಡೆಗಳಿಂದ ಬಂದವರನ್ನು ಉಳಿದುಕೊಳ್ಳಲು ಅರಣ್ಯ ಇಲಾಖೆ ಜಾಗವನ್ನು ನೀಡಿದೆ ಆದರೆ ಜಿಲ್ಲೆಯ ವಸತಿ ರಹಿತರಿಗೆ ಮನೆಕಟ್ಟಿಕೊಂಡು ಬದುಕಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಹೊರಗಿನವರಿಗೊಂದು ಕಾನೂನು ನಮಗೊಂದು ಕಾನೂನು ಇದು ಯಾವ ನ್ಯಾಯವೆಂದು ಅವರು ಪ್ರಶ್ನಿಸಿದರು. ಹಲವಾರು ವರ್ಷಗಳಿಂದ ಅರಣ್ಯಭೂಮಿಯನ್ನು ನಂಬಿಕೊಂಡು ಬಂದು ಅದರಲ್ಲಿಯೆ ವಾಸಮಾಡುತ್ತಿರುವ ನೂರಾನು ಕುಟುಂಬಗಳು ಈಗ ಏಕಾ‌ಎಕಿ  ತೆರವುಗೊಳಿಸಿ ಎಂದು ನೋಟಿಸು ಜಾರಿ ಮಾಡಿದರೆ ಅವರ ಗತಿ ಏನಾದೀತು? ಎಂದ ಅವರು ಅಧಿಕಾರಿ ಇದು ಸುಪ್ರೀಮ್ ಕೋರ್ಟಿನ ಅದೇಶವೆಂದು ಹೇಳುತ್ತಿರುದ್ದಾರೆ. 

ಆದರೆ ಸುಪ್ರೀಮ್ ಕೋರ್ಟ್ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವಂತೆ ಎಲ್ಲೋ  ಹೇಳಿಲ್ಲ. ಅಧಿಕಾರಿಗಳು ಸುಮ್ಮನೆ ಕೋರ್ಟಿನ ಅದೇಶವಿದೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾರೆ ಇದರಿಂದಾಗಿ ವಸತಿರಹಿತ ಬಡಜನತೆ ಕಂಗಲಾಗಿದೆ ಎಂದರು. ಈ ನಿಟ್ಟಿನಲ್ಲಿ ಮುಂದಿನ ತಿಂಗಳು ತಾಲೂಕಿನಲ್ಲಿ ಅತಿಕ್ರಮಣದಾರರ ಭೃಹತ್ ಹೋರಾಟ ಸಭೆಯನ್ನು ಅಯೋಜಿಸಲು ನಿರ್ಧರಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
 
ಅತಿಕ್ರಮಣದಾರರ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸತಿಶಕುಮಾರ್, ಪ್ರಧಾನ ಕಾರ್ಯದರ್ಶಿ ಬಾಷಾ ಸಾಹೆಬ್, ಉಪಾಧ್ಯಕ್ಷ ಎಫ್.ಕೆ.ಮೋಗೆರ್, ಕೆ.ಸುಲೈಮಾನ್, ಚಂದ್ರು ನಾಯ್ಕ, ನಾಗೇಶ್ ದೇವಾಡಿಗ, ಗಣಪತಿ ನಾಯ್ಕ, ಶಮೀಮ್ ಬಾನು ಶಕೀಲಾ, ಅಬ್ದುರ್ರಹೀಮ್, ಮುಂತಾದವರು ಉಪಸ್ಥಿತರಿದ್ದರು.

Share: