ಹೊಸದಿಲ್ಲಿ, ನ.೨೦: ಕಬ್ಬು ಬೆಲೆ ಮಸೂದೆಯ ಕುರಿತಾಗಿ ಸತತ ಎರಡನೆ ದಿನವೂ ವಿಪಕ್ಷಗಳು ಕೋಲಾಹಲ ಎಬ್ಬಿಸಿರುದುದರಿಂದಾಗಿ ಉಭಯ ಸದನಗಳ ಕಲಾಪವನ್ನೂ ಸೋಮವಾರದ ವರೆಗೆ ಮುಂದೂಡಲಾಗಿದೆ.
ಲೋಕಸಭೆ ಸಮಾವೇಶಗೊಂಡೊಡನೆಯೇ ರಾಷ್ಟ್ರೀಯ ಲೋಕದಳ, ಸಮಾಜವಾದಿ ಪಕ್ಷ, ಬಿಜು ಜನತಾದಳ ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರು ಸಭಾಧ್ಯಕ್ಷೆ ಮೀರಾ ಕುಮಾರ್‌ರ ವೇದಿಕೆಯ ಪಕ್ಕದಲ್ಲಿ ನೆರೆದು ಸರಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ ಸಭಾಧ್ಯಕ್ಷೆ ಸದನವನ್ನು ಮಧ್ಯಾಹ್ನ ೧೨ರ ತನಕ ಮುಂದೂಡಿದರು.
ಸದನ ಮರು ಸಮಾವೇಶಗೊಂಡಾಗಲೂ ಕೋಲಾಹಲ ನಿಲ್ಲದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರದ ವರೆಗೆ ಮುಂದೂಡಲಾಯಿತು. ಶನಿವಾರ ಸಂಸತ್ ಕಲಾಪ ನಡೆಯುವುದಿಲ್ಲ.
ಬಿಜೆಪಿ ಸಂಸದ ವರುಣ್ ಗಾಂಧಿ ಹಾಗೂ ಆರ್‌ಎಲ್‌ಡಿಯ ಜಯಂತ ಸಿಂಗ್ ಲೋಕಸಭೆಯಲ್ಲಿ ವಿಪಕ್ಷ ಸದಸ್ಯರ ನೇತೃತ್ವ ವಹಿಸಿ ಸದನದ ಅಂಗಳಕ್ಕಿಳಿದರು. ಬಿಎಸ್ಪಿ ಹಾಗೂ ಎಡಪಕ್ಷಗಳು ಪ್ರತಿಭಟನೆಯನ್ನು ಬೆಂಬಲಿಸಿವೆಯಾದರೂ ಅವುಗಳ ಸದಸ್ಯರು ಇತರರೊಂದಿಗೆ ಸೇರಲಿಲ್ಲ.
ಗದ್ದಲದ ನಡುವೆಯೇ ಸಭಾಧ್ಯಕ್ಷೆ ಹೇಳಿಕೆ ನೀಡಲು ಸಚಿವರನ್ನು ಕರೆದರಾದರೂ ವಿಪಕ್ಷೀಯರು ಕಲಾಪ ಮುಂದುವರಿಕೆಗೆ ಅವಕಾಶ ನೀಡಲಿಲ್ಲ.
‘ಕಾಲಾ ಕಾನೂನ್ ವಾಪಸ್ ಲೋ’ ಎಂಬ ಘೋಷಣೆ ಕೂಗುತ್ತಿದ್ದ ಸದಸ್ಯರನ್ನು ಆಸನಗಳಿಗೆ ಹಿಂದಿರುಗುವಂತೆ ಮನವೊಲಿಸಲು ಮೀರಾ ಕುಮಾರ್ ವಿಫಲರಾದರು. ಅನಿವಾರ್ಯವಾಗಿ ಅವರು ಲೋಕಸಭೆಯನ್ನು ಸೋಮವಾರದ ವರೆಗೆ ಮುಂದೂಡಬೇಕಾಯಿತು.
ರಾಜ್ಯ ಸಭೆಯಲ್ಲೂ ವಾತಾವರಣ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸದನ ಸಮಾವೇಶಗೊಂಡೊಡನೆಯೇ ಎಸ್ಪಿ ಸಂಸದರು ವಿಷಯ ಪ್ರಸ್ತಾಪಿಸುವ ಮೂಲಕ ಗೊಂದಲ ಆರಂಭವಾಯಿತು.
ಪೀಠದಲ್ಲಿದ್ದ ಸಭಾಪತಿ ಹಾಮಿದ್ ಅನ್ಸಾರಿ ಮೊದಲು ಸದನವನ್ನು ಮಧ್ಯಾಹ್ನ ೧೨ರ ವರೆಗೆ ಮುಂದೂಡಿದರು. ಬಳಿಕವೂ ಕೋಲಾಹಲ ಮುಂದುವರಿದಾಗ ಕಲಾಪವನ್ನು ಸೋಮವಾರದ ತನಕ ಮುಂದೂಡಬೇಕಾಯಿತು.