ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ‘ವರದಕ್ಷಿಣೆ ರಹಿತ ವಿವಾಹ ಸಂಪ್ರದಾಯವಾಗಲಿ’:ಉಚಿತ ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಕಾರ್ಯಕ್ರಮ

‘ವರದಕ್ಷಿಣೆ ರಹಿತ ವಿವಾಹ ಸಂಪ್ರದಾಯವಾಗಲಿ’:ಉಚಿತ ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಕಾರ್ಯಕ್ರಮ

Tue, 27 Apr 2010 03:01:00  Office Staff   S.O. News Service
ಉಡುಪಿ, ಎ.೨೬: ವರದಕ್ಷಿಣೆ ರಹಿತ ವಿವಾಹ ಸಂಪ್ರದಾಯವಾಗಿ ಬೆಳೆಯಬೇಕು. ಇದರಿಂದ ಸಮಾಜದ ಗೌರವವೂ ಹೆಚ್ಚುತ್ತದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಜಿ.ಶಂಕರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮೊಗರ ಯುವ ಸಂಘಟನೆ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನೇತೃತ್ವದಲ್ಲಿ ಮೇ ೧೬ರಂದು ಬೆಣ್ಣೆಕುದ್ರು ಶ್ರೀಕುಲಮಹಾಸ್ತ್ರೀ ಅಮ್ಮನವರ ದೇವಳದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹಕ್ಕೆ ಪೂರ್ವಭಾವಿಯಾಗಿ ರವಿವಾರ ಉಡುಪಿಯ ಶ್ಯಾಮಿಲಿ ಸಭಾ ಭವನದಲ್ಲಿ ನಡೆದ ಸಾಮೂಹಿಕ ವೀಳ್ಯಶಾಸ್ತ್ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವರದಕ್ಷಿಣೆಯನ್ನು ಹೋಗಲಾಡಿಸುವುದು ಸಾಮೂಹಿಕ ವಿವಾಹದ ಉದ್ದೇಶವಾಗಿದೆ. ಇದರ ಬಗ್ಗೆ ಯಾರಿಗೂ ಕೀಳರಿಮೆ ಬೇಡ. ಇದರಿಂದ ಅವರಿಗೆ ಗೌರವ ಹೆಚ್ಚುತ್ತದೆ ಎಂದು ಶಂಕರ್ ತಿಳಿಸಿದರು. ಪ್ರತಿ ವಧುವಿಗೆ ಕರಿಮಣಿ ಸರ, ಧಾರೆ ಸೀರೆ, ಕಾಲುಂಗುರ, ಮೇಕಪ್ ಸೆಟ್ ಹಾಗೂ ವರನಿಗೆ ಕುರ್ತಾ, ಪೈಜಾಮ ಹಾಗೂ ಪೇಟ ನೀಡಲಾಗುವುದು ಎಂದರು.

ಅಣ್ಣಯ್ಯ ಗುರಿಕಾರರಿಗೆ ಳ್ಯ ಹಸ್ತಾಂತರಿಸುವ ಮೂಲಕ ಜಿ.ಶಂಕರ್ ಳ್ಯಶಾಸ್ತ್ರಕ್ಕೆ ಚಾಲನೆ ನೀಡಿದರು. ಗುರಿಕಾರರು ಹಾಗೂ ಮೇ ೧೬ರಂದು ಹಸೆಮಣೆ ಏರುವ ವಧು, ವರರ ಹೆತ್ತವರ ಉಪಸ್ಥಿತಿಯಲ್ಲಿ ವೀಳ್ಯಶಾಸ್ತ್ರ ಸಂಪ್ರದಾಯ ನೆರವೇರಿತು.

ಮೊಗರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. 

ಮೊಗರ ಯುವ ಸಂಘಟನೆಯ ನಿಕಟ ಪೂರ್ವ ಅಧ್ಯಕ್ಷ ಎಂ.ಎಸ್.ಸಂಜೀವ, ಶಾಲಿನಿ ಜಿ.ಶಂಕರ್, ದ.ಕ.ಜಿಲ್ಲಾ ಮೊಗರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ಬಗ್ವಾಡಿ ಹೋಬಳಿ ಉಪಾಧ್ಯಕ್ಷ ಪುಂಡಲೀಕ ಬಂಗೇರ, ಬಾರಕೂರು ಹೋಬಳಿಯ ಉಪಾಧ್ಯಕ್ಷ ವಿಶ್ವನಾಥ ಕೂರಾಡಿ, ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಸ್ಥಾನದ ಕ್ಷೇತ್ರಾಡಳಿತ ಅಧ್ಯಕ್ಷ, ಉದ್ಯಮಿ ಆನಂದ ಕುಂದರ್ ಉಪಸ್ಥಿತರಿದ್ದರು.

ಜಿಲ್ಲಾ ಮೊಗರ ಯುವ ಸಂಘಟನೆಯ ಸ್ಥಾಪಕಾಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಸ್ವಾಗತಿಸಿದರು. ಶಿವರಾಮ್ ಕೋಟ ವಂದಿಸಿದರು. 

ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರ್ವಹಿಸಿದರು.

Share: