ಬಂಟ್ವಾಳ, ಜನವರಿ 5:ತಾಲೂಕಿನ ಫ್ರೌಡಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ವತಿಯಿಂದ ನೀಡಲಾಗುವ ಸೈಕಲ್ ಗಳು ಕಲ್ಲಡ್ಕದಲ್ಲಿ ಸಿದ್ದಗೊಳ್ಳುತ್ತಿದೆ.
ಕಲ್ಲಡ್ಕದ ಹಿ.ಪ್ರಾ.ಶಾಲಾ ಮೈದಾದಲ್ಲಿ ಸೈಕಲ್ ಗಳ ಜೋಡಣಾ ಕಾರ್ಯ ಭರದಿಂದ ಸಾಗುತ್ತಿದ್ದುಸುಮಾರು ಮೂವತ್ತು ಮಂದಿ ಕಾರ್ಮಿಕರು ಅದರ ಜೋಡಣಾ ಕಾರ್ಯದಲ್ಲಿ ತೊಡಗಿದ್ದಾರೆ.ರಾಜ್ಯಾದ್ಯಂತ ೪ ಕಂಪೆನಿಗಳಿಗೆ ಸೈಕಲ್ ಒದಗಿಸು ಗುತ್ತಿಗೆಯನ್ನು ಸರ್ಕಾರ ನೀಡಿದ್ದು ಬಿಜಾಪುರ ವಿಭಾಗ ಅಟ್ಲಾಸ್ ಕಂಪೆನಿಗೆ,ಬೆಳಗಾಂ ವಿಭಾಗ ಟಿ೧ ಕಂಪೆನಿಗೆ ,ಬೆಂಗಳೂರು ವಿಭಾಗ ಎ೧ ಕಂಪೆನಿಗೆ ಹಾಗೂ ದ.ಕ.ವನ್ನು ಒಳಗೊಂಡ ಮೈಸೂರು ವಿಭಾಗದ ಶಾಲೆಗಳಿಗೆ ಸೈಕಲ್ ಒದಗಿಸಿವ ಗುತ್ತಿಗೆಯನ್ನು ಹೀರೋ ಸೈಕಲ್ ಕಂಪೆನಿ ವಹಿಸಿಕೊಂಡಿದೆ. ಆಯಾ ತಾಲೂಕಿನ ಕೇಂದ್ರ ಸ್ಥಳದಲ್ಲಿ ಸೈಕಲ್ ಗಳನ್ನು ಜೋಡನೆ ಮಾಡಿ ಶಾಲೆಗಳಿಗೆ ವಿತರಿಸುವುದು ಇವರ ಜವಬ್ದಾರಿ.





ಸೈಕಲ್ ಗೆ ಬೇಕಾದ ಎಲ್ಲಾ ಸರಕುಗಳನ್ನು ಪಂಜಾಬ್ ನ ಲುದಿಯಾದಿನಾದಿಂದ ತರಿಸಿಕೊಳ್ಳಲಾಗಿದ್ದು ಕಂಪೆನಿಯ ಮೇಲ್ವಿಚಾರಕ ಆತಿಕ್ ಇಲ್ಲಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಬಂಟ್ವಾಲ ತಾಲೂಕಿನಲ್ಲಿ ಒಟ್ಟು ೫೫೫೦ ಸೈಕಲ್ ಗಳ ವಿತರಣೆ ಮಾಡಬೇಕಾಗಿದ್ದು ಈಗಾಗಲೇ ಸುಮಾರು ೧೫೦೦ ಸೈಕಲ್ ಗಳನ್ನು ಶಾಲೆಗಳಿಗೆ ಸರಬರಾಜು ಮಾಡಲಾಗಿದೆ. ದಿನವೊಂದಕ್ಕ ಇಲ್ಲಿನ ಒಬ್ಬ ಕಾರ್ಮಿಕ ೫ರಿಂದ ಆರು ಸೈಕಲ್ ಗಳನ್ನು ಸಿದ್ದಪಡಿಸುತ್ತಿದ್ದ,ಮುಂದಿನ ಹದಿನೈದು ದಿನಗಳಲ್ಲಿ ಎಲ್ಲವುಗಳ ಜೋಡಣಾ ಕಾರ್ಯ ಮುಗಿಯ ಬಹುದು ಎಂದು ಅತಿಕ್ ಹೇಳುತ್ತಾರೆ. ಬೆಳ್ತಂಗಡಿ ತಾಲೂಕಿನ ಬಹುತೇಕ ಶಾಲೆಗಳಿಗೆ ಸೈಕಲ್ ಸರಬರಾಜು ಮಾಡಲಾಗಿದ್ದು,ಪುತ್ತೂರು ಹಾಗೂ ಸುಳ್ಯತಾಲೂಕಿನಲ್ಲಿ ಇನ್ನಷ್ಟೇ ಜೋಡಣಾ ಕಾರ್ಯ ನಡೆಯಬೇಕಾಗಿದೆ. ಮೇಲ್ನೋಟಕ್ಕೆ ಗುಣಮಟ್ಟದ ಸೈಕಲ್ ನಂತೆ ಕಾಣುವ ಪ್ರತೀ ಸೈಕಲ್ಗೆ ಸರ್ಕಾರ ೨೩೫೦ ರೂ ಭರಿಸಬೇಕಾಗಿದೆ.ಆದರೆ ಶಾಲೆಗಳಿಗೆ ಸಾಗಾಡ ನಟೆಸುವ ವೇಳೆ ಸೈಕಲ್ ಗಳಿಗೆ ಹಾನಿಯಾಗುತ್ತಿದ್ದು,ಸಾಧ್ಯವಾದಷ್ಟು ಮಟ್ಟಿಗೆ ಮುತುವರ್ಜಿವಹಿಸುತ್ತಿದ್ದೇವೆ ಎನ್ನುತಾರೆ ಕಂಪೆನಿಯ ಅತಿಕ್.
ಒಟ್ಟಿನಲ್ಲಿ ಈ ಸೈಕಲ್ಲಿನಿಂದಾಗಿ ಕಲ್ಲಡ್ಕ ಈಗ ”ಸೈಕಲ್ಲಡ್ಕ” ಎಂದೆನಿಸಿಕೊಂಡಿದೆ.