ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯ ಸರ್ಕಾರಿ ನೌಕರ ಪ್ರಯಾಣ ಸೌಕರ್ಯದಲ್ಲಿ ಸೂಕ್ತ ಮಾರ್ಪಾಡು

ಬೆಂಗಳೂರು: ರಾಜ್ಯ ಸರ್ಕಾರಿ ನೌಕರ ಪ್ರಯಾಣ ಸೌಕರ್ಯದಲ್ಲಿ ಸೂಕ್ತ ಮಾರ್ಪಾಡು

Fri, 08 Jan 2010 14:47:00  Office Staff   S.O. News Service
ಬೆಂಗಳೂರು,ಜನವರಿ 8: ರಾಜ್ಯ ಸರ್ಕಾರಿ ನೌಕರರು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಯಾಣ ಮಾಡುವ ಸಂದರ್ಭದಲ್ಲಿ ವೋಲ್ವೋ, ರಾಜಹಂಸದಂತಹ ಸುವಿಹಾರಿ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ನೀಡಿರುವ ಸರ್ಕಾರ, ಇದಕ್ಕಾಗಿ ಸೂಕ್ತ ತಿದ್ದುಪಡಿ ಮಾಡಲು ಮುಂದಾಗಿದೆ. 

ಸ್ವಂತ ಕಾರುಗಳನ್ನು ಹೊಂದಿಲ್ಲದ ಎಲ್ಲಾ ಗೆಜೆಟೆಡ್ ಹಾಗೂ ನಾನ್ ಗೆಜೆಟೆಡ್ ಸರ್ಕಾರಿ ನೌಕರರು ರೈಲಿನ ಸಂಪರ್ಕವಿಲ್ಲದ ಸ್ಧಳಗಳ ನಡುವೆ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಿಂದಾಗಿ ಸರ್ಕಾರಿ ಬಸ್ಸುಗಳ ಮೂಲಕ ಪ್ರಯಾಣಮಾಡುತ್ತಿದ್ದು, ಇವರಿಗೆ ಸುಧಾರಿತ ಸುವಿಹಾರಿ ಬಸುಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. 

ಇದಕ್ಕಾಗಿ ರಾಜ್ಯ ನಾಗರಿಕ ಸೇವಾ ನಿಯಮಾವಳಿಗಳ ನಿಯಮ ೪೮೫ ಟಿಪ್ಪಣಿಗೆ ಮತ್ತು ನಿಯಮ ೫೪೯ [೧೪][ಬಿ]ಗಳಿಗೆ ತಿದ್ದುಪಡಿಗಳನ್ನು ತರಲಾಗುವುದೆಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 

೨೦,೦೨೫ ರೂ ಅಥವಾ ಅದಕ್ಕೂ ಮೇಲ್ಪಟ್ಟು ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಭಾರತದ ಒಳಗಡೆ ಹವಾನಿಯಂತ್ರಿತ/ಹವಾನಿಯಂತ್ರಿತ ಸ್ಲೀಪರ್ ವೋಲ್ವೋ/ ಹವಾನಿಯಂತ್ರಿತ ಕರೋನಾ ಸ್ಲೀಪರ್ ಕ್ಲಾಸ್‌ಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗುತ್ತಿದೆ. 

೧೭,೨೫೦ ರೂ ಮೇಲ್ಪಟ್ಟು ಹಾಗೂ ೨೦,೦೨೫ ರೂಗಿಂತ ಕಡಿಮೆ ವೇತನ ಪಡೆಯುತ್ತಿರುವವರು ಹವಾನಿಯಂತ್ರಿತ ವೋಲ್ವೋ/ಹವಾನಿಯಂತ್ರಿ ಕರೋನಾ / ಶೀತಲ್ ವಾಹನಗಳಲ್ಲಿ ಸಂಚರಿಸಲು ಅವಕಾಶವಿದೆ. 

೧೧,೧೦೦ ರೂ ರಿಂದ ೧೭,೨೪೯ ರೂ ವರೆಗಿನ ವೇತನ ಶ್ರೇಣಿ ಪಡೆಯುತ್ತಿರುವ ವೇತನದಾರರು ಹವಾನಿಯಂತ್ರಿತ ವೋಲ್ವೋ/ಶೀತಲ್/ರಾಜಹಂಸ ವಾಹನಗಳಲ್ಲಿ ಹಾಗೂ ೮೦೦೦ ದಿಂದ ೧೧,೦೯೯ ರೂ ವೇತನ ಶ್ರೇಣಿಯವರಿಗೆ ರಾಜಹಂಸ, ಸೆಮಿಡಿಲಕ್ಸ್ ಮತ್ತು ೮೦೦೦ ರೂಗಿಂತ ಕಡಿಮೆ ವೇತನ ಪಡೆಯುತ್ತಿರುವವರಿಗೆ ಸೆಮಿಡಿಲಕ್ಸ್/ಕರ್ನಾಟಕ ಸಾರಿಗೆ ವೇಗ ದೂತ, ಮತ್ತು ಇತರೆ ಸಾಮಾನ್ಯ ದರ್ಜೆಯಡಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. 


Share: