ಉಡುಪಿ: ಪ್ರಾದೇಶಿಕ ಸಾರಿಗೆ ಕಛೇರಿ ೨೦೦೯-೧೦ ರ ಆರ್ಥಿಕ ವರ್ಷದಲ್ಲಿ ವಿವಿಧ ವರ್ಗದ ಒಟ್ಟು ೧೭,೮೫೦ ವಾಹನಗಳು ಹೊಸದಾಗಿ ನೋಂದಣಿಯಾಗಿದ್ದು, ಮಾರ್ಚ್ ಅಂತ್ಯಕ್ಕೆ ೧,೭೧,೧೫೨ ವಾಹನಗಳು ಜಿಲ್ಲೆಯಲ್ಲಿ ಓಡಾಡುತ್ತಿವೆ.
ಈ ಕಚೇರಿಗೆ ೨೦೦೯-೧೦ ರ ಆರ್ಥಿಕ ವರ್ಷದಲ್ಲಿ ಕಛೇರಿಗೆ ೩೮೦೭ ಲಕ್ಷ ರೂಗಳ ರಾಜಸ್ವ ಣಾ ಗುರಿ ನಿಗಧಿಪಡಿಸಿದ್ದು ಈ ಅವಧಿಯಲ್ಲಿ ೪೩೨೦.೬೬ ಲಕ್ಷ ರೂಗಳನ್ನು ಸಂಗ್ರಹಿಸಿ ಶೇಕಡಾ ೧೧೩,೫೯ ಗುರಿ ಮೀರಿದ ಸಾಧನೆ ಮಾಡಲಾಗಿದೆ.
ಆರ್ಥಿಕ ವರ್ಷದಲ್ಲಿ ಒಟ್ಟು ೧೬೫೩೬ ವಾಹನಗಳನ್ನು ತಪಾಸಣೆ ನಡೆಸಿ ೨೯೧೬ ವಾಹನಗಳ ವಿರುದ್ದ ತಪಾಸಣಾ ವರದಿಯನ್ನು ನೀಡಿ ೯೫ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವರ್ಷದಲ್ಲಿ ರಾಜಿದಂಡ ರೂ. ೪೭,೨೦,೩೮೦/- ತೆರಿಗೆ ೧೪,೨೦,೮೭೦/- ಒಟ್ಟು ರೂ. ೬೧,೪೧,೨೫೦/- ರಾಜಸ್ವ ಸಂಗ್ರಹಿಸಿದೆ. ರಸ್ತೆ ಸುರಕ್ಷತೆ ಬಗ್ಗೆ ಅರಿವು ಹಾಗೂ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಸಾರ್ವಜನಿಕ ವಲಯದಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ವಾಹನ ಮಾಲಕರು/ಚಾಲಕರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ವಾಹನವನ್ನು ಚಲಾಯಿಸುವಾಗ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿರಬೇಕು. ದಾಖಲೆಗಳ (ಇನ್ಸ್ಯೂರೆನ್ಸ್ , ಹೊಗೆ ಸರ್ಟಿಫಿಕೇಟ್, ಚಾಲನಾ ಅನುಜ್ಞಾ ಪತ್ರ ಹಾಗೂ ನೊಂದಣಿ ಪತ್ರ) ವಾಯಿದೆಯನ್ನು ಸ್ವತ: ಪರಿಶೀಲಿಸಿ, ವಾಯಿದೆ ಮೀರಿದ್ದಲ್ಲಿ ನವೀಕರಿಸಿಟ್ಟುಕೊಳ್ಳಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ವಾಹನವನ್ನು ಚಲಾಯಿಸುವಾಗ ಮೊಬೈಲ್ ಬಳಸಬೇಡಿ, ರಸ್ತೆ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಡೆಗಟ್ಟುವಲ್ಲಿ ಸಹಕರಿಸಬೇಕೆಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಎಚ್.ಎನ್. ರಮೇಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.