ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಗದಗ : ಹಿಂಜರಿಕೆ ತೊರೆದು ಹೋರಾಡಲು ಮಹಿಳೆಯರಿಗೆ ಕರೆ

ಗದಗ : ಹಿಂಜರಿಕೆ ತೊರೆದು ಹೋರಾಡಲು ಮಹಿಳೆಯರಿಗೆ ಕರೆ

Thu, 11 Mar 2010 18:07:00  Office Staff   S.O. News Service

ಕಲೆ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿ ಅಸಾಧಾರಣ ಪ್ರತಿಭೆ ಸಾಧಿಸಿದ ೮ ಜನ ಮಕ್ಕಳಿಗೆ ತಲಾ ೧೦ ಸಾವಿರ ರೂ.ಗಳ ಚೆಕ್ ನೀಡಿ ಸನ್ಮಾನ

 

ಗದಗ (ಕರ್ನಾಟಕ ವಾರ್ತೆ) ಮಾಚ್ ೧೧ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿದ್ದು, ಮಹಿಳೆಯ ಹಿಂಜರಿಕೆ ತೊರೆದು ತಮ್ಮ ಹಕ್ಕಿಗಾಗಿ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಬಸವರೆಡ್ಡೇರ ಕರೆ ನೀಡಿದರು.

 

 

ಅವರು ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಚೇಂಬರ್ ಆಫ್ ಕಾಮರ್ಸ ಸಭಾಭವನದಲ್ಲಿ ಆಯೋಜಿಸಲಾಗಿದ್ದ, ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಹಿಳೆ ಎಲ್ಲ ರಂಗಗಳಲ್ಲಿ ಮುಂದೆ ಇದ್ದರೂ ಕೂಡ ಅವಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯವನ್ನು ಖಂಡಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳಿದರು ಕೇವಲ ಬೆರಳೆನಿಕೆಯಷ್ಟು ಮಹಿಳೆಯರು ಮುಂದೆ ಬಂದರೆ ಸಾಲದು ಎಲ್ಲ ಮಹಿಳೆಯರು ಹೋರಾಟ ಮನೋಭಾವ ಬೆಳಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

 

 

ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ-ಬೆಟಗೇರಿ ನಗರಸಭಾ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಉಗಲಾಟದ ಮಾತನಾಡಿ, ಮಹಿಳಾ ಮೀಸಲಾತಿಯಲ್ಲಿ ಶೇ.೩೩ ರಷ್ಟು ಮೀಸಲಾತಿ ದೊರೆಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಮಹಿಳೆಯರು ತನ್ನನ್ನು ತಾನು ಕುಟುಂಬದ ಜವಾಬ್ದಾರಿ ಹೊರುವ ಕೆಲಸವಷ್ಟೇ ಬೆಳಸಿಕೊಳ್ಳದೇ ಆಡಳಿತ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಶ್ರೀಮತಿ ಪುಷ್ಪಾ ಕೊರವನವರ ಹಾಗೂ ಶ್ರೀಮತಿ ಪದ್ಮಾವತಿ ತೇಲಕರ ಮಾತನಾಡಿ, ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕರ್ತವ್ಯ ಶಕ್ತಿಯಿಂದ ಸ್ವಾವಲಂಬನೆ ಕೂಡಿಸಿಕೊಂಡು ಸುಖೀ ಸಮಾಜ ನಿರ್ಮಾಣಕ್ಕೆ ಮುಂದಾಗಲು ಕರೆ ನೀಡಿದರು. ವಿಚಾರ ಸಂಕಿರಣದಲ್ಲಿ ಬದಲಾವಣೆಯಾಗುತ್ತಿರುವ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಕುರಿತು ಡಾ|| ಲಕ್ಷ್ಮೀದೇವಿ ಗವಾಯಿ, ಹೆಣ್ಣು ಭ್ರೂಣ ಹತ್ಯೆ ಪಿ‌ಎನ್‌ಡಿಟಿ ಕಾಯ್ದೆ ಕೌಟುಂಬಿಕ ದೌರ್ಜನ್ಯ ಕಾಯ್ದೆ, ಮಹಿಳೆಯರ ಸಂರಕ್ಷಣೆ ಕಾಯ್ದೆ ಕುರಿತು ಶ್ರೀಮತಿ ಹೇಮಾ ಸುತ್ತಕೋಟಿ, ಲಿಂಗ ಸಂವೇಧನೆ ಮತ್ತು ಮಹಿಳಾ ಸಬಲೀಕರಣ ಕುರಿತು ಶ್ರೀ ಶ್ರೀಧರ ತಟ್ಟಿ, ಇಲಾಖೆ ವಿವಿಧ ಯೋಜನೆಗಳ ಕುರಿತು ಶ್ರೀಮತಿ ಸರೋಜಿನಿ ಕಡೇಮನಿ ಉಪನ್ಯಾಸ ನೀಡಿದರು.

 

ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ನಬಾರ್ಡ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಈ ವಿಚಾರ ಸಂಕಿರಣದಲ್ಲಿ ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಸರೋಜಿನಿ ಕಡೇಮನಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

 

ಇದೇ ಸಂದರ್ಭದಲ್ಲಿ ಕಲೆ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿ ಅಸಾಧಾರಣ ಪ್ರತಿಭೆ ಸಾಧಿಸಿದ ೮ ಜನ ಮಕ್ಕಳಿಗೆ ತಲಾ ೧೦ ಸಾವಿರ ರೂ.ಗಳ ಚೆಕ್ ನೀಡಿ ಸನ್ಮಾನಿಸಲಾಯಿತು.

 

ಕಾರ್‍ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ಶ್ರೀಮತಿ ಅನ್ನಪೂರ್ಣ ಚಲವಾದಿ ನರಗುಂದ ಹಾಗೂ ಗದಗ, ಶಿರಹಟ್ಟಿ ತಾಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತಿರಿದ್ದರು ಕಾರ್‍ಯಕ್ರಮದಲ್ಲಿ ಶ್ರೀಶಕ್ತಿ ಸಂಘಗಳ ಸದಸ್ಯರು ಹಾಗೂ ಅಂಗನವಾಡಿ ಕಾರ್‍ಯಕರ್ತೆಯರು ಭಾಗವಹಿಸಿದ್ದರು.

 


Share: