ಬಂಟ್ವಾಳ, ನವೆಂಬರ್ 23:ಯುವತಿಯರನ್ನು ಹತ್ಯೆಗೈದಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ ನವೆಂಬರ್ ೨೪ ರ ಮಂಗಳವಾರ ಬಿಸಿರೋಡಿನಲ್ಲಿ ಬೃಹತ್ ಸಾರ್ವಜನಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಮೋಹನನಿಗೆ ೨ಂ ಯುವತಿಯರು ಬಲಿಆಗುವ ತನಕ ಪೋಲಿಸರು ನಿರ್ಲಿಪ್ತರಾಗಿದ್ದರು. ಅವರ ನಿರ್ಲಕ್ಷ್ಯದಿಂದಲೇ ಸಮಾಜದಲ್ಲಿ ಅನ್ಯಾಯ ಹೆಚ್ಚುತಿದ್ದು, ಮೋಹನ ಅಟ್ಟಹಾಸ ಜಡ್ಡುಕಟ್ಟಿದ ಪೋಲಿಸ್ ಇಲಾಖೆಯ ನಿಷ್ಕ್ರಿಯತೆಗೆ ಜ್ವಲಂತ ಸಾಕ್ಷಿ ಎಂದು ಸಂಘಟನೆ ಆರೋಪಿಸಿದೆ.
ಪೋಲಿಸರಿಂದ ಸದ್ರಿ ಪ್ರಕರಣದ ಯಶಸ್ವೀ ತನಿಖೆ ಅಸಾಧ್ಯವಾಗಿದ್ದು ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಿಂದಲೇ ಪ್ರಕರಣದ ತನಿಖೆ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು ಎಂದಿರುವ ಸಂಘಟನೆ ಪ್ರಮುಖರು ,ಮಾನವತೆಯನ್ನು ಪ್ರೀತಿಸುವ ಎಲ್ಲಾ ಸಾರ್ವಜನಿಕರು ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ನಡೆಯುವ ಈ ಸಾರ್ವಜನಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.