ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಜೇಶ್ವರ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ.

ಮಂಜೇಶ್ವರ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ.

Wed, 10 Feb 2010 17:06:00  Office Staff   S.O. News Service

ಮಂಜೇಶ್ವರ ಫೆಬ್ರವರಿ 10: ಕಳೆದ ಸೋಮವಾರ ಕೆಲಸಕ್ಕೆಂದು ಮನೆಯಿಂದ ತೆರಳಿ ಬಳಿಕ ನಾಪತ್ತೆಯಾಗಿದ್ದ ಯುವಕನ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಪೈವಳಿಕೆ ಲಾಲ್‌ಬಾಗ್ ಎಂಬಲ್ಲಿನ ಕೃಷ್ನ ನಾಯಕ್‌ರ ಪುತ್ರ ರಾಮನಾಯ್ಕ್(೩೫) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿದ್ದ ರಾಮನಾಯ್ಕ್ ಗಾಗಿ ಹುಡುಕಾಡಿದ ವೇಳೆ ಮನೆ ಸಮೀಪದ ಬಾವಿ ಬಳಿ ಚಪ್ಪಲಿಯೊಂದು ಪತ್ತೆಯಾಗಿದ್ದು. ಈ ಹಿನ್ನಲೆಯಲ್ಲಿ ಬಾವಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಯಿತು. ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕ ದಳದ ಸಹಾಯದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಮಂಗಲ್ಪಾಡಿ ಸಿ.ಎಚ್ಚ್.ಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮನೆಯವರಿಗೆ ಬಿಟ್ಟು ಕೊಡಲಾಯಿತು.

 

 

 

ಮೊಬೈಲ್ ಅಂಗಡಿಯಿಂದ ಕಳವುಗೈದ ಆರೋಪಿ ಕುಂಬಳೆ ಪೋಲೀಸ್ ಕಸ್ಟಡಿಗೆ.

 

 

ಕುಂಬಳೆ ಮೀನು ಮಾರುಕಟ್ಟೆ ಬಳಿಯ ಎಂ.ಎಂ.ಕೆ ಕಮ್ಮೂನಿಕೇಶನ್ ಎಂಬ ಮೊಬೈಲ್ ಅಂಗಡಿಯಿಂದ ೨೦೦೯ ಎಪ್ರಿಲ್ ೨೪ ಮೊಬೈಲ್ ಸೇರಿದಂತೆ ೧.೩೩.೫೨೫ ರೂ ಮೌಲ್ಯದ ಸೊತ್ತನ್ನು ಕಳುವುಗೈದ ಪ್ರಕರಣದ ಎಂಟನೇ ಆರೋಪಿಯನ್ನು ಉಡುಪಿ ಸಬ್ ಜೈಲಿನಿಂದ ಕಾಸರಗೋಡು ಸಿ.ಜೆ.ಎಂ ನ್ಯಾಯಾಲಯದ ಆದೇಶದಂತೆ ಕುಂಬಳೆ ಪೋಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ . ತಮಿಲ್ನಾಡಿನ ಕೊಲ್ಲಂಗೋಡು ವಿಜಿಲ್ಕುಮಾರ್(೨೭) ಪೋಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯಾಗಿದ್ದಾನೆ. ಈತ ಉಡುಪಿಯಲ್ಲಿ ಕಳವು ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದನು.

ಆರಿಫ್ ಮಚ್ಚಂಪಾಡಿ, ಮಂಜೇಶ್ವರ 

 


Share: