ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಹಡಪಾದ ಕುಟುಂಬಕ್ಕೆ ಹೆಸ್ಕಾಂ ನೌಕರರು ಹಾಗೂ ಗುತ್ತಿಗೆದಾರರಿಂದ ಧನಸಹಾಯ

ಭಟ್ಕಳ:ಹಡಪಾದ ಕುಟುಂಬಕ್ಕೆ ಹೆಸ್ಕಾಂ ನೌಕರರು ಹಾಗೂ ಗುತ್ತಿಗೆದಾರರಿಂದ ಧನಸಹಾಯ

Fri, 15 Jan 2010 03:39:00  Office Staff   S.O. News Service
ಭಟ್ಕಳ, ಜನವರಿ 15: ಕೆಲಸದಲ್ಲಿರುವಾಗಲೇ ವಿದ್ಯುತ್ ಕಂಬದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಮಾವಳ್ಳಿ ಗ್ರಾಮಪಂಚಾಯತನ ಹಂಗಾಮಿ ನೌಕರ ಸಿದ್ಧಲಿಂಗ ಹಡಪಾದನ ಬಡ ಕುಟುಂಬಕ್ಕೆ ಭಟ್ಕಳ ಹೆಸ್ಕಾಂ ನೌಕರರು ಹಾಗೂ ಗುತ್ತಿಗೆದಾರರು ೧೬೦೫೦ರೂಪಾಯಿ ಧನ ಸಂಗ್ರಹಿಸಿ ನೀಡಿದರು.
 
ಈ ಸಂದರ್ಭದಲ್ಲಿ ಮಾವಳ್ಳಿ ಗ್ರಾಮಪಂಚಾಯತ ಅಧ್ಯಕ್ಷೆ ನಾಗರತ್ನ ಪಡಿಯಾರ, ಉಪಾಧ್ಯಕ್ಷ ದೇವಿದಾಸ ಗುಡಿಗಾರ, ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಠಾಣ್, ಪಂಚಾಯತ ಸದಸ್ಯರಾದ ಮೋಹನ ನಾಯ್ಕ, ದಾಮ್ದಾ ಮೀರಾ, ಮಾದೇವ ನಾಯ್ಕ, ಗೋವಿಂದ ದೇವಾಡಿಗ, ಭಟ್ಕಳ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಷ್ಣು ನಾಯ್ಕ, ಮಾಜಿ ಉಪಾಧ್ಯಕ್ಷ ದಾಮೋದರ, ಹೆಸ್ಕಾಂ ನೌಕರರ ಯೂನಿಯನ್ ಅಧ್ಯಕ್ಷ ರಮೇಶ್ ಮುಂತಾದವರು ಉಪಸ್ಥಿತರಿದ್ದರು. ಸಿದ್ಧಲಿಂಗ ಪತ್ನಿ ಮಂಜುಳಾ ಹಣವನ್ನು ಸ್ವೀಕರಿಸಿದರು. ಸ್ಥಳೀಯ ಮೀನುಗಾರ ಸಂಘದವರು ಈಗಾಗಲೇ ಹಡಪಾದ ಕುಟುಂಬಕ್ಕೆ ೨೦,೦೦೦ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.



Share: