ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ:ರಾಷ್ಟ್ರೀಯ ಹೆದ್ದಾರಿ ಬಂದ್: ಉಡುಪಿ ಜಿಲ್ಲೆಯಲ್ಲಿ ಯಶಸ್ವಿ; ದ.ಕ.ದಲ್ಲಿ ಮಿಶ್ರ ಪ್ರತಿಕ್ರಿಯೆ

ಉಡುಪಿ:ರಾಷ್ಟ್ರೀಯ ಹೆದ್ದಾರಿ ಬಂದ್: ಉಡುಪಿ ಜಿಲ್ಲೆಯಲ್ಲಿ ಯಶಸ್ವಿ; ದ.ಕ.ದಲ್ಲಿ ಮಿಶ್ರ ಪ್ರತಿಕ್ರಿಯೆ

Sun, 24 Jan 2010 02:58:00  Office Staff   S.O. News Service

ಉಡುಪಿ, ಜ.೨೩: ಕರಾವಳಿಯ ಮೂರು ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ೯ ಬೇಡಿಕೆ ಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನ ಸೆಳೆಯಲು ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಇಂದು ಹಮ್ಮಿಕೊಳ್ಳಲಾದ ರಾಷ್ಟ್ರೀಯ ಹೆದ್ದಾರಿ ಬಂದ್ ಶಾಂತಿಯುತವಾಗಿ ಮುಕ್ತಾಯ ಗೊಂಡಿತು.

ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೪೮, ೧೩, ೧೭, ೬೩ ಹಾಗೂ ೨೦೬ನ್ನು ಇಂದು ಬಂದ್ ನಡೆಸಲಾಗಿದ್ದು, ಈ ಮಾರ್ಗದಲ್ಲಿ ಬಸ್ಸು, ಲಾರಿ ಸೇರಿದಂತೆ ಯಾವುದೇ ವಾಹನಗಳ ಚಲಿಸದೇ ಬಂದ್ ಅತ್ಯಂತ ಯಶಸ್ವಿಯಾಯಿತು ಎಂದು ಸಮಿತಿಯ ಸಂಚಾಲಕ ಬಿ. ಗೋವಿಂದರಾಜ ಹೆಗ್ಡೆ ಬ್ರಹ್ಮಾವರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬಂದ್‌ಗೆ ಬಸ್ಸು, ಟ್ಯಾಕ್ಸಿ, ರಿಕ್ಷಾ ಮಾಲಕರು, ಚಾಲಕರ ಸಂಘಗಳು ಬೆಂಬಲ ಘೋಷಿಸಿದ್ದರಿಂದ ಹೆಚ್ಚಿನ ಯಾವುದೇ ವಾಹನಗಳು ಇಂದು ಹೆದ್ದಾರಿಗೆ ಇಳಿಯಲಿಲ್ಲ. ಜಿಲ್ಲೆಯ ಎಕ್ಸ್‌ಪ್ರೆಸ್ ಹಾಗೂ ಸರ್ವಿಸ್ ಬಸ್ ಗಳೂ ರಸ್ತೆಗಿಳಿಯಲಿಲ್ಲ. ಹೆದ್ದಾರಿ ಹೊರತು ಪಡಿಸಿ, ಒಳರಸ್ತೆಗಳಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ವಿದ್ದರೂ, ಬಸ್‌ಗಳು ಅಲ್ಲೂ ಸಂಚಾರ ನಡೆಸದೇ ಬಂದ್‌ನಲ್ಲಿ ಭಾಗಿಯಾದವು.

ಕಾರವಾರದಿಂದ ಮಂಗಳೂರಿ ನವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕೂ ಒಟ್ಟು ೪೭ ಜಂಕ್ಷನ್‌ಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ಆದರೆ ಎಲ್ಲಿಂದಲೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಗೋವಿಂದರಾಜ್ ಹೇಳಿದರು.

23-kun02.jpg

23-kun04.jpg

23-kun05.jpg

23-kun06.jpg

23-kun07.jpg 

 


ರಸ್ತೆಯಲ್ಲಿ ಕ್ರಿಕೆಟ್: ಉಡುಪಿ ಮತ್ತು ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಈ ಹಿಂದೆ ನಡೆದಿದ್ದವಾದರೂ, ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಹೆದ್ದಾರಿ ಬಂದ್ ಇದೇ ಮೊದಲು ಎಂದು ಜನರು ಅಭಿಪ್ರಾಯ ಪಟ್ಟರು. ಕಾರವಾರದಲ್ಲಿ ಬೆಳಗ್ಗೆ ಎಂಟು ಗಂಟೆಗೆ ಹೆದ್ದಾರಿ ಮೇಲೆ ಯಾವುದೇ ವಾಹನ ಚಲಿಸದಂತೆ ನೋಡಿಕೊಳ್ಳಲಾಯಿತು ಎಂದು ತಿಳಿದುಬಂದಿದೆ. ಇದೇ ಪರಿಸ್ಥಿತಿ ಹೊನ್ನಾವರ, ಕುಮಟಾ, ಭಟ್ಕಳದಲ್ಲೂ ಇತ್ತು ಸಮಿತಿ ಮೂಲಗಳು ತಿಳಿಸಿವೆ.

ಸುಮಾರು ಒಂಬತ್ತು ಗಂಟೆಯ ವರೆಗೆ ಬೆಂಗಳೂರು ಸೇರಿದಂತೆ ದೂರದೂರುಗಳಿಂದ ಬಂದ ಬಸ್ಸು ಗಳಿಗೆ ಗಮ್ಯಸ್ಥಾನ ಸೇರಲು ಅವಕಾಶ ನೀಡಲಾಯಿತು. ಆದರೆ ಬಳಿಕ ರಸ್ತೆ ಯಲ್ಲಿ ಆಗಾಗ ಸಂಚರಿಸುವ ರಿಕ್ಷಾ ಹಾಗೂ ಬೈಕ್, ಸ್ಕೂಟರ್‌ಗಳಿಗೆ ತಡೆ ಒಡ್ಡಿ, ಒಳರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗುತ್ತಿತ್ತು. 

ಹೀಗಾಗಿ ಹತ್ತು ಗಂಟೆ ಸುಮಾರಿಗೆ ಉಡುಪಿಯಿಂದ ಕುಂದಾಪುರದವರೆಗೆ  ರಾಷ್ಟ್ರೀಯ ಹೆದ್ದಾರಿ ನಿರ್ಜನವಾಗಿತ್ತು. ಉಡುಪಿಯ ಕರಾವಳಿ ಬೈಪಾಸ್, ಬ್ರಹ್ಮಾವರ ಬೈಪಾಸ್, ಆಕಾಶವಾಣಿ ಸರ್ಕಲ್, ಸಾಸ್ತಾನ ಪೇಟೆಯಲ್ಲಿ ಮಕ್ಕಳು ಹೆದ್ದಾರಿಯನ್ನು ಕ್ರಿಕೆಟ್ ಪಿಚ್ ಆಗಿ ಮಾಡಿಕೊಂಡು ಕ್ರಿಕೆಟ್ ಆಡಿದರು. ಇನ್ನು ಕೆಲವರು ವಾಲಿಬಾಲ್, ಕುಟ್ಟಿದೊಣ್ಣೆಯನ್ನೂ ಇಲ್ಲೇ ಆಡಿ ಕುಣಿದರು.

ಹೆದ್ದಾರಿ ಬಂದ್ ಬಗ್ಗೆ ಸಾಕಷ್ಟು ಮುಂಚಿತವಾಗಿ ಸೂಚನೆ ನೀಡಿದ್ದರಿಂದ ರಸ್ತೆ ಬದಿಯಲ್ಲಿ ಸರಕು ಲಾರಿಗಳನ್ನು ಉದ್ದದ ಸರತಿ ಸಾಲಿನಲ್ಲಿ ನಿಲ್ಲಿಸಲಾ ಗಿತ್ತು. ಒಮ್ಮೆ ಬಂದ್ ಹಿಂದೆಗೆದು ಕೊಳ್ಳುತಿದ್ದಂತೆ ಇವುಗಳು ಮೈಲುಗಳು ದ್ದದಲ್ಲಿ ಸಂಚರಿಸುತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೋಟ ಬಸ್ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದ ಎರಡು ಖಾಸಗಿ ಬಸ್ಸುಗಳನ್ನು , ಹುಬ್ಬಳ್ಲಿ ಮತ್ತು ಉತ್ತರ ಕರ್ನಾಟಕದ ಕಡೆಯಿಂದ ಉಡುಪಿ ಯತ್ತ ಬರುತ್ತಿದ್ದ ಬಸ್ಸುಗಳನ್ನು ತಡೆದು ನಿಲ್ಲಿಸಿದ್ದು, ಅದರಲ್ಲಿದ್ದ ಪ್ರಯಾಣಿಕರು ಪರದಾಡುತಿದ್ದ ದೃಶ್ಯ ಕಂಡುಬಂತು.

ಮಂಗಳೂರು, ಜ.೨೩: ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕರಾವಳಿ ಪ್ರದೇಶದ ಪ್ರಮುಖ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಇಂದು ಬೆಳಗ್ಗೆ ೬ ಗಂಟೆ ಯಿಂದ ಸಂಡೆಯವರೆಗೆ ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿ ನೀಡಿz ರಾಷ್ಟಚ್ರೀಯ ಹೆದ್ದಗಾರಿ ಬಂದ್‌ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೭, ೧೩, ೪೮, ೨೦೬, ೬೩ರಲ್ಲಿ  ರಸ್ತೆ ತಡೆಗಳು ನಡೆದಿದ್ದು, ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು ೭೫ ಮಂದಿ ಪ್ರತಿಭಟನಾಕಾರರನ್ನು  ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದ್ದಾರೆ. 

ಮಂಗಳೂರಿನ ನಂತೂರಿನಲ್ಲಿ ಡಿವೈ‌ಎಫ್‌ಐ ಹಾಗೂ ಪಂಪ್‌ವೆಲ್ ಸುಮಾರು ೩೦ರಷ್ಟು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು, ಕೊಟ್ಟಾರ ಹಾಗೂ ಕುಳಾಯಿಯಲ್ಲಿ  ಹಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.
 
ಬೆಳಗ್ಗಿನ ಹೊತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರಳ ಸಂಖ್ಯೆಯಲ್ಲಿ ಓಡುತ್ತಿದ್ದ ವಾಹನ ಸಂಚಾರ ಮಧ್ಯಾಹ್ನದ ವೇಳೆಗೆ ಹೆಚ್ಚಿನ ಪ್ರಮಾಣಕ್ಕೆ ತಲುಪಿತು. ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಮಂಗಳೂರು ಬಿ.ಸಿ.ರೋಡು ನಡುವೆ ಕೆಲಕಾಲ ಸಂಚಾರ ವಿಳಂಬಗೊಂಡಿತ್ತು. ಪಂಪ್‌ವೆಲ್ ಬಳಿ ಬೆಳಗ್ಗಿನ ಹೊತ್ತು ಪ್ರತಿಭಟನಾಕರರ ಪ್ರದರ್ಶನದಿಂದಾಗಿ ಸಂಚಾರಕ್ಕೆ ಅಡಚಣೆಯಾಗಿತ್ತು. ನಗರದ ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ಬಸ್‌ಸಂಚಾರ ಸ್ಥಗಿತ ಗೊಂಡು ಪ್ರಯಾಣಿಕರು, ಕಚೇರಿಗೆ ಬರುವವರು ಪರದಾಡಬೇಕಾಯಿತು.

ಹಲವು ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ವಿರಳ ಜನಸಂಖ್ಯೆ ಕಂಡು ಬಂತು. ಸಾರ್ವಜನಿಕರ ಸಂಖ್ಯೆ ಸರಕಾರಿ ಕಚೇರಿಗಳಲ್ಲಿ ಅತ್ಯಂತ ಕನಿಷ್ಠ ಪ್ರಮಾಣದಲ್ಲಿತ್ತು. ಶಾಲಾ ಕಾಲೇಜು ಗಳಲ್ಲೂ ಹಾಜರಾತಿ ಕುಂಠಿತಗೊಂಡಿತ್ತು. 

ಸರಕಾರಿ ಬಸ್ಸುಗಳ ಓಡಾಟ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಳಗ್ಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಕೆ‌ಎಸ್‌ಆರ್‌ಟಿಸಿ ಹಾಗೂ ಕೇರಳ ರಾಜ್ಯ ಸರಕಾರದ ಬಸ್ಸುಗಳ ಸಂಚಾರಕ್ಕೆ ತಡೆ ಉಂಟಾಗಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

 

ಚಿತ್ರಗಳು: ಇಬ್ರಾಹಿಂ, ಗಂಗೊಳ್ಳಿ


Share: