ಪತ್ರಿಕಾ ಪ್ರಕಟಣೆ
ಕುಂದಾಪುರ, ಅಕ್ಟೋಬರ್ 16: ಕುಂದಾಪುರ ತಾಲ್ಲೂಕು ಸೌಹಾರ್ದ ವೇದಿಕೆ ನಾಳೆ, ಶನಿವಾರ ಸಂಜೆ ಆರು ಘಂಟೆಗೆ ಸ್ಥಳೀಯ ಬಿ.ಆರ್. ರಾಯರ ಹಿಂದೂ ಪ್ರಾಥಮಿಕ ಶಾಲಾ ಆವರಣದಲ್ಲಿ ’ಸೌಹಾರ್ದ ದೀಪಾವಳಿ’ ಎಂಬ ಕಾರ್ಮಕ್ರಮವನ್ನು ಹಮ್ಮಿಕೊಂಡಿದೆ.
ಕುಂದೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ. ಎಚ್. ವಿ. ನರಸಿಂಹಮೂರ್ತಿ, ಹೋಲಿ ರೋಸರಿ ಚರ್ಚ್ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿ’ಸೋಜಾ, ಕಂಡ್ಲೂರು ಖತೀಬ್ ಜುಮ್ಮಾ ಮಸೀದಿಯ ಧರ್ಮಗುರು ಮೌಲಾನಾ ಮೊಹಮ್ಮದ್ ಇಲಿಯಾಸ್ ನದ್ವಿ ಮೊದಲಾದವರು ಸೌಹಾರ್ದ ಸಂದೇಶ ನೀಡಲಿದ್ದು ಚಿಂತಕಿ ಮತ್ತು ಭಂಡಾರ್ಕರ್ಸ್ ಕಾಲೇಜಿಜ ಪ್ರಾಧ್ಯಾಪಕಿ ರೇಖಾ ಬನ್ನಾಡಿಯವರು ಸೌಹಾರ್ದ ಆಶಯ ಭಾಷಣ ನೀಡಲಿದ್ದಾರೆ.
ಸೌಹಾರ್ದ ಪ್ರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೌಹಾರ್ದತೆಯನ್ನು ಮೆರಯಬೇಕೆಂದು ಸೌಹಾರ್ದ ವೇದಿಕೆಯ ಪ್ರಧಾನ ಸಂಚಾಲಕ ಶಶಿಧರ ಹೆಮ್ಮಾಡಿಯವರು ವಿನಂತಿಸಿಕೊಂಡಿದ್ದಾರೆ.