ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಂದಾಪುರ: ಅರಣ್ಯಾಧಿಕಾರಿಗಳಿಂದ ಅನಾಗರಿಕ ದಾಳಿ

ಕುಂದಾಪುರ: ಅರಣ್ಯಾಧಿಕಾರಿಗಳಿಂದ ಅನಾಗರಿಕ ದಾಳಿ

Sun, 07 Feb 2010 19:39:00  Office Staff   S.O. News Service
ಕುಂದಾಪುರ: ಸರಕಾರಿ ಅರಣ್ಯ ಭೂಮಿ ಎಂಬ ನೆಲೆಯಲ್ಲಿ ಕೊಲ್ಲೂರು ಪರಿಸರದ ಅರಣ್ಯಾಧಿಕಾರಿಗಳು ಸುಮಾರು 34 ವಾಹನಗಳಲ್ಲಿ ಗುಡಿಸಲೊಂದಕ್ಕೆ ದಾಂಗುಡಿಯಿಟ್ಟು ಹೆಂಗಸರನ್ನು ಹೊರಗೆ ದಬ್ಬಿದಲ್ಲದೆ ಪುಟ್ಟ ಅನಾರೋಗ್ಯ ಪೀಡಿತ ಮಗುವನ್ನು ಕೂಡಾ ಕರುಣೆಯಿಲ್ಲದೆ ತಳ್ಳಿ ಅನಾಗರಿಕರಂತೆ ವರ್ತಿಸಿ ಗುಡಿಸಲನ್ನು ಧ್ವಂಸ ಗೊಳಿಸಿದ ಕಳವಳಕಾರಿ ಪ್ರಕರಣ ಕೊಲ್ಲೂರು ಸಮೀಪ ಸುಭಾಸ್‌ ತಪ್ಪಲು ಎಂಬಲ್ಲಿ ನಿನ್ನೆ ನಡೆದಿದೆ.

ಶಾರದಾ, ಲಲಿತಾ ಸೇರಿದಂತೆ ಇತ್ತೀಚೆಗೆ ಶಸ್ತ್ರಕ್ರಿಯೆಗೆ ಒಳಗಾಗಿರುವ ನಂದ ಕುಮಾರ್‌ (3) ಮಗು ಸೇರಿರುವ ಕುಟುಂ ಬವೊಂದು ಕಳೆದ 15 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಾಗಿದ್ದು, ಅಲ್ಲಿಂದ 200 ಮೀ. ಆಕ್ರಮಿತ ಜಾಗದಲ್ಲಿ ಅವರು ಗುಡಿಸಲೊಂದನ್ನು ಇತ್ತೀಚೆಗೆ ಕಟ್ಟಿದರೆನ್ನ ಲಾಗಿದೆ. ಆದರೆ ಈ ವಿಷಯ ರಾಜಕೀಯ ವರ್ತುಲದಲ್ಲಿ ಬೆರೆತು ಹೋದುದರಿಂದಲೇ ಗುಡಿಸಲು ಕಟ್ಟಿದ ವಿಚಾರದ ಬಗ್ಗೆ ಅಸಹನೆ ಏರ್ಪಟ್ಟಿದ್ದು ಆ ಕಾರಣವೇ ಅರಣ್ಯಾಧಿಕಾರಿ ಗಳನ್ನು ಬಳಸಿಕೊಂಡು ಗುಡಿಸಲನ್ನು ಏಕಾ ಏಕಿ ಧ್ವಂಸ ಮಾಡಲು ಕಾರಣವೆನ್ನಲಾಗಿದೆ.

ಲೀಲಮ್ಮ ಅವರ ಪ್ರಕಾರ ಸದ್ರಿ ಪರಿಸರದ ಸರ್ವೇನಂಬ್ರ 56, 21, 121 ಮುಂತಾದ ಸ್ಥಳಗಳಲ್ಲಿ ಅದು ಸರಕಾರಿ ಜಾಗವಾದರೂ ಅದರಲ್ಲಿ ಅಕ್ರಮ ವಾಸವಿರುವ ಎಷ್ಟೋ ಕುಟುಂಬಗಳಿವೆ. ತೀರಾ ಸಮೀಪದ ಕಲ್ಯಾಣಿ ಗುಡ್ಡದ ಸರಕಾರಿ ಜಾಗವನ್ನು ಖಾಸಗಿಯವರು ಇಂತಿಷ್ಟಕ್ಕೆ ಮಾರಿಕೊಂಡಿದ್ದು ಅದನ್ನು ಹಲವಾರು ಕುಟುಂಬಗಳು ಆಕ್ರಮಿಸಿ ಕೊಂಡಿವೆ. ಆದರೆ ಈ ಬಗ್ಗೆ ಯಾವುದೇ ಚಕಾರವೆತ್ತದ ಅರಣ್ಯ ಇಲಾಖೆಯವರು ಕಳೆದ 15 ವರ್ಷಗಳಿಂದ ಈ ಪರಿಸರದಲ್ಲಿ ವಾಸವಾಗಿರುವ ನಮ್ಮ ಮೇಲೆ ದಂಡೆತ್ತಿ ಬಂದು ಗುಡಿಸಲನ್ನು ನಾಶ ಮಾಡಿ ಹೆಂಗಸರನ್ನು ಸಹಾ ದರದರನೆ ಹೊರಕ್ಕೆ ತಳ್ಳಿ ಅಮಾನವೀಯತೆಯಿಂದ ವರ್ತಿಸಿದ್ದಾರೆ. ಇವರ ಮೃಗೀಯ ವರ್ತನೆಗೆ ನಾವು ಬಲಿಯಾಗಿ ಇದೀಗ ಬೀದಿಪಾಲಾಗಿದ್ದೇವೆ. ನಮ್ಮದು ಸರಕಾರಿ ಭೂಮಿ ಹೌದು. ಆದರೆ ಎಷ್ಟೋ ಕುಟುಂಬಗಳು ಸಹಾ ಇಲ್ಲಿ ಸರಕಾರಿ ಭೂಮಿಯಲ್ಲೇ ಅಕ್ರಮವಾಗಿ ನೆಲೆಸಿದ್ದಾರೆ. ಆದರೆ ಹಲವು ವರ್ಷಗಳಿಂದ ನೆಲೆಸಿರುವ ನಮಗೊಂದು ನ್ಯಾಯ ಇತರರಿಗೊಂದು ನ್ಯಾಯ ಎಂಬಂತಾಗಿದೆ ಅರಣ್ಯ ಇಲಾಖೆ ಕ್ರಮ. ಹಾಗೊಂದು ವೇಳೆ ಅರಣ್ಯ ಇಲಾಖೆಯು ಕಾನೂನು ಪರಿಧಿಯಲ್ಲಿಯೇ ನಮ್ಮ ಮೇಲೆ ಕ್ರಮ ಕೈಗೊಂಡಿದೆ ಅಂತಾ ದರೆ ಆ ಕ್ರಮ ಸ್ಥಳೀಯವಾಗಿ ಎಲ್ಲರಿಗೂ ಅನ್ವಯಿಸಲಿ, ಕೇವಲ ರಾಜಕೀಯ ಪ್ರೇರಿತ ವಾಗಿ ನಮ್ಮ ಗುಡಿಸಿಲಿನ ಮೇಲೆ ಮಾತ್ರ ದಾಳಿಯಿಟ್ಟು ನಮ್ಮನ್ನು ಬೀದಿಪಾಲು ಮಾಡಿದ್ದು ಯಾವ ನ್ಯಾಯ ಅಂತಾ ಪ್ರಶ್ನಿಸಿದ್ದಾರೆ.

ಸ್ಥಳೀಯವಾಗಿ ಅರಣ್ಯ ಇಲಾಖೆಯ ಕ್ರಮದ ಬಗ್ಗೆ ವ್ಯಾಪಕ ಪರವಿರೋಧಗಳು ಕೇಳಿಬರುತ್ತಿವೆ.

ಕ್ರಪೆ - ಜಯಕಿರಣ
ವರದಿ - ಅಬ್ದುಲ್ ಹಮೀದ್ ಸೀ.ಹೆಚ್

Share: