ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ರಿಯಾದ್ : ಇಂಡಿಯಾ ಫ್ರಟರ್ನಿಟಿ ಫಾರಂ ವತಿಯಿಂದ “ ಅರೋಗ್ಯ ಅಭಿಯಾನ ಶಿಬಿರ ”

ರಿಯಾದ್ : ಇಂಡಿಯಾ ಫ್ರಟರ್ನಿಟಿ ಫಾರಂ ವತಿಯಿಂದ “ ಅರೋಗ್ಯ ಅಭಿಯಾನ ಶಿಬಿರ ”

Mon, 18 Jan 2010 02:35:00  Office Staff   S.O. News Service

ರಿಯಾದ್, ಜನವರಿ 17 ಇಂಡಿಯಾ ಫ್ರಟರ್ನಿಟಿ ಫಾರಂ ರಿಯಾದ್ ಘಟಕವು ಹಮ್ಮಿಕೊಂಡಂತಹ ಜನರೋಗ್ಯವೇ ರಾಷ್ಟ್ರ ಶಕ್ತಿ ಎಂಬ ಪ್ರದಾನ ಶೀರ್ಷಿಕೆಯಡಿ ಡಿಸೆಂಬರ್ 11 ರಿಂದ 25 ರ ತನಕ ಹಮ್ಮಿಕೊಂಡಂತಹ  ಆರೋಗ್ಯ ಅಭಿಯಾನ  ಶಿಬಿರದ ಉದ್ಘಾಟನ ಸಮಾರಂಭದ  ಭಾಗವಾಗಿ ಜರುಗಿದ ಆರೋಗ್ಯ ಮಾಹಿತಿ ಶಿಭಿರವು " ರಿಯಾದ್ ರಾಯಲ್ ಇಂಟರ್ ನ್ಯಾಷನಲ್ ಸ್ಕೂಲ್ "ಇದರ ಸಭಾಂಗಣದಲ್ಲಿ ದಿನಾಂಕ 11-12-2009 ರಂದು ರಾತ್ರಿ 8 ಘಂಟೆಗೆ ಜರುಗಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜ| ಸಲೀಂ ಮೌಲವಿ ಅಲ್ ಖಾಸಿಮಿ ಸಂಯೋಜಕರು ಇಂಡಿಯಾ ಫ್ರಟರ್ನಿಟಿ ಫಾರಂ ರಿಯಾದ್ ಘಟಕ  ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಅದೇ ರೀತಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಜ| ಇಮ್ತಿಯಾಜ್ ಚಯರ್ ಮ್ಯಾನ್ ಇಂಟರ್ ನ್ಯಾಷನಲ್ ಸ್ಕೂಲ್  ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

18-riy1.jpg

18-riy2.jpg

18-riy3.jpg 

ಮಾತ್ರವಲ್ಲದೆ ಮುಖ್ಯ ಪ್ರಭಾಷನಗಾರರಾಗಿ ಆಗಮಿಸಿದಂತಹ ಡಾ | ಮುಹಮ್ಮದ್ ಫೈಜ್ಹೀ,ಹ್ರದ್ರೋಗ ತಜ್ಞರು (ಸಫಾ-ಮಕ್ಕ ಬಥ,ರಿಯಾದ್) ಹಾಗು ಡಾ | ಶ್ರೀಮತಿ ಕೃಷ್ಣವೇಣಿ ಜನರಲ್ ಪಿಸಿಶನ್ (ಸಹ ಅಲ್ ಪೋಲಿ ಕ್ಲಿನಿಕ್,ಬಥರಿಯಾದ್) ಇವರು ಆರೋಗ್ಯದ ಬಗೆಗಿನ ಮಾಹಿತಿಯನ್ನು ನೀಡಿದರು.ಅಲ್ಲದೆ "ವ್ಯಾಯಾಮ ಮತ್ತು ಅರೋಗ್ಯ" ಎಂಬ ಕೈಪಿಡಿಯನ್ನು ಜನಾಬ್ | ತಾಜುದ್ದೀನ್ ಅಬ್ದುಲ್ ಖಾದರ್,ಪ್ರಿನ್ಸಿಪಾಲ್ ರಾಯಲ್ ಇಂಟರ್ ನ್ಯಾಷನಲ್ ಸ್ಕೂಲ್, ರಿಯಾದ್ ಇವರು ಬಿಡುಗಡೆ ಗೊಳಿಸಿದರು.ಕನ್ನಡ,ಮಲಯಾಳಂ,ತಮಿಳು,ಹಿಂದಿ,ಉರ್ದು ಬಾಷೆಗಳಲ್ಲಿರುವ ಕೈಪಿಡಿಯನ್ನು ಕ್ರಮವಾಗಿ ಜನಾಬ್ | ಮುಹಮ್ಮದ್ ನವಾಜ್ ಗುರುಪುರ,ಕರ್ನಾಟಕ (ಅದ್ಯಕ್ಷರು,ಜಮಿಯ್ಯತುಲ್ ಫಲಹ್ ರಿಯಾದ್ ಘಟಕ)  ಜನಾಬ್ ಹನೀಫ್ ಪಲ್ಲಪರಂಬು,ಕೇರಳ (ಸರ್ಕ್ಯುಲೆಶನ್ ಮೇನೇಜರ್,ಅಲ್ ಜುಮಃ ಮ್ಯಾಗಜಿನ್) ಜನಾಬ್ | ಶಾಹುಲ್ ಹಮಿದ್ ಇಂಜಿನಿಯರ್ ತಮಿಳುನಾಡು  (ಖಜಾಂಜಿ,ತಮಿಳು ಸಂಗಂ ರಿಯಾದ್ ) ಜನಾಬ್ | ಅಬ್ದುಲ್ ಹಸಿಬ್ ಮುಹ್ಯಿದ್ದೀನ್ ಅಂದ್ರ ಪ್ರದೇಶ (ಎಕ್ಸಿಕ್ಯುಟಿವ್ ಮೇನೇಜರ್ ಆಲ್ ಹಮದಿ ಆಸ್ಪತ್ರೆ,ರಿಯಾದ್) ಜನಾಬ್ ಮುಹಮ್ಮದ್ ಕ್ವೈಸರ್ ಹೈದರಾಬಾದ್ (ಅದ್ಯಕ್ಷರು,ತಂಜಿಮ್ ಹಮ್ ಹಿಂದುಸ್ತಾನಿ,ರಿಯಾದ್) ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ವಿವಿದ ಬಾಷೆಗಳಲ್ಲಿರುವ ಕೈಪಿಡಿ ಪುಸ್ತಕವನ್ನು ಸ್ವೀಕರಿಸಿದರು. 

ಮಾತ್ರವಲ್ಲದೆ ಸುಮಾರು ೧೨೦೦ ರಷ್ಟು ಬರುವ ಪ್ರವಾಸಿಗರು ಈ ಒಂದು ಶಿಭಿರದಲ್ಲಿ ಪಾಲ್ಗೊಂಡು ಆರೋಗ್ಯದ ಬಗೆಗಿನ ಮಾಹಿತಿಯನ್ನು ಪಡಕೊಂಡರು. ಅದೇ ರೀತಿ ಜನಾಬ್ ಸಿದ್ದಿಕ್ ಪಾಷ ತಮಿಳುನಾಡು ರವರು ಸ್ವಾಗತಿಸಿ ಕೊನೆಯಲ್ಲಿ ಜನಾಬ್ ಅಬ್ದುಲ್ ಮಜೀದ್ ವಿಟ್ಲ ಇವರು ವಂಧಿಸಿದರು.

ಉಚಿತ ವೈದ್ಯಕೀಯ ತಪಾಸನಣ ಶಿಭಿರ

ಅದೇ ರೀತಿ ಆರೋಗ್ಯ ಅಭಿಯಾನ ಶಿಭಿರದ ಅಂಗವಾಗಿ ಇಟ್ಟು ಕೊಂಡಂತಹ ಉಚಿತ ವೈದ್ಯಕೀಯ ತಪಾಸನಣ ಶಿಭಿರವು ದಿನಾಂಕ 17-12-2009 ರಿಂದ 24-12-2009 ರ ವರೆಗೆ ರಿಯಾದ್ ನ ಪ್ರಮುಖ ಅಸ್ಫತ್ರೆಗಳಾದ ಸಹ ಆಲ್ ಪಾಲಿ ಕ್ಲಿನಿಕ್-ಬಥ,ಉಹದ್ ಆಲ್ ಮದೀನ ಪಾಲಿ ಕ್ಲಿನಿಕ್-ಬಥ,ಸಫ್ಹ ಮಕ್ಕ-ಹರ,ಎಲಿಕ್ಷರ್ ಪಾಲಿ ಕ್ಲಿನಿಕ್-ಬಥ ಈಗೇ ಮೊದಲಾದ ಅಸ್ಫತ್ರೆಗಳಲ್ಲಿ ಜರುಗಿತ್ತು.ಇಂಡಿಯಾ ಫ್ರಟರ್ನಿಟಿ ಫಾರಂ ರಿಯಾದ್ ಘಟಕದ ವಿವಿದ ರಾಜ್ಯಗಳ ಅದ್ಯಕ್ಷರು ಗಳಾದ ಜನಾಬ್ | ಮುಹಮ್ಮದ್ ಹಾರಿಸ್ ಮನ್ನರ್ಕಾಡ್-ಕೇರಳ , ಜನಾಬ್ | ಅಬ್ದುಲ್ ಮಜೀದ್ ವಿಟ್ಲ-ಕರ್ನಾಟಕ , ಜನಾಬ್ | ಫಯಜುದ್ದಿನ್ ಚೆನ್ನೈ-ತಮಿಳುನಾಡು , ಜನಾಬ್ | ಸಿದ್ದಿಕ್ ಪಾಷ-ದೆಹಲಿ ಇವರು ವಿವಿದ ಅಸ್ಫತ್ರೆಗಳಲ್ಲಿ ವೈದ್ಯಕೀಯ ತಪಾಸಣೆಯ ಮಹತ್ವದ ಬಗೆಗಿನ ಮಾಹಿತಿ ಹಾಗು ಫ್ರಟರ್ನಿಟಿ ಫಾರಂ ನ ಕೆಲಸಕಾರ್ಯಗಳ ಬಗ್ಯೆ ಪವಾಸಿಗರಿಗೆ ವಿವರಿಸಿದರು

 

ಕಾರ್ಯ ಕ್ರಮಕ್ಕೆ ಮುಖ್ಯ ಆತಿಥಿಗಳಾಗಿ ಆಗಮಿಸಿದಂತಹ ವಿವಿದ ಅಸ್ಫತ್ರೆಗಳ ಪ್ರತಿನಿಧಿಗಳು ವೈದ್ಯಕೀಯ ತಪಾಸಣೆಗಾಗಿ ಉಚಿತ ಕೂಪನ್ ನೀಡುವುದರ ಮುಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಾತ್ರವಲ್ಲದೆ ಈ ಒಂದು ಶಿಭಿರದಲ್ಲಿ ಸುಮಾರು 3000 ದಷ್ಟು  ಪ್ರವಾಸಿಗರು ಇದರ ಪ್ರಯೋಜನವನ್ನು ಪಡಕೊಂಡು ಸಂಘಟನೆಯ ಕೆಲಸ ಕಾರ್ಯಗಳ ಬಗ್ಯೆ ಶ್ಲಾಘಿಸಿದರು.

ಸ್ಪೋರ್ಟ್ಸ್ ಮೀಟ್  

ಅದೇ ರೀತಿ ಅಭಿಯಾನ ಶಿಭಿರದ ಸಮಾರೋಪ ಸಮಾರಂಭದ ಭಾಗವಾಗಿ ಇಟ್ಟು ಕೊಂಡಂತಹ " ಸ್ಪೋರ್ಟ್ಸ್ ಮೀಟ್ " ಕಾರ್ಯ ಕ್ರಮವು ದಿನಾಂಕ 25.12.2009 ರಂದು ಬೆಳಗ್ಗೆ 6.20 ಕ್ಕೆ ಸರಿಯಾಗಿ ರಿಯಾದ್ ನ ಆಲ್-ಹೈರ್ ಇಸ್ಥಿರಾದ ಕ್ರೀಡಾಂಗಣದಲ್ಲಿ ಜರುಗಿತ್ತು.ಕಾರ್ಯಕ್ರಮವನ್ನು ಭಾರತೀಯ ಜೂನಿಯರ್ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಕರ್ನಾಟಕ ರಾಜ್ಯದ ಆಟಗಾರ ಜನಾಬ್ ಮುಹಮ್ಮದ ಹಾರಿಸ್ ಕಲ್ಲಡ್ಕ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾತ್ರವಲ್ಲದೆ ಕ್ರೀಡಾ ಕೂಟದ ಭಾಗವಾಗಿ ಕಬಡ್ಡಿ , ಫೂಟ್ ಬಾಲ್ , ಹಗ್ಗ-ಜಗ್ಗಾಟ ಹಾಗು ಇನ್ನಿತರ ಆಟೋಟ ಸ್ಪರ್ದೆಗಳು ನಡೆದವು.ಅಲ್ಲದೆ ಈ ಪಂದ್ಯಾಟದಲ್ಲಿ ಕರ್ನಾಟಕ, ಕೇರಳ,ತಮಿಳುನಾಡು,ಆಂದ್ರಪ್ರದೇಶ,ದೆಹಲಿ ಹಾಗು ಪಶ್ಚಿಮ ಬಂಗಾಳ ತಂಡಗಳು ಕೂಡ ಭಾಗವಹಿಸಿದ್ದವು. ಪ್ರಮುಖ ಪಂದ್ಯಗಳಾದ ಕಬಡ್ಡಿ , ಫೂಟ್ ಬಾಲ್ , ಹಗ್ಗ-ಜಗ್ಗಾಟ ಗಳಲ್ಲಿ ಕರ್ನಾಟಕ ತಂಡವು ಟ್ರೋಫಿಯನ್ನು ತನ್ನದಾಗಿಸಿಕೊಂಡು ದಿನದಾಟದ ಪರಾಕ್ರಮವನ್ನು ಮೆರೆಯಿತ್ತು.ಅದೇ ರೀತಿ ಅತ್ಯಂತ ರೋಮಾಂಚನಕಾರಿಯಾಗಿ ಹೊನಲು ಬೆಳಕಿನಲ್ಲಿ  ನಡೆದ ಫೂಟ್ ಬಾಲ್ ಪಂದ್ಯಾಟದ ಫೈನಲ್ ನಲ್ಲಿ ಕರ್ನಾಟಕ ಮತ್ತು ಕೇರಳ ತಂಡಗಳು ಪರಸ್ಪರ ಜಿದ್ದಾಜಿದ್ದಿನ ಹೋರಾಟಕ್ಕೆ ಮಣೆಹಾಕಿತ್ತು.ಕೊನೆಗೆ ಕರ್ನಾಟಕ ತಂಡವು 3-1 ಅಂತರದ ಗೋಲುಗಳಿಂದ ಕೇರಳ ತಂಡವನ್ನು ಪರಾಭವಗೊಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು.

 

 18-riy5.jpg

18-riy6.jpg

18-riy7.jpg 

ಅದೇ ರೀತಿ ಕಬಡ್ಡಿ ಪಂದ್ಯಾಟದ ಫೈನಲ್ ನಲ್ಲಿ ಕರ್ನಾಟಕ A ಮತ್ತು B ತಂಡಗಳು ಪರಸ್ಪರ ಸೆಣಸಿ 36-16 ಅಂಕಗಳ ಮುನ್ನಡೆಯೊಂದಿಗೆ ಕರ್ನಾಟಕ A ತಂಡವು ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಮಾತ್ರವಲ್ಲದೆ ಕ್ರೀಡಾ ಕೂಟದ ಆಕರ್ಷಣಿಯವಾಗಿದ್ದ ಹಗ್ಗ-ಜಗ್ಗಾಟದ ಪ್ರತಿಯೊಂದು ಪಂದ್ಯಗಳು ಅತ್ಯಂತ ರೋಮಾಂಚನಕಾರಿಯಾಗಿ ನಡೆದು ಕರ್ನಾಟಕದ ಇತ್ತoಡಗಳು ಫೈನಲ್ ಪ್ರವೇಶಿಸಿ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯ್ತು.


ಮಾತ್ರವಲ್ಲದೆ ಪ್ರಮುಖರಾದ ಜನಾಬ್ | ಅಬ್ದುಲ್ ಹಮೀದ್ ವೆನ್ಜ್ , ಜನಾಬ್ | ಮುಹಮ್ಮದ್ ಯುನುಸ್ ಹಸ್ಸನ್ ( ಮಾಲಕರು ಹಾಗು ಎಕ್ಸಿಕ್ಯುಟಿವ್ ಮೇನೇಜರ್ ಹುಂಡೈ ವಾಲನ್,ರಿಯಾದ್ ) , ಜನಾಬ್ | ಮುಹಮ್ಮದ್ ಅಫ್ತಾಬ್ ಇಕ್ಬಾಲ್ ( ಸೇಲ್ಸ್ & ಮಾರ್ಕೆಟಿಂಗ್ ಮ್ಯಾನೇಜರ್ ಮೊಡರ್ನ್ ಬಿಲ್ಡಿಂಗ್ ಟೆಕ್ನಾಲಜಿ,ರಿಯಾದ್ ) , ಜನಾಬ್ | ಮುಹಮ್ಮದ್ ರಫಿಕ್ ಮಂಜೇಶ್ವರ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು ಪ್ರತಿ ಪಂದ್ಯಾಟದ ವಿಜೇತರಿಗೆ ಪ್ರಥಮ ಹಾಗು ದ್ವಿತೀಯ ಬಹುಮಾನವನ್ನು ನೀಡಿ ಸಹಕರಿಸಿದರು. ಇಂಡಿಯಾ ಫ್ರಟರ್ನಿಟಿ ಫಾರಂ ರಿಯಾದ್      ಘಟಕದ ಕಾರ್ಯದರ್ಶಿಗಳಾದ ಜನಾಬ್ | ಜಲಾಲುದ್ದೀನ್ ಕನ್ನೂರ್ ಇವರು ಕೊನೆಯಲ್ಲಿ ವಂದಿಸಿದರು.

ಚಿತ್ರ, ವರದಿ: ಎ.ಎಮ್. ಆರೀಫ್ ಜೋಕಟ್ಟೆ, ದಮ್ಮಾಂ, ಸೌದಿ ಅರೇಬಿಯಾ.                                                                                                                        


Share: