ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರೂರು: ಬಾಲಕನಿಗೆ ನಾಯಿ ಕಡಿತ

ಶಿರೂರು: ಬಾಲಕನಿಗೆ ನಾಯಿ ಕಡಿತ

Sat, 23 Jan 2010 18:12:00  Office Staff   S.O. News Service

ಶಿರೂರು, ಜನವರಿ 23: ಪಟ್ಟಣದ ಬುಖಾರಿ ಕಾಲೋನಿಯಲ್ಲಿ ಬೀದಿನಾಯಿಯೊಂದು ಬಾಲಕನಿಗೆ ಕಚ್ಚಿ ತೀವ್ರತರದ ಗಾಯ ಮಾಡಿರುವುದು ವರದಿಯಾಗಿದೆ.

 

 

ಇಝಾರ್ ಅಹ್ಮದ್ ಎಂಬುವರ ಪುತ್ರ ಶಕೀಲ್ ಅಹ್ಮದ್ ಎಂಬ ಬಾಲಕನ ಮುಖಕ್ಕೆ ನಾಯಿ ತೀವ್ರವಾಗಿ ಕಚ್ಚಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ.

 

ಪಟ್ಟಣದಲ್ಲಿ ಬೀದಿನಾಯಿ ಕಾಟ ಅತಿಯಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

 

ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ


Share: