ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೊಲೆ ಪ್ರಕರಣ ಭೇದಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು.

ಕೊಲೆ ಪ್ರಕರಣ ಭೇದಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು.

Fri, 10 Jun 2022 01:56:22  Office Staff   SO News

ಪುತ್ತೂರು :  ತಾಲೂಕಿನ  ಕೊಳ್ತಿಗೆ ಗ್ರಾಮದ ಪೆರ್ಲಂಪ್ಪಾಡಿ  ಎಂಬಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನ ಪೊಲೀಸರು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ  ಕಿಶೋರ್ ಪುಜಾರಿ  ( 34), ರಾಕೇಶ್ ಮಡಿವಾಳ (27), ರೇಮಂತ್ ಗೌಡ  (26),  ನರ್ಮೆಶ್ ರೈ(29),  ನಿತಿಲ್ ಶೆಟ್ಟಿ (23), ವಿಜೇಶ್ (22)  ಎಂಬುವವರನ್ನ ಬಂಧಿತ ಸಲಾಗಿದೆ.

 ಚರಣ್ ರಾಜ್ ಎಂಬವರನ್ನು ಕಿಶೋರ್ ಪೂಜಾರಿ ಮತ್ತು ಇತರರ ತಂಡ ತಲವಾರು ಮತ್ತು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 49/2022 ಕಲಂ 302 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತಿತ್ತು.

 ಪೂರ್ವದ್ವೇಷದಿಂದ ಮಾಡಿರುವ ಕೊಲೆಯೆಂದು ಹೇಳಲಾಗಿತ್ತು. ಮೃತ ಚರಣ್ ರಾಜ್ ತನ್ನ ಸಹಚರರೊಂದಿಗೆ ಸೇರಿಕೊಂಡು ಸಂಪ್ಯ ಬಳಿ ಕಾರ್ತಿಕ್ ಮಾರ್ಲ ಎಂಬವರನ್ನು ಕೊಲೆ ಮಾಡಿದ್ದ.   ಜಾಮೀನಿನಲ್ಲಿ ಬಿಡುಗಡೆಗೊಂಡು ಪೆರ್ಲಂಪ್ಪಾಡಿಯಲ್ಲಿ ಹೊಸದಾಗಿ ತೆರೆಯಲಿರುವ ಮೆಡಿಕಲ್ ಶಾಪ್ ಕೆಲಸಕ್ಕೆ ಓಡಾಡಿಕೊಂಡಿದ್ದ ವೇಳೆ ಆರೋಪಿತರುಗಳು ಹೊಂಚುಹಾಕಿ ಕೊಲೆ ಮಾಡಿದ್ದರು.

 ಆರೋಪಿಗಳಿಂದ ಕ್ರತ್ಯಕ್ಕೆ ಉಪಯೋಗಿಸಿದ ಬಾಳುಕತ್ತಿ, ರಾಡ್  ಮತ್ತು ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದೆ. 

             ಸದ್ರಿ ಪ್ರಕರಣದ ಪತ್ತೆ ಬಗ್ಗೆ  ಪೊಲೀಸ್ ಅಧೀಕ್ಷಕ  ಋಷಿಕೇಶ್ ಭಗವಾನ್ ಸೊನವಣೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಹಾಗು  ಪೊಲೀಸ್  ಉಪಾಧೀಕ್ಷಕ ಗಾನಾ.ಪಿ.ಕುಮಾರ್ ರವರ ಮಾರ್ಗದರ್ಶನದಂತೆ  ನವೀನ್ ಚಂದ್ರ ಜೋಗಿ, ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಗಳು,  ರುಕ್ಮ ನಾಯ್ಕ್  ಪಿ ಎಸ್ ಐ ಬೆಳ್ಳಾರೆ ಮತ್ತು ಸಿಬ್ಬಂದಿಗಳು,  ದಿಲೀಪ್ ಪೊಲೀಸ್ ಉಪನಿರೀಕ್ಷಕ ಸುಳ್ಯ ಠಾಣೆ ಮತ್ತು ಸಿಬ್ಬಂದಿಗಳು,  ಉದಯರವಿ ಪಿ ಎಸ್ ಐ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಸಿಬ್ಬಂದಿಗಳು,  ರಾಜೇಶ್ ಪುತ್ತೂರು ನಗರ ಠಾಣೆ ಮತ್ತು ಸಿಬ್ಬಂದಿಗಳು  ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.


Share: