ಕಾರವಾರ: ಕುಮಟಾ ತಾಲೂಕಾ ಹೊಲನಗದ್ದೆ ಕುರ್ಮಾ ಹೋಂ ಸ್ಟೇ ಹತ್ತಿರ ಸಮುದ್ರ ತೀರದಲ್ಲಿ ಓರ್ವ ಗಂಡಸಿನ ಮೃತ ದೇಹವು ಪತ್ತೆಯಾಗಿದ್ದು, ಈವರೆಗೂ ಆತನ ಹೆಸರು, ವಿಳಾಸ ಹಾಗೂ ವಾರಸುದಾರರ ಪತ್ತೆಯಾಗಿದ್ದು ಇರುವುದಿಲ್ಲ.
ಅಪರಿಚಿತ ಶವದ ವಿವರ: ವಯಸ್ಸು ಸುಮಾರು 35 ರಿಂದ 40 ವರ್ಷ ಎತ್ತರ 5.7 ಅಡಿ,ಎಣ್ಣೆ ಕಪ್ಪು ಮೈಬಣ್ಣ, ಕೆಂಪು ಬಣ್ಣದ ಕಾರ್ಗೋ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಎಡ ಭುಜದ ಮೇಲೆ ಸಿಂಹ, ಗರುಡ ಚಿತ್ರ ಹಾಗೂ ಬಲಗೈ ಮೋಣಗಂಟಿನ ಮೇಲೆ ಚೇಳಿನ ಚಿತ್ರದ ಟ್ಯಾಟೋ ಹಾಕಿಸಿಕೊಂಡಿರುತ್ತಾನೆ.
ಈ ಮೇಲಿನ ಚಹರೆಯುಳ್ಳ ಮೃತ ದೇಹದ ವಾರಸುದಾರರು ಪತ್ತೆಯಾದಲ್ಲಿ ಕುಮಟಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: (08386) 222333, 9480805272, 9480805234 ಅಥವಾ ಇ- ಮೇಲ್ kumtakwr@ksp.gov.in ನ್ನು ಸಂಪರ್ಕಿಸುವAತೆ ಕುಮಟಾ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.