ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಮಟಾ : ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ.

ಕುಮಟಾ : ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ.

Wed, 15 Jun 2022 18:40:26  Office Staff   SO News

ಕುಮಟಾ : ಪಟ್ಟಣದ ಹೆರವಟ್ಟಾ ಸೇತುವೆ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರನ್ನ ಕುಮಟಾ ಪೊಲೀಸರು ಬಂಧಿಸಿದ್ದಾರೆ.

ಶಿರಸಿ ತಾಲೂಕಿನ  ರಾಗಿಹೊಸಳ್ಳಿ ಹೆಬ್ರಿಯ ನಿವಾಸಿ ರಾಜೇಶ ಅಂಬಿಗ (25), ಲಕ್ಷ್ಮಣ ಅಂಬಿಗ (20) ಮತ್ತು ರಾಮನಗರದ ಬಿಡದಿ ನಿವಾಸಿ ಗಣೇಶಮೂರ್ತಿ (31) ಬಂಧಿತರು.

 ಮೂವರು  ಕಾರಿನಲ್ಲಿ 495 ಗ್ರಾಂ ಗಾಂಜಾ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ
ಪೊಲೀಸರು ಗಾಂಜಾ ಸಮೇತ ಮೂವರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: