ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಂದಾಪುರ ಪೊಲೀಸರ ಕಾರ್ಯಾಚರಣೆ. ಅಂದರ್‌ ಬಾಹರ್‌ ಅಡ್ಡೆ ಮೇಲೆ ದಾಳಿ: 8 ಮಂದಿ ಜನರ ಬಂಧನ. 1.60 ಲಕ್ಷ ರೂ. ವಶ.

ಕುಂದಾಪುರ ಪೊಲೀಸರ ಕಾರ್ಯಾಚರಣೆ. ಅಂದರ್‌ ಬಾಹರ್‌ ಅಡ್ಡೆ ಮೇಲೆ ದಾಳಿ: 8 ಮಂದಿ ಜನರ ಬಂಧನ. 1.60 ಲಕ್ಷ ರೂ. ವಶ.

Fri, 01 Jul 2022 03:59:03  Office Staff   SO News

ಕುಂದಾಪುರ: ತಾಲೂಕಿನ‌ ಹೆಮ್ಮಾಡಿಯ ಲಾಡ್ಜೊಂದರ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಕುಂದಾಪುರ ಡಿವೈಎಸ್ಪಿ‌ ಕೆ. ಶ್ರೀಕಾಂತ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ವಂಡ್ಸೆಯ ಸಂಜೀವ ಪೂಜಾರಿ (45), ಚಿತ್ತೂರಿನ ಅಭಿಜಿತ್ (29), ಬಳ್ಕೂರಿನ ನರಸಿಂಹ ಪೂಜಾರಿ (61), ಕರ್ಕುಂಜೆಯ ಚಂದ್ರ (49), ಹೆಮ್ಮಾಡಿಯ ಅಶ್ವತ್ (35), ಕರ್ಕುಂಜೆಯ ಅಶೋಕ (50), ತಲ್ಲೂರಿನ ಭುಜಂಗ ಶೆಟ್ಟಿ (44), ನೂಜಾಡಿ ರಸ್ತೆ ನಿವಾಸಿ ಆದರ್ಶ (39) ಎಂಬವವರು‌ ಬಂಧಿತರಾಗಿದ್ದಾರೆ.

ಅಂದರ್ ಬಾಹರ್ ಆಟವಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ 1,61,000 ರೂ.‌ ನಗದು ಸಹಿತ ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: