ಜಮ್ಮು:ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ 42 ವಿದೇಶಿ ಭಯೋತ್ಪಾದಕರೂ ಸೇರಿ 172 ಮಂದಿ ಭಯೋತ್ಪಾದಕರನ್ನು ಭದ್ರತಾ ಪಡೆ ಏನ್ ಕೌಂಟರ್ ನಲ್ಲಿ ಹತ್ಯೆ ಮಾಡಿದೆ.
2022ರಲ್ಲು 172 ಮಂದಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದ್ದು 93 ಮಂದಿಯನ್ನು ತಟಸ್ಥ ಮಾಡಲಾಗಿದೆ ಎಂದು ಕಾಶ್ಮೀರ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.
ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ 108 ಮಂದಿ ಜೈಷ್ ಎ ಮೊಹಮ್ಮದ್ ಸಂಘಟನೆಯ 35 ಮಂದಿ ಉಗ್ರರನ್ನು ಭಯೋತ್ಪಾದನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಒಂದು ರೀತಿಯಲ್ಲಿ ಭಯೋತ್ಪಾದನಾ ಚಟುವಟಿಕೆಯಿಂದ ವಿಮುಖರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಿಜ್ ಬುಲ್ ಮುಜಾಯಿದ್ದೀನ್ ಸಂಘಟನೆಯ 22 ಮಂದಿ, ಅಲ್ ಬದರ್ ಸಂಘಟನೆಯ 4 ಮಂದಿ ಮತ್ತು ಅನ್ಸರ್ ಘಜ್ ವಾತ್ ಉಲ್ ಹಿಂದ್ ಸಂಘಟನೆಯ 3 ಮಂದಿ ಉಗ್ರರನ್ನು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗದಂತೆ ನಿರ್ಬಂದ ಹೇರಲಾಗಿದೆ ಎಂದು ಅವರು ಮಾಹಿತಿಯಲ್ಲಿ ತಿಳಿಸಿದ್ದಾರೆ.
ಹಲವು ಮಂದಿ ಸಕ್ರಿಯ:
ಕಣಿವೆ ಪ್ರದೇಶದಲ್ಲಿ ಹಲವು ಭಯೋತ್ಪಾದಕರು ಇನ್ನೂ ಸಕ್ರಿಯವಾಗಿದ್ದಾರೆ ಎಂದು ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಲಷ್ಕರ್ ತೊಯ್ಬಾ ಸಂಘಟನೆಗೆ 74 ಮಂದಿ ಹೊಸದಾಗಿ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ.ಜೊತೆಗೆ ಹಲವು ಮಂದಿ ಸಕ್ರಿಯ ಯಾಗಿದ್ದಾರೆ ಎಂದು ಹೇಳಿದ್ದಾರೆ.