ಭಟ್ಕಳ, ನವೆಂಬರ್ 11:ಶಿರಾಲಿ ಜನಾರ್ಧನ ಸಾಂತಯ್ಯ ಕಾಮತ ಫ್ಯಾಮಿಲಿ ಟ್ರಸ್ಟ ಹಾಗೂ ಶ್ರೀ ಮಾರುತಿ ಸೇವಾ ಮಂಡಳ ಶಿರಾಲಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಶಿರಾಲಿಯಲ್ಲಿ
‘ರಕ್ತದಾನ’ದ ಕುರಿತು ಜನರಲ್ಲಿ ಅರಿವು ಮೂಡಿಸಲು ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಊರಿನ ನಾಗರಿಕರು ಹಾಗೂ ಸ್ಥಳೀಯ ಶ್ರೀ ಕ್ಷೇತ್ರ ಧರ್ಮಸ್ಥಳ ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಜರಿದ್ದರು. ಕುಮಟಾದ ಡಾ.ಎಂ.ಕೆ.ನಾಯ್ಕ ರಕ್ತ ವರ್ಗ ಹಾಗೂ ರಕ್ತದಾನದ ಬಗ್ಗೆ ವಿವರ ನೀಡಿದರು. ಕಾಮತ್ ಫ್ಯಾಮಿಲಿ ಟ್ರಸ್ಟನ ಅಧ್ಯಕ್ಷ ಡಿ.ಜೆ.ಕಾಮತ್ ರಕ್ತದಾನದ ಅವಶ್ಯಕತೆಯ ಬಗ್ಗೆ ತಿಳಿಸಿದರು. ಶ್ರೀನಿವಾಸ ಕಾಮತ, ರವೀಂದ್ರ ಕಾಮತ ಹಾಗೂ ಮಾರುತಿ ಸೇವಾ ಮಂಡಳದ ಅಧ್ಯಕ್ಷ ದೇವಿದಾಸ ಮಹಾಲೆ ಹಾಗೂ ಕಾರ್ಯದರ್ಶಿ ವಿಷ್ಣು ಸರಾಫ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.