ಕಾರವಾರ: ನಗರದ ಬೀಚ್ ಸಮೀಪದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ತಾಲೂಕಿನ ಶಿರವಾಡ ಬಂಗಾರಪ್ಪ ನಗರದ ರಾಜೇಶ ವಡ್ಡರ್ (27) ಮತ್ತು ಜಾಂಬಾ ಕ್ರಾಸ್ ನ ಮಣಿಕಂಠ ರಾಥೋಡ್ (18) ಬಂಧಿತರೆಂದು ಗುರುತಿಸಲಾಗಿದೆ.
ಬಂಧಿತರಿಂದ ಹತ್ತು ಸಾವಿರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದ್ದು ಕಾರವಾರ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.