ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದಲ್ಲಿ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ನಿಂದ ಸೌಹಾರ್ಧ ಸಂಗಮ್ ಈದ್ ಮಿಲನ್ ಕಾರ್ಯಕ್ರಮ.

ಕಾರವಾರದಲ್ಲಿ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ನಿಂದ ಸೌಹಾರ್ಧ ಸಂಗಮ್ ಈದ್ ಮಿಲನ್ ಕಾರ್ಯಕ್ರಮ.

Sat, 14 May 2022 00:51:54  Office Staff   SO News

ಕಾರವಾರ : ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಕಾರವಾರ ನಗರದಲ್ಲಿ ಸೌಹಾರ್ದ ಸಂಗಮ ಈದ್ ಮಿಲನ್  ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ರಾಬಿಯಾ ಪ್ಲಾಜಾ ಹಾಲ್ ನಲ್ಲಿ  ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ‌ ಅತಿಥಿಗಳಾಗಿ ಕರಾವಳಿ ಮುಂಜಾವು ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಗಂಗಾಧರ ಹಿರೇಗುತ್ತಿ ಉಪಸ್ಥಿತರಿದ್ದು ಮಾತನಾಡಿದರು.

 ಸಾಮರಸ್ಯದ ಸಂಬಂಧಗಳು ನಶಿಸಿಹೋದ ಇವತ್ತಿನ‌ದಿನಗಳಲ್ಲಿ ಸಂಬಂಧಗಳು ಗಟ್ಟಿಯಾಗಲು ಶ್ರಮಿಸೋಣ ಎಂದರು. ಮನುಷ್ಯ ಪಠ ದೂರದೃಷ್ಟಿಯಿಂದ ಕೂಡಿರಬೇಕು. ದುರಾಲೋಚನೆಯಿಂದಲ್ಲ ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಎಂಜಿಎಫ್ ಲಯನ್ ಡಾ|| ಗಿರೀಶ ಕುಚಿನಾಡ ಮಾತನಾಡಿ,  ಮಾನವೀಯತೆಯ ఎల్ల ಧರ್ಮಗಳಿಗಿಂತ ಶ್ರೇಷ್ಠ. ಗಾಂಧಿ, ತೆರೆಸಾ, ಕಲಾಂರಂತಹ ದಾರ್ಶನಿಕರನ್ನು
ಕಂಡ ನಾವು ಅವರತ್ತ ಹೆಜ್ಜೆ ಹಾಕೋಣ ಎಂದರು.

ಇನ್ನೋರ್ವ ಅಥಿತಿಗಳಾದ ಜಾರ್ಜ್ ಫರ್ನಾಂಡಿಸ್‌ರವರು ಸೌಹಾರ್ದದ ಅವರ ಸಾಮಾಜಿಕ ಕಳಕಳಿ, ಸದಾ ಸ್ಮರಣೀಯ ಎಂದರು. 

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಡಾ|| ಸ್ಟ್ಯಾನಿ ಪಿಂಟೋ ಮಾತನಾಡಿ,  ಹಲವು ದೇವರೆಂದು ಹೇಳುವುದಕ್ಕಿಂತ ವನಸ್ಸಿನ ದೇವರನ್ನ ಹುಡುಕಬೇಕು. ಜೊತೆಗೆ ಮನೆ ಮತ್ತು ಮನಗಳಲ್ಲಿ ಏಕತೆ ತುಂಬುವಂತಾಗಬೇಕು ಎಂದರು.

 ಕಾರ್ಯಕ್ರಮದಲ್ಲಿ ಡಾ. ವೆಂಕಟೇಶ, ಕಿತ್ತೂರು,  ಉಪಸ್ಥಿತರಿದ್ದರು. ಪ್ರೋ ಬಿ ಬಿ ನಂದ್ಯಾಳ ಅವರನ್ನ ಗೌರವಿಸಲಾಯಿತು. ಈ ವೇಳೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

 ಈ ಸಂದರ್ಭದಲ್ಲಿ ಲಯನ್  ಅಲ್ತಾಪ್ ಶೇಖ್ ಸ್ಯಾಮ್ಸನ್ ಡಿಸೋಜಾ ಮುಂತಾದವರು ಭಾಗವಹಿಸಿದ್ದರು.

ಕಲ್ಲೂರ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕರಾದ ಇಬ್ರಾಹಿಂ ಕಲ್ಲೂರು ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದರು.  ಶಿಕ್ಷಕ ಗಣೇಶ ಬ್ರಿಷ್ಟನ್ನನವರ್  ನಿರೂಪಿಸಿ ವಂದಿಸಿದರು.


Share: