ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದಲ್ಲಿ ಅಪಘಾತ . ಬೈಕ್ ಸವಾರ ದುರ್ಮರಣ.

ಕಾರವಾರದಲ್ಲಿ ಅಪಘಾತ . ಬೈಕ್ ಸವಾರ ದುರ್ಮರಣ.

Fri, 23 Dec 2022 03:29:56  Office Staff   SO News

ಕಾರವಾರ : ತಾಲೂಕಿನ ಬಾಳ್ನಿ ಬಳಿ ಸರ್ಕಾರಿ ಬಸ್, ಕಾರು ಮತ್ತು  ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. 

ಗುರುವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದ್ದು, ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಸತ್ಯಂ ಗೋವಿಂದ ನಾಯ್ಕ (19) ಮೃತ ದುರ್ದೈವಿ.  ಬಸ್ಸಿನ ಚಕ್ರದಡಿ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ ಘಟನೆಯಲ್ಲಿ ಇಬ್ಬರು ಮಕ್ಕಳಿಗೆ ಗಾಯ.

ಬಸ್ ಅಂಕೋಲದಿಂದ ವಿಜಯಪುರ ಕಡೆ ತೆರಳುತಿತ್ತು. ಕಾರು ಕದ್ರಾ ಕಡೆಯಿಂದ ಕಾರವಾರದತ್ತ ಸಾಗುತಿತ್ತು. ಸವಾರ ಸ್ಥಳದಲ್ಲಿ‌ ಬೈಕ್ ನಿಲ್ಲಿಸಿ ನಿಂತಿದ್ದೆನ್ನಲಾಗಿದೆ. ಈ ವೇಳೆ ಕಾರು ವೇಗವಾಗಿ ಬಂದಿದ್ದರಿಂದ ದುರ್ಬಲ ನಡೆದಿದೆ. ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಜರಣ ದಾಖಲಾಗಿದೆ.


Share: