ಕಾರವಾರ: ನಗರದ ಕಾಜುಭಾಗದ ಶಹಾನಾ ಸೈಯದ್ ಕರ್ನಾಟಕ ವಿಶ್ವವಿದ್ಯಾನಿಲಯದ 72ನೇ ಘಟಿಕೋತ್ಸವದಲ್ಲಿ ಎಂಎಸ್‌ಸಿ ಭೌತಶಾಸ್ತ್ರ ವಿಭಾಗದಲ್ಲಿ ಎರಡು ಚಿನ್ನ ಪದಕವನ್ನು ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಾರವಾರ ನಗರದ ಕಾಜುಭಾಗ ನಿವಾಸಿಯಾಗಿರುವ ಅಬ್ದುಲ್ ಶುಕುರ ಸೈಯದ್ ಹಾಗೂ ಮುಮತಾಜ್ ಸೈಯದ್ ಅವರ ಪುತ್ರಿಯಾಗಿದ್ದಾರೆ.
ಶಹಾನಾ ತಮ್ಮ ಪದವಿ ಶಿಕ್ಷಣವನ್ನು ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಶಹಾನಾ ಸೈಯದ್ ಎಂ.ಎಸ್ಸಿ ಭೌತಶಾಸ್ತ್ರದಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ.
ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಮತ್ತು ನವದೆಹಲಿಯ ಇಂಟರನ್ಯಾಶನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಅಂಡ್ ಬಯೋಟೆಕ್ನಾಲಜಿ ನಿರ್ದೇಶಕ ಡಾ. ದಿನಕರ್ ಸಾಳುಂಕೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಗಳ ಉಪಸ್ಥಿತಿಯಲ್ಲಿ ಚಿನ್ನದ ಪದಕವನ್ನು ನೀಡಲಾಯಿತು.
ಬಾಲ್ಯದಿಂದಲೂ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಇವರು ಭಾಷಣ ಮತ್ತು ಚರ್ಚಾ ಮುಂತಾದ ಪತ್ಯೇತರ ಚಟುವಟಿಕೆಯ ವಿಷಯದಲ್ಲಿ ಜಿಲ್ಲಾ ಮಟ್ಟದಿಂದ ಹಿಡಿದು ರಾಜ್ಯದ ಮಟ್ಟದವರೆಗೆ ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೇವಲ ಶಿಕ್ಷಣ ಕ್ಷೇತ್ರವಲ್ಲದೆ ಶಿಕ್ಷಣೇತರ ಚಟುವಟಿಕೆಯಲ್ಲಿ ಅಪಾರ ಪ್ರತಿಭೆಯನ್ನು ಹೊಂದಿದ್ದಾರೆ.