ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದ ಬಾಲಮಂದಿರಕ್ಕೆ ದಾಂಡೇಲಿಯ ಏಳು ವರ್ಷದ ಬಾಲಕಿ ದಾಖಲು

ಕಾರವಾರದ ಬಾಲಮಂದಿರಕ್ಕೆ ದಾಂಡೇಲಿಯ ಏಳು ವರ್ಷದ ಬಾಲಕಿ ದಾಖಲು

Tue, 30 Aug 2022 02:31:41  Office Staff   S O News/Press release

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಹಳಿಯಾಳ ಗಾವಠಾಣಾದ ಅಂದಾಜು 46 ವಯಸ್ಸಿನ ಲಾರಿ ಚಾಲಕನಾದ ಅಬ್ದುಲ್ ಗಣಿ ಮಹಮ್ಮದ್ ಮಕಾಂದಾರನ 7 ವರ್ಷದ ಮಗಳಾದ ಬಾಲಕಿ ಬಿಬಿಫಾತಿಮಾ ಅಬ್ದುಲ್ ಗಣಿ ಮಕಾಂದಾರ ಇಕೆಯು ಉತ್ತರ ಕನ್ನಡದ ಮಕ್ಕಳ ಕಲ್ಯಾಣ ಸಮಿತಿ ರವರ ಆದೇಶದ ಮೇರೆಗೆ ಸರಕಾರಿ ಬಾಲಕಿಯರ ಬಾಲಮಂದಿರ ಕಾರವಾರದಲ್ಲಿದ್ದು.

ಇಕೆಯ ತಾಯಿ ಮದಿನಾ ಅಬ್ದುಲ್ ಗಣಿ ಮಕಾಂದಾರ ಮೃತಪಟ್ಟಿರುತ್ತಾಳೆ, ಇವರೆಗೂ ಮಕ್ಕಳ ಪಾಲಕರಾಗಲಿ, ಸಂಬಂಧಿಕರಾಗಲಿ ಮಗುವನ್ನು ನೋಡಲು ಬಂದಿರುವುದಿಲ್ಲ.

ಇತ್ತೀಚೆಗೆ ಬಾಲಕಿಯ ತಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾಲೆಗಳ್ಳಿ ಖಾಯಂ ವಿಳಾಸವಾಗಿದೆ ಎಂದು ತಿಳಿದು ಬಂದಿದ್ದು ಆದರೆ ಸದ್ಯದ ಮಟ್ಟಿಗೆ ಆ ವಿಳಾಸದಲ್ಲಿಯೂ ವ್ಯಕ್ತಿ ಕಂಡುಬಂದಿರುವುದಿಲ್ಲ.

ಹಾಗಾಗಿ ಈ ವ್ಯಕ್ತಿ ಕಂಡು ಬಂದಲ್ಲಿ 08382-226501 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಹಾಗೂ ಆ ವ್ಯಕ್ತಿಯು ಮಕ್ಕಳ ಕಲ್ಯಾಣ ಸಮಿತಿ ಕಾರವಾರ ರವರಲ್ಲಿ ಹಾಜರಾಗಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: