ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಜಿ20 ಬೀಚ್ ಸ್ವಚ್ಛತೆ.

ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಜಿ20 ಬೀಚ್ ಸ್ವಚ್ಛತೆ.

Mon, 22 May 2023 00:01:26  Office Staff   SO News

ಕಾರವಾರ : ಭಾರತ ಸರಕಾರದ ಜಿ 20 ಶೃಂಗಸಭೆ  ಅಧ್ಯಕ್ಷತೆ ವಹಿಸಿರುವ ಹಿನ್ನಲೆಯಲ್ಲಿ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಗತದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ನಡೆಯಿತು.

ಸಮುದ್ರದ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಅವುಗಳಿಂದ ಜೀವಚರಗಳ ಮೇಲೆ ಗಉಂಟಾಗುವ ಪರಿಣಾಮಗಳ ಕುರಿತು ಜಾಗತಿಕ ಗಮನ ಸೆಳೆಯುವದು ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಕಡಲತೀರ ಮತ್ತು ಸಮುದ್ರ ಮಾಲಿನ್ಯ ತಡೆಗಟ್ಟಲು ಕ್ರಮವಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಈಶ್ವರ ಚಾಂದೂ, ಕೋಸ್ಟ್ ಗಾರ್ಡ ಕಮಾಂಡೆಂಟ್ ಪ್ರದೀಪ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ, ನೆಹರು ಯುವ ಕೇಂದ್ರದ ಅಧಿಕಾರಿ, ಸಿ ಆರ್. ಜೆಡ್ ಎಸಿಎಫ್ ಧಫೇದಾರ, ಎಸಿಎಫ್ ಜಯೇಶ, ಡಿ. ಡಿ. ಫಿಶರೀಸ್  ರವೀಂದ್ರ ತಳೇಕರ, ಗಣಪತಿ ಹೆಗಡೆ, ಹಾಜರಿದ್ದರು.

ಈ ಸಂದರ್ಭದಲ್ಲಿ ಸ್ವಚ್ಛತಾ ಪ್ರತಿಜ್ಞೆಯನ್ನು ರವೀಂದ್ರ ತಳೇಕರ, ಬೋಧಿಸಿದರು.
ಸ್ಟಾರ್ ಚಾಯ್ಸ್ ಕಡಲ ಉತ್ಸವ ಸಮಿತಿ,  ದಿವೇಕರ ಕಾಮರ್ಸ್ ಎನ್. ಎಸ್. ಎಸ್, ಕೋಸ್ಟ್ ಗಾರ್ಡ್ ಸಿಬ್ಬಂದಿಗಳು, ಕರಾವಳಿ ಕಾವಲು ಪಡೆ, ಸೈನ್ಸ್ ಸೆಂಟರ್, ಅರಣ್ಯ ಇಲಾಖೆ, ಸಾರ್ವಜನಿಕರು ವಿವಿಧ ತಂಡಗಳಲ್ಲಿ ಸುಮಾರು 1ಕಿ.ಮೀ. ಉದ್ದದ ಕಡಲ ತೀರವನ್ನ ಸ್ವಚ್ಛಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಅಂಗವಾಗಿ ಮರಳು ಕಲಾಕೃತಿ ರಚಿಸಲಾಗಿತ್ತು. ಹಾಗೂ ಸೆಲ್ಫೀ ಪಾಯಿಂಟ್, ಸಿಗ್ನೇಚರ್ ಕೆಂಪೇನ್ ಏರ್ಪಡಿಸಲಾಗಿತ್ತು.


Share: