ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ ಶಾಸಕಿಗೆ ಜೀವ ಬೆದರಿಕೆ ಇದೆಯಂತೆ.

ಕಾರವಾರ ಶಾಸಕಿಗೆ ಜೀವ ಬೆದರಿಕೆ ಇದೆಯಂತೆ.

Thu, 09 Mar 2023 04:48:16  Office Staff   SO News

ಕಾರವಾರ :   ತನಗೆ ಕಳೆದ ಕೆಲ ದಿನಗಳಿಂದ ಜೀವ ಬೆದರಿಕೆ ಇದೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಬುಧವಾರ  ಮಾಧ್ಯಮದವರಿಗೆ ತಿಳಿಸಿದ್ದಾರೆ.

ರಾತ್ರಿ ಸಮಯದಲ್ಲಿ ತನ್ನ ಮನೆಯ ಎದುರಿನ ಬೀದಿ ದೀಪವನ್ನ ತೆಗೆದು ಹೆದರಿಸುತ್ತಾರೆ. ಹೊರಗಡೆ ಹೋಗಿರುವ ಸಂದರ್ಭದಲ್ಲಿ ಟ್ರಕ್ ತಂದು ನನ್ನ ವಾಹನಕ್ಕೆ ಢಿಕ್ಕಿ ಹೊಡೆಸಲು ಯತ್ನಿಸುತ್ತಾರೆ‌. ನಾನು ಎಲ್ಲೆ ಹೋದ್ರು ಕೂಡ ಕಾರ್ ನಲ್ಲಿ ನನ್ನ ಕಾರನ್ನ ಹಿಂಬಾಲಿಸ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

 ಅಲ್ಲದೆ ನನ್ನ ಮತ್ತು ನನ್ನ ಅಕ್ಕನ ಮಗನ ಕಿಡ್ನಾಪ್ ಮಾಡಲು ಪ್ರಯತ್ನಿಸಲಾಗಿದೆ. ಈ ಹಿಂದಿನಿಂದಲ್ಲೂ ಇದನ್ನ ಮಾಡುತ್ತಿದ್ದಾರೆ. ಅದನ್ನ ಈಗ ಸಹ  ಮುಂದುವರೆಸಿದ್ದಾರೆ. ಆದರೆ ಯಾರು ಏನು ಅಂತಾ ಇದುವರೆಗೂ  ಗೊತ್ತಾಗುತ್ತಿಲ್ಲ. ನನಗೆ ಅನೇಕ ವಿರೋಧಿಗಳು ಇದ್ದಾರೆ. ತಮಗೆ ಅಧಿಕಾರ ಸಿಕ್ಕಿಲ್ಲ ಎಂದು ಹತಾಶರಾದವರೂ ಇದ್ದಾರೆ‌. ನಾನು ಓರ್ವ ಮಹಿಳೆಯಾಗಿರುವುದರಿಂದ ನನ್ನ ಬೆಳವಣಿಗೆ ಹಾಗೂ ನಾನು ಶಾಸಕಿ ಆದ ಬಳಿ ಮಾಡಿರುವ ಅಭಿವೃದ್ಧಿ ಕೆಲಸವನ್ನ ನೋಡಿ ಸಹಿಸಿಕೊಳ್ಳಲಾಗದವರು ಇದ್ದಾರೆಂದು ರೂಪಾಲಿ ನಾಯ್ಕ ಹೇಳಿದ್ದಾರೆ.

ಈ ಬಗ್ಗೆ ಗೃಹಮಂತ್ರಿಗಳ ಗಮನಕ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರರ ಗಮನಕ್ಕೆ ತರಲಾಗಿದೆ.
ಹೀಗಾಗಿ ಭದ್ರತೆ ಪಡೆದುಕೊಂಡಿದ್ದೆನೆ‌.  ಗೃಹಮಂತ್ರಿಗಳು ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.  ಈ ಬಗ್ಗೆ ಪ್ರಕರಣ ದಾಖಲಿಸುತ್ತೇನೆಂದ ಅವರು, ನನಗೆ  ಬೆದರಿಕೆ ಹಾಕಿದ್ದರೆ ಓಡಿ ಹೋಗುತ್ತೇನೆ  ಅಂತಾ ತಿಳಕೊಂಡಿದ್ದಾರೆ. ನಾನು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅವರು  ಸಾಯಿಸಿದ್ರೆ ಸಾಯುವುದೇ, ಹಾಟ್ ಅಟ್ಯಾಕ್ ಬಂದ್ರೂ ಸಾಯುವುದೇ . ಎಲ್ಲೋ ಒಂದುಕಡೆ ಸಾಯುವುದು ಒಂದೇ ಸಲ. ನಾನು ಏನು ಕೆಲಸ ಮಾಡಬೇಕೋ ಆ ಕೆಲಸ ಮಾಡಿ ಸಾಯುತ್ತೇ‌ನೆ ಎಂದು ಬೆದರಿಕೆ ಹಾಕುವವರಿಗೆ ಶಾಸಕಿ ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದ್ದಾರೆ.


Share: