ಕಾರ್ಕಳ, ನವೆಂಬರ್ 30: ತಾಲೂಕಿನ ಕಾಂತಾವರ ಗ್ರಾಮದ ಬಾರಾಡಿ ಸೂರ್ಯ-ಚಂದ್ರ ಕಂಬಳ ಹಾಗೂ ಕಾಂತಾವರ ತುಳು ಕೂಟವು ಡಿ.೧೨ರಂದು ನಡೆಯಲಿದೆ ಎಂದು ಡಾ. ಜೀವಂಧರ್ ಬಲ್ಲಾಳ್ ತಿಳಿಸಿದರು.
ಅವರು ಭಾನುವಾರ ಬಾರಾಡಿಯಲ್ಲಿ ನಡೆದ ಪತ್ರ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾರಾಡಿ ಬೀಡು ದಿ.ಪಾಂಡ್ಯ ರಾಜ ಬಲ್ಲಾಳ್ ಸ್ಮಾರಕ ಕಂಬಳ ಕ್ರೀಡಾಂಗಣದಲ್ಲಿ ಈ ಬಾರಿಯ ಕಂಬಳವು ರಜತ ಮಹೋತ್ಸವ ಆಚರಿಸುತ್ತಿದ್ದು, ಕಳೆದ ೨೪ ವರ್ಷದ ಬಾರಾಡಿ ಕಂಬಳ ಕ್ರೀಡೋತ್ಸವದಲ್ಲಿ ಅತೀ ಹೆಚ್ಚು ಬಹುಮಾನ ಗಳಿಸಿದ ಕೋಣಗಳ ಯಜಮಾನರನ್ನು ಗೌರವಿಸಲಾಗುವುದು, ವಿಶೇಷವಾಗಿ ಈ ಬಾರಿ ಪ್ರಥಮ, ದ್ವಿತೀಯ ಬಹುಮಾನದೊಂದಿಗೆ ಪ್ರತೀ ವಿಭಾಗದಲ್ಲಿ ತೃತೀಯ ಬಹುಮಾನ ನೀಡಲಾಗುವುದು ಎಂದರು.
ಪತ್ರ್ರಿಕಾಗೋಷ್ಠಿಯಲ್ಲಿ ಡಾ.ಸಿ.ಕೆ.ಬಲ್ಲಾಳ್, ಜಯೇಶ್ ಬಲ್ಲಾಳ್, ಧರ್ಮರಾಜ್ ಕಂಬಳಿ, ಮಹಾವೀರ್ ಪಾಂಡಿ ಮತ್ತಿತರರು ಉಪಸ್ಥಿತರಿದ್ದರು.