ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊಸಂಗಡಿ: ಸೂಫಿಯಾ ಮದನಿ ಯವರ ಬಂಧನವನ್ನು ವಿರೋಧಿಸಿ ಹೊಸಂಗಡಿಯಲ್ಲಿ ನಿರಾಹಾರ ಸತ್ಯಾಗ್ರಹ

ಹೊಸಂಗಡಿ: ಸೂಫಿಯಾ ಮದನಿ ಯವರ ಬಂಧನವನ್ನು ವಿರೋಧಿಸಿ ಹೊಸಂಗಡಿಯಲ್ಲಿ ನಿರಾಹಾರ ಸತ್ಯಾಗ್ರಹ

Mon, 21 Dec 2009 16:37:00  Office Staff   S.O. News Service
ಕುಂಜತ್ತೂರು, ಡಿಸೆಂಬರ್ 21:ಪಿಡಿಪಿ ಅಧ್ಯಕ್ಷರಾದ ಅಬ್ದುಲ್ ನಾಸರ್ ಮದನಿಯವರ ಧರ್ಮ ಪತ್ನಿ ಸೂಫಿಯಾ ಮದನಿಯವರ ಬಂದನವನ್ನು ವಿರೋಧಿಸಿ ಮಂಜೇಶ್ವರ ಮಂಡಲ  ಪಿಡಿಪಿ ಕಾರ್ಯಕರ್ತರು ಇಂದು ಹೊಸಂಗಡಿ ಜಂಕ್ಷನ್ ನಲ್ಲಿ ನಿರಾಹಾರ ಸತ್ಯಾಗ್ರಹವನ್ನು ಆರಂಭಿಸಿದರು.

ಸೂಫಿಯಾ ಮದನಿಯವರನ್ನು ಬಂಧಿಸಿರುವುದರಲ್ಲಿ ಷಡ್ಯಂತವಿದೆ.ಮದನಿಯವರನ್ನು ಜೈಲಿಗೆ ಅಟ್ಟಿದಂತೆ ಮದನಿಯವರ ಪತ್ನಿಯವರನ್ನು ವಿನಾಕಾರಣ ಜೈಲಿಗಟ್ಟಿದ್ದು ರಾಜಕೀಯ ಹಾಗು ಮಾಧ್ಯಮಗಳ ಷಡ್ಯಂತರವಾಗಿದೆ. ಸೂಫಿಯಾ ಮದನಿಯವರನ್ನು ತನಿಖೆಗೆಗೊಳಪಡಿಸಿದ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆಗೊಳಪಡಿಸಿದರೆ ಮಾತ್ರ ಇದರ ಸತ್ಯಾಂಶ ಬಯಲಾಗಬಹುದೆಂದು ಪಿಡಿಪಿ ಜಿಲ್ಲಾ ವಕ್ತಾರ ಎಸ್.ಎಂ. ಬಶೀರ್ ಹೇಳಿದರು.
 
ಅಬ್ದುಲ್ ನಾಸರ್ ಮದನಿ ಮತ್ತು ಮಕ್ಕಳು ನಮ್ಮನ್ನು ಬದುಕಲು ಬಿಡಿ ತನ್ನ ಕುಟುಂಬದ ವಿರುದ್ದ ನಡೆಯುವ ಗೂಢಾಲೋಚನೆಯನ್ನು ಬಯಲಿಗೆಳೆಯಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟು ಮುಂದಿನ ಶುಕ್ರವಾರದಂದು ಸೆಕ್ರೆಟರಿಯೇಟ್ ಮುಂಬಾಗದಲ್ಲಿ ನಿರಾಹಾರ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.ಈ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಂಜೇಶ್ವರ ಮಂಡಲದಿಂದ ಪಿಡಿಪಿ ಕಾರ್ಯಕರ್ತರು ನೆರವಾಗಲಿದ್ದಾರೆಂದು ತಿಳಿಸಿದರು.ಇವತ್ತಿನ ನಿರಾಹಾರ ಸತ್ಯಾಗ್ರಹದಲ್ಲಿ ಜಿಲ್ಲಾ ನಾಯಕರು ಹಾಗು ಪಿಡಿಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಿರಾಹಾರ ಸತ್ಯಾಗ್ರಹದ ಉದ್ಘಾಟನೆಯನ್ನು ಪಿಡಿಪಿ ಜಿಲ್ಲಾ ಸೆಕ್ರಟರಿ ಯೂನುಸ್ ತಲಂಗರ ನೆರವೇರಿಸಿದರು.ಪಿಡಿಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಉಮ್ಮರ್ ವರ್ಕಾಡಿ ಅಧ್ಯಕ್ಷತೆ ವಹಿಸಿದರು.ಜಿಲ್ಲಾ ಸಮಿತಿ ವಕ್ತಾರ ಎಸ್.ಎಂ. ಬಶೀರ್ ಸೇರಿದಂತೆ ಹಲವಾರು ನೇತಾರರು ಉಪಸ್ಥರಿದ್ದರು.  ಚಿತ್ರ ಜತೆಗಿದೆ. 

Share: