ಉಡುಪಿ, ನ.7: ಉಡುಪಿಯ ಇ-ಸ್ಕೂಲ್ ಆಶ್ರಯದಲ್ಲಿ ಉಡುಪಿ ಕಿದಿಯೂರು ಹೊಟೇಲ್ನ ಶೇಷಶಯನ ಹಾಲ್ನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಆರನೇ ವಾರ್ಷಿಕ ಉಡುಪಿ ಜಿಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವ ಹಾಗೂ ‘ಬ್ರೈನ್ಕ್ವೆಸ್ಟ್-೨೦೦೯’ ಸ್ಪರ್ಧೆಗೆ ಶನಿವಾರ ಚಾಲನೆ ನೀಡಲಾಯಿತು.
ಕತ್ತಲೆ ಆವರಿಸಿದ ಕೋಣೆಯಲ್ಲಿ ಬಿಳಿಬಟ್ಟೆಗಳನ್ನು ಧರಿಸಿದ ವಿವಿಧ ಮಾದರಿಯ ಭೂತಗಳು, ಕಚ್ಚುವ ಹಾವುಗಳು, ಭೂತಗಳ ಚೀರಾಟಗಳಿಂದ ಕೂಡಿದ ವಿಚಿತ್ರ ಲೋಕದಂತಿ ರುವ ಆನಿಮೆಟ್ರೋನಿಕ್ಸ್ ‘ಭೂತಬಂಗಲೆ’. ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಈ ಭೂತಬಂಗಲೆ ಮಕ್ಕಳನ್ನು ಹಿರಿಯನ್ನು ಭಯಭೀತರನ್ನಾಗಿಸುವಂತಿತ್ತು.
ಸಂಗೀತದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯವ ಎರಡು ರೊಬೊಟುಗಳು, ನೈಜ್ಯ ಬೆಕ್ಕಿನಂತೆ ಬಾಲ ಅಲ್ಲಡಿಸುತ್ತ ‘ಮಿಯಾಂವ್’ ಗುಟ್ಟುವ ‘ಬೆಕ್ಕು ರೊಬೊಟ್’, ನೆಲ ಗುಡಿಸುವ ‘ಬ್ರೆಶ್ ರೊಬೊಟ್’, ಏಕಾಂಗಿಯಾಗಿರುವ ವ್ಯಕ್ತಿ ಯೊಂದಿಗೆ ಮಾತನಾಡುವ ಹೂವು ‘ಹನಪ್ಪ ರೊಬೊಟ್’, ಚಿತ್ರ ಬಿಡಿಸುವ ‘ಡೊಡ್ಲಿಂಗ್ ರೊಬೊಟ್’ಗಳು ಈ ಬಾರಿಯ ಬ್ರೈನ್ಕ್ವೆಸ್ಟ್ನ ಹೊಸ ಪರಿಚಯಗಳಾಗಿದ್ದವು.
ರಾಕ್ ಸಿಂಗರ್ ರೊಬೊಟ್, ಡೈನೊಸರ್ ರೊಬೊಟ್, ಪರಿಸರ ಪುನರ್ಬಳಕೆಯ ಮಾದರಿ, ಬೆಂಕಿ ಸೂಚಕ ಯಂತ್ರ ಹೊಂದಿರುವ ಮನೆ, ಸೇರಿದಂತೆ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ೨೦೦ಕ್ಕೂ ಅಧಿಕ ವಿಜ್ಞಾನ ಮತ್ತು ಇಂಜಿನಿಯರಿಂಗ್ಗೆ ಸಂಬಂzs ಪಟ್ಟ ಪ್ರದರ್ಶನಗಳು ಹಾಗೂ ೪೦ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.
ಈ ಎರಡು ದಿನಗಳಲ್ಲಿ ವಿದ್ಯಾರ್ಥಿಗಳ ವೈಜ್ಞಾನಿಕ ಪ್ರದರ್ಶನದಲ್ಲಿ ಫಿಝಿಕಲ್ ಸೈನ್ಸ್ ಹಾಗೂ ಲೈಫ್ ಸೈನ್ಸ್ ವಿಭಾಗಗಳಲ್ಲಿ ‘ಸೈನ್ಸ್ಕ್ವೆಸ್ಟ್’ ಸ್ಪರ್ಧೆಯನ್ನು, ಐಕ್ವೆಸ್ಟ್ನಲ್ಲಿ ಮ್ಯಾಥ್ ಸ್ಕ್ರಾಬೆಲ್ ಗೇಮ್ಸ್, ವರ್ಚುವಲ್ ಗೇಮ್ಸ್, ಪ್ರಾಬ್ಲಮ್ ಸಾಲ್ವಿಂಗ್ ಸ್ಪರ್ಧೆಗಳು, ಫಿಲ್ಟರ್ ಕ್ವೆಸ್ಟ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಇ-ಸ್ಕೂಲ್ನ ನಿರ್ದೇಶಕಿ ಡಾ.ಪೂರ್ಣಿಮಾ ಕಾಮತ್ ತಿಳಿಸಿದ್ದಾರೆ