ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / `ಚಿಕೂನ್‌ಗುನ್ಯಾ'ಕ್ಕೆ ನೀಡಿದ ಚಿಕಿತ್ಸೆ: ಎರಡೂವರೆ ವರ್ಷದಿಂದ ಚಾಪೆ ಹಿಡಿದ ಬಾಲಕ

`ಚಿಕೂನ್‌ಗುನ್ಯಾ'ಕ್ಕೆ ನೀಡಿದ ಚಿಕಿತ್ಸೆ: ಎರಡೂವರೆ ವರ್ಷದಿಂದ ಚಾಪೆ ಹಿಡಿದ ಬಾಲಕ

Mon, 28 Dec 2009 19:45:00  Office Staff   S.O. News Service

ಮೂಡಬಿದ್ರೆ: ಈ ಬಾಲಕನಿ ಗಿನ್ನೂ 13ರ ಹರೆಯ. ಶಾಲೆಯಂ ಗಳದಲ್ಲಿ ತನ್ನದೇ ಪ್ರಾಯದವರೊಂದಿಗೆ ಆಡಿ ನಲಿದಾಡಬೇಕಾದವನು ಮನೆಯೊಳಗೆ ಚಾಪೆಗೆ ಶರ ಣಾಗಿದ್ದಾನೆ. ಎದ್ದು ನಡೆದಾಡದಂತಹ ಸ್ಥಿತಿ. ಪ್ರತಿಯೊಂದಕ್ಕೂ ಊರು ಗೋಲೇ ಆಧಾರ. ಇಷ್ಟಕ್ಕೂ ಇದಕ್ಕೆಲ್ಲಾ ಕಾರಣವಾದದ್ದು ಎರಡು ವರ್ಷದ ಹಿಂದೆ ಭಾರಿ ಸುದ್ದಿ ಮಾಡಿದ್ದ ಚಿಕೂನ್‌ ಗುನ್ಯಾ ಎಂಬ ರೋಗ.

ಇದು ಸಿದ್ಧಕಟ್ಟೆಯ ಅಂಗರ ಕರಿಯ ನಿವಾಸಿ ಮುಹಮ್ಮದ್‌ ಹನೀಫ್‌ ಎಂಬವರ ಪುತ್ರ ಮುಹಮ್ಮದ್‌ ರವೂಫ್‌ ಎಂಬ ಬಾಲಕನ ಅಸಹಾಯಕ ಕಥೆ.

260209_report12.jpg 

 

ಹನೀಫ್‌-ರಜಿಯಾ ದಂಪತಿಯ ನಾಲ್ಕು ಮಕ್ಕಳಲ್ಲಿ ಎರಡನೆಯವನೇ ರವೂಫ್‌. ಶಾಲೆಗೆ ಹೋಗುತ್ತಿದ್ದ ಸಮಯ. ಎರಡೂವರೆ ವರ್ಷದ ಹಿಂದೆ ಇದ್ದಕ್ಕಿದ್ದಂತೆ ಜ್ವರ ಮತ್ತು ಕಾಲು ನೋವು ಕಾಣಿಸಿದ್ದರಿಂದ ಕೂಡಲೇ ಸಿದ್ಧಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದಾಗ ವಿಶ್ರಾಂತಿ ತೆಗೆದು ಕೊಳ್ಳಲಿ ಎಂದು ಸಲಹೆ ನೀಡಿದ್ದ ವೈದ್ಯರಲ್ಲಿಗೆ ಎರಡನೇ ಬಾರಿಗೆ ಕರೆದೊ ಯ್ದಾಗ ಬಿ.ಸಿ.ರೋಡಿನ ಆಸ್ಪತ್ರೆಗೆ ಚೀಟಿ ನೀಡಿದ್ದರು. ಮೊದಲು ಬಿ.ಸಿ. ರೋಡಿನಲ್ಲೂ ಕಾಲಿಗೆ ಹೊಯ್ಗೆ ತುಂಬಿದ ಚೀಲವನ್ನು ತೂಗು ಹಾಕಿ ಸರಿಯಾಗುತ್ತದೆ ಎಂದು ಹೇಳಿದ್ದರು.

ಆದರೆ ಮತ್ತೊಮ್ಮೆ ಬಾತು ಹೋಗಿದ್ದ ಕಾಲನ್ನು ನೋಡಿ ಮತ್ತು ಒಂದು ಕಾಲಿನಲ್ಲಿ ಕೀವು ಕಾಣಿಸಿಕೊಂಡ ಪರಿಣಾಮ ಕಾಲನ್ನು ತುಂಡರಿಸಬೇಕೆಂದು ಹೇಳಿದ್ದರು. ಮೊದಲೇ ಬಡತನದಲ್ಲಿರುವ ಕುಟುಂಬಕ್ಕೆ ವೈದ್ಯರ ಈ ಹೇಳಿಕೆ ಆಘಾತ ನೀಡಿತ್ತು. ಚಿಕೂನ್‌ಗುನ್ಯಾ ಎಂದು ಸಣ್ಣ ಪ್ರಾಯದ ಹುಡುಗನಿಗೆ ವೈದ್ಯರು, ವೈದ್ಯರಾಗ ಬಯಸುವ ವಿದ್ಯಾರ್ಥಿಗಳು ಯಾವ ರೀತಿಯ ಔಷಧಿ ಅಥವಾ ಇಂಜೆಕ್ಷನ್‌ ಚುಚ್ಚಿದರೋ ಗೊತ್ತಿಲ್ಲ. ಬಹುಷಃ ಅದೇ ಚಿಕಿತ್ಸೆ ಈ ಬಾಲಕನನ್ನು ಇಂದು ಈ ಸ್ಥಿತಿಗೆ ತಲುಪಿಸಿದೆ.

ಕಾಲನ್ನು ತುಂಡರಿಸಬೇಕೆಂಬ ವೈದ್ಯರ ಸಲಹೆಯಿಂದ ಕಂಗಾಲಾದ ರವೂಫ್‌ನ ಮನೆ ಮಂದಿ ನೇರ ಮಂಗಳೂರಿನ ಡಾ. ಶಾಂತಾರಾಮ ಶೆಟ್ಟಿಯವರಲ್ಲಿಗೆ ಹೋಗಿದ್ದಾರೆ. ಅವರು ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಡಾ. ವಿಕ್ರಂ ಶೆಟ್ಟಿಯವರಿಗೆ ಚೀಟಿ ಕೊಟ್ಟಿದ್ದರು. ಈ ವೈದ್ಯರ ನೇತೃತ್ವದಲ್ಲಿ ರವೂಫ್‌ನ ಬಾತುಹೋಗಿದ್ದ ಕಾಲಿನಿಂದ ಶಸ್ತ್ರಚಿಕಿತ್ಸೆ ಮೂಲಕ ಎರಡು ಲೀ.ನಷ್ಟು ಕೀವು ತೆಗೆಯಲಾ ಗಿತ್ತು. ಆ ಬಳಿಕ ಮತ್ತೊಮ್ಮೆ ಕೀವು ತೆಗೆಯಲಾಗಿದೆ. ಈಗಲೂ ರವೂಫ್‌ನ ಎಡಕಾಲಿನಿಂದ ಕೀವು ಬರುತ್ತಿದೆ. ಇದರಿಂದಾಗಿಯೇ ಈತನಿಗೆ ಚಾಪೆಯಿಂದೇಳದ ಸ್ಥಿತಿ ಬಂದೊದಗಿದೆ. ಆರಂಭದಲ್ಲಿ ನೀಡಿದ ವೈದ್ಯರ ಚಿಕಿತ್ಸೆ ಯಿಂದಲೇ ಬಾಲಕನಿಗೆ ಈ ಸ್ಥಿತಿ ಬರಲು ಕಾರಣವೆನ್ನಲಾಗಿದೆ.

ಮತ್ತೊಂದು ಆಘಾತ: ರವೂಫ್‌ನ ಸ್ಥಿತಿ ಹೀಗಾದರೆ, ಕಳೆದ ನವೆಂಬರ್‌ನಲ್ಲಿ ಈ ಕುಟುಂಬಕ್ಕೆ ಮತ್ತೊಂದು ಆಘಾತ ಬಂದೆರಗಿತ್ತು. ಅದು ಸಾವಿನ ಸುದ್ದಿ. ಮದರಸ ಕ್ಕೆಂದು ಹೋಗಿದ್ದ ಹನೀಫ್‌ ಅವರ ಹಿರಿಮಗ ಮುಹಮ್ಮದ್‌ ರಹೀಂ (14) ಫಲ್ಗುಣಿ ನದಿಯಲ್ಲಿ ಕೊಚ್ಚಿಹೋಗಿದ್ದ. ಹೊಯ್ಗೆ ತೆಗೆಯುವವರು ತೋಡಿದ್ದ ಗುಂಡಿಗೆ ಸಿಲುಕಿ ಮುಹಮ್ಮದ್‌ ರಹೀಂ ಮತ್ತು ನೆರೆಮನೆಯ ನವಾಝ್‌ ಎಂಬ ಬಾಲಕರಿಬ್ಬರು ನೀರು ಪಾಲಾಗಿದ್ದರು.

ಒಂದೆಡೆ ಹಾಸಿಗೆ ಹಿಡಿದಿರುವ ಮಗ, ಮತ್ತೊಂದೆಗೆ ಹಿರಿಮಗನನ್ನು ಕಳೆದುಕೊಂಡ ದುಃಖ. ಎರಡೂ ಘಟನೆಗಳಿಂದ ಜರ್ಝರಿತರಾದ ಹನೀಫ್‌ ಅವರು ಮೌನಕ್ಕೆ ಶರಣಾಗಿದ್ದಾರೆ. ಲಾರಿ ಚಾಲಕರಾಗಿ ದುಡಿಯುತ್ತಿದ್ದ ಹನೀಫ್‌ ಅವರಿಗೆ ಸಿಗುವ ಸಂಬಳದಿಂದಲೇ ಕುಟುಂಬದ ನಿರ್ವಹಣೆಯಾಗಬೇಕು. ಇದೀಗ ಮಾನಸಿಕವಾಗಿ ನೊಂದಿ ರುವ ಹನೀಫ್‌ ಅವರು ಸರಿಯಾಗಿ ಕೆಲಸಕ್ಕೂ ಹೋಗುತ್ತಿಲ್ಲ. ಒಮ್ಮೆಗೆ ಮಗ ರವೂಫ್‌ನನ್ನು ಚಿಕಿತ್ಸೆಗೆ ಕರೆದೊಯ್ಯಲು ಕಡಿಮೆಯೆಂದರೆ 2ರಿಂದ 3 ಸಾವಿರ ರೂ. ಬೇಕು. ಜೊತೆಗೆ ಜೀವನ ನಿರ್ವಹಣೆಯಾಗಬೇಕು. ಬಡತನದಲ್ಲಿದ್ದರೂ ಇಷ್ಟರವರೆಗೆ ಯಾರ ಬಳಿಯೂ ಕೈ ಚಾಚದ ಹನೀಫ್‌ ಇದೀಗ ಅಸಹಾಯಕರಾಗಿ ದಾನಿಗಳ ನೆರವಿನ ಹಸ್ತಕ್ಕೆ ಕೈಯೊಡ್ಡಿದ್ದಾರೆ. ಮುಸ್ಲಿಂ ಸಂಘನೆಗಳು, ಇತರ ಸಂಘಟನೆಗಳು ಮತ್ತು ಸಹೃದಯರು ಸಹಾಯ ಮಾಡಲಿಚ್ಛಿಸಿದಲ್ಲಿ ಸಿದ್ದಕಟ್ಟೆಯ ವಿಜಯಾ ಬ್ಯಾಂಕ್‌ನ ಉಳಿತಾಯ ಖಾತೆ ಸಂಖ್ಯೆ 7487ಕ್ಕೆ ಧನಸಹಾಯವನ್ನು ಕಳುಹಿಸಬಹುದು.

ಅಶ್ರಫ್‌ ವಾಲ್ಪಾಡಿ

ಸೌಜನ್ಯ: ಜಯಕಿರಣ


Share: