ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ ತಾಲೂಕಿನ ಕೊಳಗೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆದ ಹಳ್ಳಿ ಕಡೆ ಕಾರ್ಯಕ್ರಮ.

ಕಾರವಾರ ತಾಲೂಕಿನ ಕೊಳಗೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆದ ಹಳ್ಳಿ ಕಡೆ ಕಾರ್ಯಕ್ರಮ.

Sun, 19 Mar 2023 05:04:05  Office Staff   SO News

ಕಾರವಾರ : ಸರಕಾರದದಿಂದ ಮಂಜೂರು ಆಗುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ನೇರವಾಗಿ  ತಲುಪಿಸಲು ಕೈಗೊಂಡ ವಿನುತನ ಕಾರ್ಯಕ್ರಮ ಇದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಕಾರವಾರ ತಾಲೂಕಿನ ಸಾವಂತವಾಡ ಹೋಬಳಿಯ ಅಸ್ನೋಟಿ ಗ್ರಾಮ ಪಂಚಾಯತ  ವ್ಯಾಪ್ತಿಯ ಕೊಳಗೆ ಗ್ರಾಮದ ಮಿಠಾಬಾ ರುಕ್ಮಾಯಿ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ, ತಾಲೂಕಾ ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಜಿಲ್ಲಾಧಿಕಾರಿಗಳ ನಡೆದ ಹಳ್ಳಿ ಕಡೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು, ಅನಿವಾರ್ಯ ಕಾರಣಗಳಿಂದ ಸಾರ್ವಜನಿಕರು  ಸರ್ಕಾರಿ ಕಚೇರಿಗಳಿಗೆ ಆಗಮಿಸಲು ಸಾಧ್ಯವಾಗದ ಕಾರಣ ಮತ್ತು ಅವರ ಅವಶ್ಯಕತೆಯನ್ನು ಪೂರೈಸಲು ಇಡೀ ಜಿಲ್ಲಾ ಘಟಕವೇ ಹಳ್ಳಿ ಕಡೆ  ಬಂದು ಜನರಿಂದ ಅವಹಾಲುಗಳನ್ನು ಪಡೆದು ಸ್ಥಳದಲ್ಲೇ ಬಗೆಹರಿಸಿ ಅವರುಗಳ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದಾಗಿದೆ ಎಂದರು.

ಬಳಿಕ ಉಪ ವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್ ಮಾತನಾಡಿ,  ಈ ಗ್ರಾಮದಲ್ಲಿ  ಕುಡಿಯುವ ನೀರಿನ ಸಮಸ್ಯೆ,  ರಸ್ತೆ ಸಮಸ್ಯೆಗಳು ಹೆಚ್ಚು ಕಂಡು ಬಂದಿದ್ದು ಕೊಡಲೇ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದರು.  ಈ ಸಭೆಯಲ್ಲಿ ಸಾರ್ವಜನಿಕರು ಅವಹಾಲುಗಳ ಅರ್ಜಿ ಸಲ್ಲಿಸಲು ಆಗದೆ ಇದ್ದವರಿಗೆ  ಇನ್ನೊಂದು ಅವಕಾಶ ನೀಡಿ ಕಂದಾಯ ಇಲಾಖೆ ಹಾಗೂ ಪಂಚಾಯತ  ಮೂಲಕ ಅಹವಾಲುಗಳನ್ನು ನೀಡುವಂತೆ ಸೂಚಿಸಿದರು.

ಕೊಳಗೆ ಗ್ರಾಮದ ಕೃಷ್ಣಾಪುರ ಅರಣ್ಯ ಪ್ರದೇಶದಲ್ಲಿ ಟ್ಯಾಂಕರ್ ನಿರ್ಮಾಣ  ಹಾಗೂ  ಬಾವಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ರೇಷನ್ ಕಾರ್ಡ್ ಸಮಸ್ಯೆ, ರಸ್ತೆ ಪಕ್ಕಾ ಚರಂಡಿ ನಿರ್ಮಾಣ, ಇ ಸ್ವತ್ತು ಸಮಸ್ಯೆಗಳ  ಪರಿಹಾರ, ಬಸ್ಸು ಸೌಲಭ್ಯ,  ಅಂಗನವಾಡಿ ಕೊಠಡಿ ನಿರ್ಮಾಣ, ಕಾರ್ಲೆಡ್ ಸಮಸ್ಯೆ, ಉಪ್ಪು ನೀರು ತಡೆಗಟ್ಟಲು ಕ್ರಮ ವಹಿಸುವುದು,ನಿವೃತ್ತಿ ಸೈನಿಕರಿಗೆ  ಸರ್ಕಾರಿ ಜಮೀನು ನೀಡುವುದು, ಮುಂತಾದ ಸಮಸ್ಯೆಗಳನ್ನು  ಆಲಿಸಿ  ಸಂಬಂಧ ಪಟ್ಟ ಅಧಿಕಾರಿಗಳಿಂದ ಈ ಕೂಡಲೇ ಕ್ರಮ ವಹಿಸಿ ಸೂಕ್ತ ಪರಿಹಾರ ಓದಿಗಿಸಲಾಗುವುದು  ಎಂದರು.

ಜಿಲ್ಲಾಧಿಕಾರಿಗಳ ನಡೆದ ಹಳ್ಳಿ ಕಡೆ  ಕಾರ್ಯಕ್ರಮದಲ್ಲಿ  ಕಂದಾಯ ಇಲಾಖೆಯಿಂದ ವಿವಿಧ ಯೋಜನೆಗಳಿಂದ ವಿವಿಧ ಪಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ  ಪ್ರೊಬೆಶನಲ್ ಐ ಎ ಎಸ್ ಅಧಿಕಾರಿ ಜುಬಿನ ಮಹಾಪಾತ್ರ  ತಹಶೀಲ್ದಾರ ಶ್ರೀದೇವಿ ಭಟ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಆನಂದಕುಮಾರ್ ಬಾಲಪ್ಪನವರು, ಗ್ರಾಮ ಪಂಚಾಯತಿ ಸದಸ್ಯ ಸಂಜಯ್  ಸಲ್ವೇಕರ್ ಗ್ರಾಮ ಪಂಚಾಯತ್ ಸಮಿತಿ ಕಾರ್ಯದರ್ಶಿ ಮಿಠಾಬಾ ರುಕ್ಮಿಣಿ, ಗ್ರಾಮ ಪಂಚಾಯತಿ ಅಧ್ಯಕ್ಷ ಪೂಜಾ ಪ್ರಶಾಂತ ಕೊಟರಕರ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ಯಾಮ ದತ್ತ ನಾಯ್ಕ ಉಪಸ್ಥಿತರಿದ್ದರು.


Share: