ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕಾರ್ಕಳ: ಉಜಿರೆಯ ವಿಶ್ವ ತುಳು ಸಮ್ಮೇಳನದ ಅಂಗವಾಗಿ ಕಾರ್ಕಳ ತಾಲ್ಲೂಕಿನಲ್ಲಿ ಕ್ರೀಡಾಕೂಟ

ಕಾರ್ಕಳ: ಉಜಿರೆಯ ವಿಶ್ವ ತುಳು ಸಮ್ಮೇಳನದ ಅಂಗವಾಗಿ ಕಾರ್ಕಳ ತಾಲ್ಲೂಕಿನಲ್ಲಿ ಕ್ರೀಡಾಕೂಟ

Sat, 14 Nov 2009 02:53:00  Office Staff   S.O. News Service
ಕಾರ್ಕಳ, ನವೆಂಬರ್ 13:  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಅಧ್ಯಕ್ಷತೆಯಲ್ಲಿ ವಿಶ್ವ ತುಳು ಸಮ್ಮೇಳನವು ೨೦೦೯, ಉಜಿರೆಯಲ್ಲಿ ಡಿ.೧೦ರಿಂದ ೧೩ರ ವರೆಗೆ ನಡೆಯುವ ಪ್ರಯುಕ್ತ ಕಾರ್ಕಳ ತಾಲೂಕು ಮಟ್ಟದ ಕ್ರೀಡೋತ್ಸವವನ್ನು ಸ್ವರಾಜ್ಯ ಮೈದಾನದಲ್ಲಿ ನ.೧೫ರಂದು ಹಮ್ಮಿಕೊಳ್ಳಲಾಗಿದ್ದು, ಇದರ ಪೂರ್ವಭಾವಿ ಸಭೆಯು ಸ್ಥಳೀಯ ಯೋಜನಾ ಕಚೇರಿಯಲ್ಲಿ ಭಾನುವಾರ ಜರಗಿತು. 
 
ಸಭೆಯಲ್ಲಿ ಕ್ರೀಡಾಕೂಟದ ಬಗ್ಗೆ ಪೂರ್ವತಯಾರಿ ಬಗ್ಗೆ ವಿಮರ್ಶೆ ನಡೆಸಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. 
 
ಅಧ್ಯಕ್ಷತೆಯನ್ನು ಅಂಡಾರು ಮಹಾವೀರ ಹೆಗ್ಡೆ ವಹಿಸಿದ್ದರು. ಉಡುಪಿ ಜಿಲ್ಲಾ ನಿರ್ದೇಶಕ ಕೇಶವ ಗೌಡ, ಯೋಜನಾಧಿಕಾರಿ ರೂಪಾ ಜಿ.ಜೈನ್, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 
ಮೇಲ್ವಿಚಾರಕ ಮುರಳೀಧರ್ ಸ್ವಾಗತಿಸಿದರು. ಸಂಧ್ಯಾ ವಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ವಂದಿಸಿದರು. 


Share: