ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಳ್ತಂಗಡಿ: ಸಮುದಾಯ ಸಾಂಸ್ಕೃತಿಕ ಜಾಥಾ

ಬೆಳ್ತಂಗಡಿ: ಸಮುದಾಯ ಸಾಂಸ್ಕೃತಿಕ ಜಾಥಾ

Mon, 11 Jan 2010 02:47:00  Office Staff   S.O. News Service
ಬೆಳ್ತಂಗಡಿ, ಜ.೧೦: ಹಸಿವು ಮುಕ್ತ ಕರ್ನಾಟಕಕ್ಕಾಗಿ ಸಮುದಾಯ ಮಂಗಳೂರು ಇದರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಜಾಥಾಕ್ಕೆ ಬೆಳ್ತಂಗಡಿಯಲ್ಲಿ ಸ್ವಾಗತ ನೀಡಲಾಯಿತು. 

ಪತ್ರಕರ್ತ ಶಿಬಿ ಧರ್ಮಸ್ಥಳ ಜಾಥಾಕ್ಕೆ ಸ್ವಾಗತ ಕೋರಿ ಹಸಿವು ಮುಕ್ತ ಕರ್ನಾಟಕಕ್ಕಾಗಿ ಹೋರಾಟದ ಹಾದಿಯನ್ನು ಅವಲಂಬಿಸುವ ಅಗತ್ಯವಿದೆ ಎಂದರು. ಜಾಥಾದ ನೇತೃತ್ವ ವಹಿಸಿದ್ದ ನಾಗೇಶ್ ಪ್ರಾಸ್ತಾವಿಕ ಮಾತನಾಡಿದರು. ವಾಸುದೇವ ಉಚ್ಚಿಲ್ ಉಪಸ್ಥಿತರಿದ್ದರು.

 ಸಮುದಾಯದ ಮುಖಂಡ ಜಯರಾಮ ಮಯ್ಯ, ಡಿವೈ‌ಎಫ್‌ಐ ಮುಖಂಡ ಶೇಖರ.ಎಲ್, ಸಿ‌ಐಟಿಯು ಮುಖಂಡರಾದ ಬಿ.ಎಂ.ಭಟ್, ಶಿವಕುಮಾರ್, ಯಶೋಧ, ನೆಬಿಸ ಹಾಗೂ ಇತರರು ಜಾಥಾಕ್ಕೆ ಸ್ವಾಗತ ಕೋರಿದರು. ಕಲಾವಿದರು ಬೀದಿ ನಾಟಕ ಹಾಗೂ ಹಾಡುಗಳ ಮೂಲಕ ಜನರಿಗೆ ಹಸಿವಿನ ಭೀಕರತೆಯ ಬಗೆಗೆ ಅರಿವು ಮೂಡಿಸಿದರು.

Share: