ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ ಕಡಲತೀರಕ್ಕೆ ಆಗಮಿಸಿದ ಹೋವರ್ ಕ್ರಾಪ್ಟ್ ವೀಕ್ಷಿಸಿದ ಜಿಲ್ಲಾಧಿಕಾರಿ.

ಕಾರವಾರ ಕಡಲತೀರಕ್ಕೆ ಆಗಮಿಸಿದ ಹೋವರ್ ಕ್ರಾಪ್ಟ್ ವೀಕ್ಷಿಸಿದ ಜಿಲ್ಲಾಧಿಕಾರಿ.

Tue, 26 Apr 2022 02:51:23  Office Staff   SO News

ಕಾರವಾರ:  ಭಾರತೀಯ ತಟ ರಕ್ಷಕ ಪಡೆಯ ಹೋವರ್ ಕ್ರಾಪ್ಟ್  ಸೋಮವಾರ ಕೆಲ ಹೊತ್ತು  ಕಾರವಾರ ಕಡಲ ತೀರಕ್ಕೆ ಆಗಮಿಸಿ ಹೊರಟಿದೆ.

 ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕ್ರಾಪ್ಟ್  ವೀಕ್ಷಿಸಿದರು. ನವ ಮಂಗಳೂರಿನ ಕೋಸ್ಟ ಗಾರ್ಡ್ ಬೇಸ್ ನಿಂದ ಗುಜರಾತ್ ನ  ಬೇಸ್ ಗೆ ತೆರಳುತ್ತಿದ್ದ ಹೋವರ್ ಕ್ರಾಪ್ಟ್  ದಾರಿ ಮಧ್ಯೆ  ಕಾರವಾರ ಕಡಲ ತೀರಕ್ಕೆ ಆಗಮಿಸಿತ್ತು.

ಜಿಲ್ಲಾಧಿಕಾರಿಗಳ ವೀಕ್ಷಣೆಯ ನಂತರ ಹೋವರ್ ಕ್ರಾಪ್ಟ್   ಗುಜರಾತ್ ನ ಜಕಾವು ಪೋರ್ಟ್ ಬೇಸ್ ಗೆ ಗೋವಾ ಮಾರ್ಗದ ಮೂಲಕ ತೆರಳಿತು.

 ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ ಪೆನ್ನೇಕರ್, ಕಮಾಂಡೆಂಟ್ ಜಿ. ಕಮೈ, ಕಮಾಂಡೆಂಟ್ ಎ.ದಿಯೋನ್ ಹಾಗೂ ಡೆ.ಕಮಾಂಡೆಂಟ್ ಅಂಕುರ್ ತ್ರಿಪಾಠಿ ಹಾಗೂ ಇತರರು ಜೊತೆಗಿದ್ದರು.


Share: