ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು: ನೆರೆಪರಿಹಾರ ಕಾರ್ಯ - ಅಧ್ಯಯನ ತಂಡದ ಭೇಟಿ ಹಿನ್ನೆಲೆ - ರಜೆಗೆ ಖೋತಾ

ಮಂಗಳೂರು: ನೆರೆಪರಿಹಾರ ಕಾರ್ಯ - ಅಧ್ಯಯನ ತಂಡದ ಭೇಟಿ ಹಿನ್ನೆಲೆ - ರಜೆಗೆ ಖೋತಾ

Sat, 10 Oct 2009 03:06:00  Office Staff   S.O. News Service
ಮಂಗಳೂರು, ಅ.9: ರಾಜ್ಯದ ಹಲವು ಜಿಲ್ಲೆಗಳಲ್ಲಿ  ವಿಪರೀತ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದ್ದು ತುರ್ತು ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ಕೇಂದ್ರ ಅಧ್ಯಯನ ತಂಡ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿನ ಜಿಲ್ಲಾಡಳಿತ ಕಚೇರಿಗಳು ಅ.೧೦ ಮತ್ತು ೧೧ರಂದು ಎರಡೂ ದಿನಗಳು ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಪುತ್ತೂರು: ಸರಕಾರಿ ಕಚೇರಿಗಳು ಶನಿವಾರ ಮತ್ತು ರವಿವಾರ ಉಳಿದ ದಿನಗಳಂತೆ ಕಾರ್ಯಾ ಚರಿಲಿವೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ.ಹರೀಶ್‌ಕುಮಾರ್ ತಿಳಿಸಿದ್ದಾರೆ. 

ದ.ಕ ಜಿಲ್ಲೆ ಸೇರಿದಂತೆ ೧೩ ಜಿಲ್ಲೆಗಳಲ್ಲಿ ಎರಡನೆ ಶನಿವಾರವಾದ ಅ.೧೧ ಮತ್ತು ಅ.೧೨ರಂದು ಸರಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಸರಕಾರ ಆದೇಶಿಸಿರುವ ಹಿನ್ನಲೆಯಲ್ಲಿ ಸರಕಾರಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿರುವ ಉಪವಿಭಾಗಾಧಿಕಾಷ ದ.ಕ. ಜಿಲ್ಲೆಯಲ್ಲಿಯೂ ಅತಿವೃಷ್ಟಿಯಿಂದ ಹಾನಿUಡಾಗಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ನೀರಿನಲ್ಲಿ  ವ್ಯಕ್ತಿಯೋರ್ವ ಕೊಚ್ಚಿ ಹೋಗಿ ಮೃತಪಟ್ಟ ಕಾರಣ ಜಿಲ್ಲೆಯಲ್ಲಿಯೂ ಶನಿವಾರ ಮತ್ತು ರವಿವಾರ ಸರಕಾರಿ ಕಚೇರಿಗಳು     ಕಾರ್ಯನಿರತವಾಗಿರುವಂತೆ  ಆದೇಶಿಸಲಾಗಿದೆ.

Share: