ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ರಾಸಾಯನಿಕ ವಿಪತ್ತುಗಳ ಬಗ್ಗೆ ಅಧಿಕಾರಿಗಳಿಗೆ ವಿಡಿಯೋ ಸಂವಾದದ ಮೂಲಕ ತರಬೇತಿ

ಕಾರವಾರ: ರಾಸಾಯನಿಕ ವಿಪತ್ತುಗಳ ಬಗ್ಗೆ ಅಧಿಕಾರಿಗಳಿಗೆ ವಿಡಿಯೋ ಸಂವಾದದ ಮೂಲಕ ತರಬೇತಿ

Sat, 18 Jun 2022 02:10:43  Office Staff   S O News service

ಕಾರವಾರ : ಜಿಲ್ಲೆಯಲ್ಲಿ ರಾಸಾಯನಿಕ ವಿಪತ್ತುಗಳು ಹೆಚ್ಚಾಗುತ್ತಿರುವುದರಿಂದ ಇವುಗಳ ಬಗ್ಗೆ ಅರಿವು ಮೂಡಿಸಿ ಇದರಿಂದಾಗುವ ಅಪಾಯಗಳನ್ನು ತಡೆಗಟ್ಟುವ ಉದ್ದೇಶದಿಂದ ಎಂ ಆರ್ ಪಿ ಎಲ್ (ಮಂಗಳೂರು ರಿಫೈನರಿ ಆಂಡ್ ಪೆಟ್ರೋ ಕೆಮಿಕಲ್ ಲಿಮಿಟೆಡ್) ರವರಿಂದ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದದ ಮೂಲಕ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಯಿತು.

ಎಂ ಆರ್ ಪಿ ಎಲ್ ಅಧಿಕಾರಿಗಳು ಮಾತನಾಡಿ ರಾಸಾಯನಿಕಗಳನ್ನು ತೆಗೆದುಕೊಂಡು ಹೋಗುವಂತಹ ಲಾರಿಗಳ ಫಿಟ್ನೆಸ್ ಹಾಗೂ ಚಲಾಯಿಸುವಂತಹ ಚಾಲಕ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ ರಾಸಾಯನಿಕಗಳನ್ನು ಸಾಗಿಸುವಾಗಲಿಂದ ಅದು ಹೋಗಿ ತಲುಪುವವರೆಗೆ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳನ್ನ ತಿಳಿಸಿದರು. WISER ಎಂಬ ಅಪ್ಲಿಕೇಷನ್‍ನ್ನು ಅಭಿವೃದ್ಧಿ ಪಡಿಸಲಾಗಿದ್ದು ಯಾವುದೇ ರಾಸಾಯನಿಕ ವಾಹನ ಅಪಘಾತವಾದ ತುರ್ತು ಸಂದರ್ಭದಲ್ಲಿ ಅದನ್ನು ಹೇಗೆ ನಿಭಾಯಿಸಬೇಕು ಮುಂದೆ ರಾಸಾಯನಿಕಗಳಿಂದ ಆಗುವಂತಹ ತೊಂದರೆಯನ್ನು ಯಾವ ರೀತಿಯಲ್ಲಿ ತಡೆಯಬೇಕು ಎಂಬ ಮಾಹಿತಿ ಇದರಲ್ಲಿ ಪಡೆಯಬಹುದು ಎಂದು ಹೇಳಿದರು.

ಮಧ್ಯಂತರದಲ್ಲಿ ವಾಹನ ಹಾಳಾದಾಗ ಏನು ಮಾಡಬೇಕು ಅದರಲ್ಲಿ ಇರುವಂತಹ ರಾಸಾಯನಿಕಗಳನ್ನು ತೊಂದರೆಯಾಗದಂತೆ ಹೇಗೆ ಮತ್ತೊಂದು ವಾಹನಕ್ಕೆ ಶಿಫ್ಟ್ ಮಾಡಬೇಕು ಎನ್ನುವುದರ ಬಗ್ಗೆ ಹಾಗೂ ವಾಹನದಲ್ಲಿ ಯಾವ ರಾಸಾಯನಿಕಗಳನ್ನು ಸಾಗಿಸಲಾಗುತ್ತಲಿದೆ ಎಂಬ ಮಾಹಿತಿ ವಾಹನದ ಹೊರಭಾಗದಲ್ಲಿ ಅಂಟಿಸಿರುವ ಚಿತ್ರದಿಂದ ಪಡೆಯಬಹುದು ಎಂದು ತಿಳಿಸಿದರು.

 ತರಬೇತಿಯಲ್ಲಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ, ಎಂ ಆರ್ ಪಿ ಎಲ್ ಅಧಿಕಾರಿಗಳು, ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರರು, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Share: