ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಮತಗಟ್ಟೆ ಸಿಬ್ಬಂದಿಗೆ ಏಪ್ರಿಲ್ 16 ರಂದು ತರಬೇತಿ : ಜಿಲ್ಲಾಧಿಕಾರಿ

ಕಾರವಾರ: ಮತಗಟ್ಟೆ ಸಿಬ್ಬಂದಿಗೆ ಏಪ್ರಿಲ್ 16 ರಂದು ತರಬೇತಿ : ಜಿಲ್ಲಾಧಿಕಾರಿ

Sun, 14 Apr 2024 02:04:52  Office Staff   S O News

ಕಾರವಾರ: ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ  ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು,ಮತದಾನದ ಕರ್ತವ್ಯ ನಿರ್ವಹಣೆಗೆ  ಈಗಾಗಲೇ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

 ಮತಗಟ್ಟೆ ಕರ್ತವ್ಯ ಕ್ಕೆ ನಿಯೋಜಿಸಿರುವ ಎಲ್ಲಾ  ಪಿ.ಆರ್. ಓ ಗಳು ಮತ್ತು ಎ.ಪಿ.ಆರ್.ಓ ಗಳಿಗೆ ಏಪ್ರಿಲ್ 16 ರಂದು ಬೆಳಗ್ಗೆ 10 ಗಂಟೆಗೆ  ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ  ತರಬೇತಿಯನ್ನು ಆಯೋಜಿಸಲಾಗಿದೆ.
 
ಈಗಾಗಲೇ ಮತದಾನದ ಕರ್ತವ್ಯ ನಿಯೋಜನೆಯ ಆದೇಶ ಪಡೆದಿರುವ ಎಲ್ಲಾ ಪಿ.ಆರ್. ಓ ಗಳು ಮತ್ತು ಎ.ಪಿ.ಆರ್.ಓ ಗಳು ತರಬೇತಿಗೆ ತಪ್ಪದೇ ಹಾಜರಾಗಬೇಕು.

ತರಬೇತಿಗೆ ಗೈರು ಹಾಜರಾಗುವವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಎಚ್ಚರಿಕೆ ನೀಡಿದ್ದಾರೆ.


Share: