ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಂಟ್ವಾಳ : ಪಿಕಪ್-ಜೀಪ್ ಢಿಕ್ಕಿ - ಇಬ್ಬರಿಗೆ ಗಾಯ (+ ಇನ್ನಿತರ ವರದಿಗಳು)

ಬಂಟ್ವಾಳ : ಪಿಕಪ್-ಜೀಪ್ ಢಿಕ್ಕಿ - ಇಬ್ಬರಿಗೆ ಗಾಯ (+ ಇನ್ನಿತರ ವರದಿಗಳು)

Sun, 31 Jan 2010 17:28:00  Office Staff   S.O. News Service

ಬಂಟ್ವಾಳ , ಜನವರಿ 31: ಪಿಕಪ್ ವಾಹನವೊಂದು ಜೀಪಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಕಳೆದ ರಾತ್ರಿ ಸೂರಿಕುಮೇರು ಎಂಬಲ್ಲಿ ನಡೆದಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು.ಹೆಸರು ತಿಳಿದು ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಸೂರಿಕುಮೇರು ಸಮೀಪ ಈ ಅವಘಡ ನಡೆದಿದ್ದು,ಜೀಪಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪಿಕಪ್ ಸ್ಥಳದಿಂದ ಪರಾರಿಯಾಗಿ ಉಪ್ಪಿನಂಗಡಿ ಕಡೆಗೆ ತೆರಳಿದೆ ಎನ್ನಲಾಗಿದೆ. ಜೀಪಿನಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾಧಿಕಾರಿ ಸವಿತ್ರ ತೇಜ್ ಮತ್ತು ಸಿಬ್ಬಂದಿಗಳು ಪರಾರಿಯಾದ ಪಿಕಪ್ ವಾಹನದ ನೋಂದಣಿ ನಂಬ್ರವನ್ನು ಪತ್ತೆ ಮಾಡಿದ್ದು, ಶೀಘ್ರವಾಗಿ ಆರೋಪಿ ಚಾಲಕನನ್ನು ಬಂಧಿಸುವುದಾಗಿ ತಿಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

 

ಬಂಟ್ವಾಳ : ಮನೆಯ ಮುಂಭಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ಒಂಭತ್ತು ಸಾವಿರ ಮೌಲ್ಯದ ನಗದು ಕಳವು ಗೈದ ಘಟನೆ ನರಿಕೊಂಬು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮರ್ಧೊಳಿ ನಿವಾಸಿ ಶಿವಪ್ಪ ಪೂಜಾರಿ ಎಂಭವರ ಮನೆಯಲ್ಲಿ ಈ ಘಟನೆ ನಡೆದಿದ್ದು,ಇವರು ಮನೆ ಮಂದಿ ಸಮೇತ ಬ್ರಹ್ಮಾವರಕ್ಕೆ ತೆರಳಿದ್ದು ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಕಳೆದ ರಾತ್ರಿ ಇವರ ಮನೆಗೆ ಕಳ್ಳರು ಲಗ್ಗೆಯಿಟ್ಟಿದ್ದಾರೆ. ಮುಂಭಾಗಿಲ ಬೀಗವನ್ನಿ ಪಿಕ್ಕಾಸಿನಿಂದ ಮುರಿದ ಕಳ್ಳರು ಕಪಾಟುಗಳನ್ನು ಜಾಲಾಡಿ ಒಂಭತ್ತು ಸಾವಿರ ನಗದು ಕಳವುಗೈದಿದ್ದಾರೆ.ಬಂಟ್ವಾಳ ನಗರ ಠಾಣೆಗೆ ಈ ಬಗ್ಗೆ ದೂರು ನೀಡಲಾಗಿದ್ದು ಠಾಣಾಧಿಕಾರಿ ಎಂ.ಆರ್.ಎಂ.ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದು,ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

 

 

 

ಬಂಟ್ವಾಳ: ತೋಟದಿಂದ ಅಡಿಕೆ ಕಳವುಗೈಯುತ್ತಿದ್ದ ಇಬ್ಬರು ಕಳ್ಳರನ್ನು ತೋಟದ ಮಾಲೀಕನೇ ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ಬಾಳ್ತಿಲ ಗ್ರಾಮದಲ್ಲಿ ನಡೆದಿದೆ. ಕೇಪುಗ್ರಾಮದ ಕುಕ್ಕೆಬೆಟ್ಟು ನಿವಾಸಿ ವಿ.ಕೆ ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ ಇಲ್ಲಿನ ತೋಟದಲ್ಲಿ ಕಳೆದ ರಾತ್ರಿ ಇಬ್ಬರು ಟಡಿಕೆ ಕಳವು ನಡೆಸಲು ಯತ್ನಿಸಿತ್ತಿದ್ದ ತಕ್ಷಣ ಜಾಗೃತರಾದ ಮಾಲೀಕರು ಆರೋಪಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯ ನಿವಾಸಿಗಳಾದ ಪದ್ಮ ಹಾಗೂ ನಾರಾಯಣ ತಮ್ಮ ವಶದಲ್ಲಿರುವ ಆರೋಪಿಗಳು ಎಂದು ಪೋಲಿಸರು ತಿಳಿಸಿದ್ದಾರೆ.

 


Share: