ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ:ಡಿಸಂಬರ್ 5 ನ್ನು ಕರಾಳದಿನವನ್ನಾಗಿ ಆಚರಿಸಲು ಪಿ.ಡಿ.ಪಿ ಕರೆ

ಮಂಜೇಶ್ವರ:ಡಿಸಂಬರ್ 5 ನ್ನು ಕರಾಳದಿನವನ್ನಾಗಿ ಆಚರಿಸಲು ಪಿ.ಡಿ.ಪಿ ಕರೆ

Fri, 04 Dec 2009 16:47:00  Office Staff   S.O. News Service
ಮಂಜೇಶ್ವರ:ಇತಿಹಾಸ ಪ್ರಸಿದ್ದವಾದ ಬಾಬರೀ ಮಸೀದಿಯನ್ನು ಸಂಘಪರಿವಾರ ಕರಸೇವಕರು ಆಡಳಿತಾಧಿಕಾರಿಗಳ ಮೌನ ಸಮ್ಮತಿಯೊಂದಿಗೆ ಧ್ವಂಸಗೊಳಿಸಿ ಸಾರ್ವಬೌಮತೆಯ ಜಾತ್ಯಾತೀತೆಯ ಕಗ್ಗೊಲೆ ನಡೆಸಿ ಮಸಿ ಬಳೆದಿದೆ ಎಂದು ಪಿ.ಡಿ.ಪಿ ಆರೋಪಿಸಿದೆ.

ಡಿಸಂಬರ್ ೬ ರಂದು ನಡೆದ ಕರಾಳ ನೆನಪುಗಳನ್ನು ಮರೆಯದಿರಲು ಪಿ.ಡಿ.ಪಿ.ಡಿಸಂಬರ್ ೫ ಮತ್ತು ೬ ರಂದು ಕರಾಳ ದಿನವನ್ನಾಗಿ ಆಚರಿಸಲು ಆಹ್ವಾನ ವಿತ್ತಿದೆಯೆಂದು ಪಿಡಿಪಿ ನೇತಾರರಾದ ಎಸ್.ಎಂ.ಬಷೀರ್ ರವರು ಹೇಳಿಕೆಯಲ್ಲಿ ತಿಳಿಸಿರುತ್ತಾರೆ.ಡಿಸಂಬರ್ ೫ ಮತ್ತು ೬ ರಂದು ರಾಜ್ಯದ ೧೫ ಕೇಂದ್ರಗಳಲ್ಲಿ ಪ್ರತಿಭಟನಾ ಸಭೆಗಳನ್ನು ಹಮ್ಮಿ ಕೊಂಡು ಪಕ್ಷವು ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ ಬಬರೀ ಧ್ವಂಸದ ಡೋಕುಮೆಂಟರಿಯನ್ನು ಪ್ರದರ್ಶಿಸಲಿದೆ ಎಂದು ಅವರು ತಿಳಿಸಿರುತ್ತಾರೆ.
 
 
ವರದಿ: ರಹಿಮಾನ್ ಉದ್ಯಾವರ ಸ್ಟ್ರೀಂಜರ್ 

Share: