ಮೂಡಬಿದಿರೆ, ನವೆಂಬರ್ ೧೩: ಸೋಷಿಯಲ್ ಡೆಮಾಕ್ರಟಿಕ್. ಪಾರ್ಟಿ ಆಫ್ ಇಂಡಿಯಾ ಎಂ. ನೂತನ ರಾಜಕೀಯ ಪಕ್ಷದ ಮೂಡಬಿದಿರೆನ್ ವಿಧಾನಸಭಾ ಕ್ಷೇತ್ರದ ಬೃಹತ್ ಪ್ರಚಾರ ಸಭೆಯು ಜೋಕಟ್ಟೆಯ ಕೇಂದ್ರ ಮೈದಾನದಲ್ಲಿ ೮-೧೧-೦೯ ರವಿವಾರದಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಾವರ ಕ್ರೈಸ್ತ ಧರ್ಮಗುರುಗಳಾದ ವಿಲಿಯಂ ಮಾರ್ಟಿಝ್ ಮಾತನಾಡಿ ಎ.ಡಿಪಿಐ ಕೇವಲ ಮುಸ್ಲಿಮರ ಪಕ್ಷವಲ್ಲ ಇದು ನಮ್ಮೆಲ್ಲರ ಪಕ್ಷ ಜಾತಿ ಮತ ಭೇದವ ಮರೆತು ನಾವೆಲ್ಲರೂ ಈ ಪಕ್ಷವನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು. ಅಧ್ಯಕ್ಷರಾದ ವ್ಯಾಮೋಹದಿಂದಜನರ ಸಮಸ್ಯೆಗಳನ್ನು ಮರೆತಿರುವ ಜನನಾಯಕರು ಪರಸ್ಪರ ಕಚ್ಚಾಡುತ್ತಿರವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಡಿಪಿಐ ಇದರ ಇಲ್ಯಾ. ಮುಹಮ್ಮದ್ ಮಾತನಾಡಿ, ಸಣ್ಣ ಸಣ್ಣ ಹಳ್ಳಿಯಿಂದ ಹಿಡಿದು, ಹಳ್ಳಿಯಿಂದ ದಿಲ್ಲಿಯವರೆಗೂ ಸಮಸ್ಯೆಗಳು ದಿನಂಪ್ರತಿ ಬೆಳೆಯುತ್ತಿದೆಯೆ ವಿನಃ ಇದಕ್ಕೆ ಪರಿಹಾರವನ್ನು ಕಂಡು ಹಿಡಿಯಲು ಯಾವ ಪಕ್ಷವೂ ಮುಂದೆ ಬರುತ್ತಿಲ್ಲ ಎಂದು ಹೇಳಿದರು. ಅದಕ್ಕಾಗಿ ನಾವು ಎ.ಡಿಪಿಐ ಪಕ್ಷವನ್ನು ಬೆಳೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು. ಅಶ್ರಫ್ ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಬಜ್ಪೆ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಸಿರಾಜ್ ಸ್ವಾಗತಿಸಿ ಎ.ಡಿಪಿಐ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಧನ್ಯವಾದ ಸಮರ್ಪಿಸಿದರು. ಆರಿಫ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮುಂಚಿತವಾಗಿ ಕ್ರಮವಾಗಿ ಮೂಲ್ಕಿ ಹಾಗೂ ಮೂಡಬಿದಿರೆಯಿಂದ ಹೊರಟ ೨೫೦ಕ್ಕೂ ಹೆಚ್ಚಿನ ದ್ವಿಚಕ್ರವಾಹನಗಳಿಂದ ಕೂಡಿದ ಬೃಹತ್ ಬೈಕ್ ರ್ಯಾಲಿಯು ಕಿನ್ನಿಗೋಳಿಯಲ್ಲಿ ಸಂಗಮವಾಗಿ ಜೋಕಟ್ಟೆಯನ್ನುತಲುಪಿದ್ದು, ಜನರ ಪ್ರಶಂಸೆಗೆ ಪಾತ್ರವಾಯಿತು.