ಕಾರವಾರ: ಹಳಿಯಾಳ ಗ್ರಾಮೀಣ ಮಹಿಳೆಯರು ಕೆಲಸದ ಅವಶ್ಯಕತೆ ಇದ್ದಾಗಿಯೂ ಮಕ್ಕಳ ಆರೈಕೆಯ ಸಲುವಾಗಿ ಹಿಂದೇಟಾಕುತ್ತಿದ್ದು, ಅದಕ್ಕೆ ಉತ್ತಮ ಪರಿಹಾರ ನೀಡಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಕ್ಕಳ ಪೆÇೀಷಣೆಗಾಗಿ ಗ್ರಾ.ಪಂ ಗಳಲ್ಲಿ ಶಿಶುಪಾಲನಾ ಕೇಂದ್ರ(ಕೂಸಿನ ಮನೆ) ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಾಲೂಕ ಪಂಚಾಯತನ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ ಎಂ ಘಸ್ತೆ ಹೇಳಿದರು.
ಅವರು ಇಂದು ತಾಲೂಕ ಪಂಚಾಯತನ ಸಾಮಥ್ರ್ಯ ಸೌಧದಲ್ಲಿ ಶಿಶು ಪಾಲನಾ ಕೇಂದ್ರದ ಆರೈಕೆದಾರರಿಗೆ ಏರ್ಪಡಿಸಿದ್ದ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿಯೇ ಹಳಿಯಾಳ ತಾಲೂಕು ಹೆಚ್ಚು ನರೇಗಾ ಕೂಲಿಗಾರರನ್ನು ಒಳಗೊಂಡಿದ್ದಾರೆ. ಅದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಸಹಾಯಕ್ಕಾಗಿ ಶಿಶುಪಾಲನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಇಲ್ಲಿ 1 ರಿಂದ 6 ವರ್ಷದ ಒಳಗಿನ ಮಕ್ಕಳ ಆರೈಕೆಯನ್ನು ಮಾಡಲಾಗುತ್ತಿದ್ದು, ಮಕ್ಕಳಿಗೆ ಅವಶ್ಯವಿರುವ ಪೌಷ್ಟಿಕ ಆಹಾರ ಮತ್ತು ಆಟಿಕೆಗಳನ್ನು ಯೋಜನೆಯಡಿ ಕಲ್ಪಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಎನ್.ಎಮ್ ಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರಾದ ಅನ್ನಪೂರ್ಣ, ಮಂಜುಳಾ, ನರೇಗಾ ಸಿಬ್ಬಂದಿಗಳು ಹಾಗೂ ಶಿಶು ಆರೈಕೆದಾರರು ಹಾಜರಿದ್ದರು.