ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಗಮನಕ್ಕೆ

ಕಾರವಾರ: ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಗಮನಕ್ಕೆ

Fri, 01 Sep 2023 02:19:29  Office Staff   S O News

ಕಾರವಾರ: ರಾಜ್ಯ ಸರ್ಕಾರವು ಪ್ರಸ್ತುತ ಹೊಸದಾಗಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿರುವುದು ಸಾರ್ವಜನಿಕರಿಗೆ ತಿಳಿದ ವಿಷಯವಾಗಿರುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 2,96,145 ಯಜಮಾನಿ ಮಹಿಳೆಯರು ನೊಂದಾಯಿಸಿಕೊಂಡಿರುತ್ತಾರೆ.

ನೊಂದಾಯಿಸಿದ ಎಲ್ಲ ಮಹಿಳೆಯರ ಅರ್ಜಿಗಳು ಪರಿಶೀಲನೆಗೊಂಡು, ಪರಿಶೀಲನೆಯಲ್ಲಿ ಅರ್ಹರೆಂದು ದೃಢಪಟ್ಟ ಮಹಿಳೆಯರ ಖಾತೆಗೆ ಹಣ ಸಂದಾಯ ಮಾಡಲು ಕ್ರಮ ವಹಿಸಲಾಗಿದೆ. ಪ್ರಸ್ತುತ 1,17,335 ಫಲಾನುಭವಿಗಳಿಗೆ ಅವರ ಖಾತೆಗೆ ಅಗಷ್ಟ್-2023 ರ ಮಾಹೆಯ ಧನ ಸಹಾಯವನ್ನು ಜಮಾ ಮಾಡುವ ಕುರಿತು ಕ್ರಮ ವಹಿಸಲಾಗಿದ್ದು, ಅದರಂತೆ ಅವರ ಖಾತೆಗೆ ಹಣ ಜಮಾ ಆಗುತ್ತಿದೆ. ಉಳಿದ ನೊಂದಾಯಿತ ಮಹಿಳೆಯರಿಗೂ ಸಹ ಹಂತ-ಹಂತವಾಗಿ ಪರಿಶೀಲನೆಯಾಗಿ ಬಂದಂತೆ ಅನುದಾನ ಲಭ್ಯತೆಗನುಗುಣವಾಗಿ ಅವರ ಖಾತೆಗೆ ಧನ ಸಹಾಯವನ್ನು ಜಮಾ ಮಾಡಲು ಕ್ರಮ ವಹಿಸಲಾಗುವುದು.  

ಈ ಯೋಜನೆಯಲ್ಲಿ ಅರ್ಜಿ ನೊಂದಾಯಿಸಿದ ಮಹಿಳೆಯರು ಗೊಂದಲಕ್ಕೆ ಒಳಗಾಗದೇ ಹಣ ವರ್ಗಾವಣೆಯಾಗುವವರೆಗೆ ತಾಳ್ಮೆಯಿಂದ ಸಹಕರಿಸವಂತೆ ಸಾರ್ವಜನಕರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಚ್.ಎಚ್.ಕುಕನೂರ ಅವರು ಕೋರಿದ್ದಾರೆ.


Share: