ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಕಾರು ಜೀಪ್ ಹಾಗೂ ಬಸ್ಸು ಚಾಲನ ತರಭೇತಿಗಳಿಗೆ ಅರ್ಜಿ ಅಹ್ವಾನ

ಕಾರವಾರ: ಕಾರು ಜೀಪ್ ಹಾಗೂ ಬಸ್ಸು ಚಾಲನ ತರಭೇತಿಗಳಿಗೆ ಅರ್ಜಿ ಅಹ್ವಾನ

Sun, 17 Apr 2022 17:56:24  Office Staff   S O News

ಕಾರವಾರ:  ಜಿಲ್ಲೆಯ  ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ 2022-23 ನೇ ಸಾಲಿನ ಪರಿಶಿಷ್ಟ ಪಂಗಡದ ಎಲ್ಲಾ ಸಮುದಾಯದ ಮಹಿಳಾ ಮತ್ತು ಪುರುಷ  ಅಭ್ಯರ್ಥಿಗಳಿಗೆ ಉಚಿತವಾಗಿ ಲಘು (ಕಾರು/ಜೀಪ್) ಹಾಗೂ ಭಾರಿವಾಹನ (ಬಸ್ಸು) ಚಾಲನ ತರಭೇತಿಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. 
    
ಆಸಕ್ತ  ಲಘು ವಾಹನ ಚಾಲನಾ ತರಬೇತಿ ಪಡೆಯುವ  ಅಭ್ಯರ್ಥಿಗಳು  18 ವರ್ಷಮೇಲ್ಪಟ್ಟವರಾಗಿರಬೇಕು, ಹಾಗೂ ಭಾರಿ ವಾಹನ ಚಾಲನಾ ತರಬೇತಿ  ಪಡೆಯುವವರು 20 ವರ್ಷ ವಯೋಮಿತಿ ಪೂರೈಸಿರಬೇಕು,  ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪ್ರಮಾಣ ಪತ್ರ,   ಆಧಾರ ಕಾರ್ಡ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,  ಪಾಸ್ ಪೋರ್ಟ ಅಳತೆಯ  5 ಭಾವಚಿತ್ರ ಅವಶ್ಯಕ ಮಾಹಿತಿಯೊಂದಿಗೆ  ಏ. 20 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹದಾಗಿದೆ. 

ಹೆಚ್ಚಿನ ಮಾಹಿತಿಗಾಗಿ  ಇಲಾಖಾ ವೆಬ್ ಸೈಟ್ https://www.karnataka.gov.in/  ಮತ್ತು  ದೂರವಾಣಿ ಸಂಖ್ಯೆ: 08382-226903  ಗೆ  ಸಂಪರ್ಕಿಸಿ ಎಂದು ಜಿಲ್ಲಾ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


Share: