ಬಂಟ್ವಾಳ, ಫೆಬ್ರವರಿ ೬ ಕಳೆದ ಒಂದು ತಿಂಗಳ ಹಿಂದೆ ಬರಿಮಾರು ಗ್ರಾಮದಲ್ಲಿ ಸಿನಿಮೀಯ ರೀತಿಯಲ್ಲಿ ನಡೆದಿದೆ ಎನ್ನಲಾಗಿದ್ದ ನಕಲಿ ದರೋಡೆ ಪ್ರಕರಣವನ್ನು ಬಂಟ್ವಾಳ ಗ್ರಾಮಾಂತರ ಪೋಲಿಸರು ಭೇಧಿಸಿದ್ದು, ಸುಳ್ಳು ದೂರು ನೀಡಿರುವ ಮನೆ ಮಾಲಕಿಯ ಅಮಿತಾಳ ವಿರುದ್ದವೇ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಜಪ್ಪ ಪೂಜಾರಿ ಯವರ ಪತ್ನಿ ಅಮಿತಾ ಎಂಬಾಕೆಯೇರ ಸುಳ್ಳು ದೂರು ನೀಡಿ ಸಿಕ್ಕಿಹಾಕಿಕೊಂಡಾಕೆ. ತಾನು ಮಾಡಿದ ಸಾಲದಿಂದ ಬಚಾವ್ ಆಗಲು ಅಮಿತಾ ಸುಳ್ಳು ದೂರು ನೀಡಿರುವುದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ.
ಅಮಿತಾ ಹೇಳಿದ ಕಟ್ಟುಕತೆ...
ಕಳೆದ ಜನವರಿ ಐದರಂದು ರಾತ್ರಿ ೨ ಗಂಟೆಯ ಸುಮಾರಿಗೆ ತನ್ನ ಮನೆಗೆ ಬಂದ ನಾಲ್ವರು ಅಪರಿಚಿತರ ತಂಡ ತನ್ನಹೆಸರನ್ನು ಕೂಗಿ ಕರೆದಿದ್ದು,ನಿಮ್ಮಗಂಡನಿಗೆ ಅಫಘಾತವಾಗಿದ್ದು ಬಗಿಲು ತೆರೆಯುವಂತೆ ಒತ್ತಯಿಸಿದ್ದರು, ಹೊರಗಿದ್ದ ನಾಲ್ವರ ಪೈಕಿ ಓರ್ವನ ಮುಖಕ್ಕೆ ಬ್ಯಾಂಡೇಜ್ ಸುತ್ತಲಾಗಿದ್ದು ಸಿಟ್ ಹೌಸ್ ನಲ್ಲಿ ಮಲಗಿಸಲಾಗಿತ್ತು. ಕಿಟಕಿಯ ಮೂಲಕ ನೋಡಿದ ನಾನು ಸಂಶಯದಿಂದ ಬಾಗಿಲು ತೆರೆಯದೇ ತಮ್ಮ ಗಂಡನ ಮೊಬೈಲ್ ಗೆ ಕರೆ ಮಾಡಿದೆ. ಆದರೆ ದೇಜಪ್ಪರೂ ಆ ಕ್ಷಣದಲ್ಲಿ ಕರೆಸ್ವೀಕರಿಸದ ಹಿನ್ನೆಲೆಯಲ್ಲಿ ಮಲಗಿದ್ದವೇ ತನ್ನ ಗಂಡ ಇರಬಹಿದೆಂದು ಭ್ರಮಿಸಿ ಬಾಗಿಲು ತೆರೆದೆ. ತಕ್ಷಣವೇ ಬ್ಯಾಂಡೇಜ್ ಸುತ್ತಿದ್ದ ವ್ಯಕ್ತಿ ಸೇರಿದಂತೆ ಉಳಿದ ಮೂವರೂ ಒಳ ಪ್ರವೇಶಿಸಿ ತಲವಾರು ತೋರಿಸಿ ಕರಿಮಣಿ ಸರ,ಚಿಬ್ಬದ ಸರ,ಹಾಗೂ ಬೀರುವಿನಲ್ಲಿದ್ದ ನಗದು ಹಣ ದೋಚಿ ಪರಾರಿಯಾಗಿದ್ದಾರೆ ಹೀಗೆಂದು ಅಮಿತಾ ಜನವರಿ ೬ ರಂದು ಬಂಟ್ವಾಳ ಪೋಲಿಸರಿಗೆ ದೂರು ನೀಡಿದ್ದರು.ದರೋಡೆಕೋರರು ಏಳೂವರೆ ಪವನ್ ಚಿನ್ನ ಹಾಗೂ ೨೫೦೦ ರೂ ನಗದು ದೋಚಿ ಪರಾರಿಯಾಗಿದ್ದಾರೆ. ಅದರಂತೆ ಸ್ಥಳ ತನಿಖೆ ನಡೆಸಿದ ಪೋಲಿಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಷರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೋಲಿಸರಿಗೆ ಇದೀಗ ಇಡೀ ಪ್ರಕರಣ ಅಮಿತಾ ಸೃಷ್ಟಿಸಿದ ಕಟ್ಟುಕತೆ ಎಂಬುದು ದೃಡಪಟ್ಟಿದೆ.
ಕಾರಣ ಏನು..?
ಮನೆ ಯಜಮಾನ ದೇಜಪ್ಪ ಪೂಜಾರಿಯವರು ಮಂಗಳೂರಿನ ಹೋಟೆಲ್ ವೊಂದರಲ್ಲಿ ಉದ್ಯೋಗಿಯಾಗಿದ್ದು,ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಇತ್ತ ಮನೆಯಲ್ಲಿ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಪತ್ನಿ ಅಮಿತಾ ಕಾರೊಂದನ್ನು ಖರೀದಿಸಿದ್ದಳು. ಅದಕ್ಕಾಗಿ ಚಿನ್ನಾಭರಣಗಳನ್ನು ಅಡವಿಟ್ಟಿದ್ದಳು. ಅದರ ಸಾಲ ತೀರಿಸಲು ಅಡವಿಟ್ಟಿದ್ದ ಚಿನ್ನಾ ಭರಣಗಳನ್ನು ಮಾರಿದ್ದಳು. ಇದಕ್ಕಾ ಗಿ ತನ್ನ ಗಂಡ ಬೈದಾರು ಎಂಬ ಭೀತಿಯಿಂದ ಕಟ್ಟುಕತೆ ಕಟ್ಟಿ ತನ್ನಗಂಡ, ಪೋಲಿಸರು ಹಾಗೂ ಊರವರನ್ನು ನಂಬಿಸಿವಲ್ಲಿ ಯಶಸ್ವಿಯಾಗಿದ್ದಳು. ಆದರೆ ಬಂಟ್ವಾಳದ ಬ್ರಿಲ್ಲಿಯೆಂಟ್ ಪೋಲಿಸರು ದೂರು ನೀಡಿ ತಿಂಗಳು ಕಳೆಯುವಷ್ಟರಲ್ಲಿಯೇ ಮನೆಯಲ್ಲಿದ್ದುಕೊಂಡೇ ದರೋಡೆ ನಡೆಸಿದಾಕೆಯನ್ನು ಪತ್ತೆ ಹಚ್ಚುವ ಮೂಲಕ ಕುತೂಹಲ ಕೆರಳಿಸಿದ್ದ ಪ್ರಕರಣಕ್ಕೆ ಸುಖಾಂತ್ಯನೀಡಿದ್ದಾರೆ. ಬಂಟ್ವಾಳ ವೃತ್ತನಿರೀಕ್ಷಕ ನಂಜುಂಡೇ ಗೌಡ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ವಿವೇಕಾನಂದ ಮತ್ತು ಸಿಬ್ಬಂದಿಗಳುಡೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.