ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪುತ್ತೂರು: ಸ್ವಾಭಿಮಾನಿ ವೇದಿಕೆಯಿಂದ ‘ಕೃಷಿ ಉಳಿಸಿ-ದೇಶ ರಕ್ಷಿಸಿ’ ಆಂದೋಲನ ಆರಂಭ

ಪುತ್ತೂರು: ಸ್ವಾಭಿಮಾನಿ ವೇದಿಕೆಯಿಂದ ‘ಕೃಷಿ ಉಳಿಸಿ-ದೇಶ ರಕ್ಷಿಸಿ’ ಆಂದೋಲನ ಆರಂಭ

Wed, 10 Feb 2010 03:18:00  Office Staff   S.O. News Service
ಪುತ್ತೂರು, ಫೆ.೮: ಸ್ವಾಭಿಮಾನಿ ವೇದಿಕೆಯ ವತಿಯಿಂದ ಜಿಲ್ಲೆಯ ರೈತರ ಜೀವನಾಡಿ ಯಾಗಿರುವ ಅಡಿಕೆ, ತೆಂಗು ಸೇರಿದಂತೆ ಕೊಕ್ಕೊ, ಹೈನುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಿ ‘ಕೃಷಿ ಉಳಿಸಿ- ದೇಶ ರಕ್ಷಿಸಿ’ ಆಂದೋಲನಕ್ಕೆ ಚಾಲನೆ ಹಾಗೂ ಹಕ್ಕೊತ್ತಾಯ ಮಂಡನೆ ಸೋಮವಾರ ಪುತ್ತೂರಿನಲ್ಲಿ ನಡೆಯಿತು.

ಪುತ್ತೂರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಹಕ್ಕೊತ್ತಾಯ ಸಭೆ ಯಲ್ಲಿ ಮಾತನಾಡಿದ ಸ್ವಾಭಿಮಾನಿ ವೇದಿಕೆಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಾಮ ಭಟ್, ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸರಕಾರವು ದೇಶದ ಬೆನ್ನೆಲುಬಾದ ರೈತರ ಆತ್ಮಹತ್ಯೆಗೆ  ಪ್ರೇರಣೆ ನೀಡುತ್ತಿದೆ ಹಾಗೂ ರೈತರಿಗೆ ಗುಂಡಿಕ್ಕುವ ಮೂಲಕ ಅವರ ಬದುಕನ್ನೇ ಅಂತ್ಯಗೊಳಿಸುತ್ತಿವೆ ಎಂದರು. 

ರಾಜಕೀಯ ನಾಯಕರ ಹಠ ಮಾರಿತನಕ್ಕೆ ಉತ್ತಮ ಉದಾ ಹರಣೆ ಪುತ್ತೂರಿನ ಹಳೆಯ ಎಸಿ ಕಚೇರಿ. ಇದನ್ನ್ನು ಕೆಡವಿ ಹಾಕು ವಲ್ಲಿ ಇದ್ದಂತಹ ಕಾಳಜಿ ಪುನರ್ ನಿರ್ಮಾಣದಲ್ಲಿಲ್ಲ. ಸ್ವಪ್ರತಿಷ್ಟೆಗಾಗಿ ಸಾರ್ವಜನಿಕರ ವಿರೋಧದ ನಡುವೆಯೇ ಎಸಿ ಕಚೇರಿಯನ್ನು ಕೆಡವಲಾಗಿದೆ ಎಂದು ಭಟ್ ಆರೋಪಿಸಿದರು. 

ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷೆ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಸುಳ್ಳು ಘೋಷಣೆ ಗಳ ಮೂಲಕ ರೈತರ ದಾರಿತಪ್ಪಿಸುತ್ತಿದ್ದಾರೆ. ರೈತರಿಗೆ ಸಹಕರಿಸಬೇಕಾದ ಕಾಂಪ್ಕೊದ ನೂತನ ಅಧ್ಯಕ್ಷರು ಜೋಳಿಗೆ ಹಿಡಿದುಕೊಂಡೇ ಅಧ್ಯಕ್ಷ ಗಾದಿಯಲ್ಲಿ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು. 

ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯ ಚಂದ್ರ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಮಂಗಳೂರು ಮಹಾ ನಗರ ಪಾಲಿಕೆಯ ಸದಸ್ಯೆ ಮರಿಯಮ್ಮ ಥೋಮಸ್, ಸ್ವಾಭಿಮಾನಿ ವೇದಿಕೆಯ ಉಪಾ ಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಎಂ.ಬಿ. ವಿಶ್ವನಾಥ ರೈ, ಹಿಂಜಾವೇಯ ಲಕ್ಷ್ಮೀಶ ಗಬ್ಲಡ್ಕ, ಕಿಸಾನ್ ಸೇನೆಯ ಅಧ್ಯಕ್ಷ ರವಿಕಿರಣ ಪುಣಚ ಮತ್ತಿತರರು ಮಾತನಾಡಿದರು.

ಈ ಸಂದರ್ಭ ಎಪಿ‌ಎಂಸಿ ಮಾಜಿ ಅಧ್ಯಕ್ಷ ಬನಾರಿ ಗೋಪಾಲಕೃಷ್ಣ ಭಟ್, ಕರವೇ ರಾಜ್ಯ ಉಪಾಧ್ಯಕ್ಷೆ ಝೊಹ್‌ರಾ ನಿಸಾರ್, ತಾಲೂಕು ಕಾರ್ಯದರ್ಶಿ ಎಂ.ಎ.ಖಾದರ್, ಸ್ವಾಭಿಮಾನಿ ವೇದಿಕೆಯ ಲಕ್ಷ್ಮೀಶ್ ಗಾಂಭೀರ್, ಶ್ರೀ ರಾಮ ಸೇನೆಯ ಅಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ, ಜಿ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್, ಸ್ವಾಭಿಮಾನಿ ವೇದಿಕೆಯ ಕಾರ್ಯದರ್ಶಿ ರಾಮಚಂದ್ರ ಅಮಳ, ಉಲ್ಲಾಸ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. 

ಸಭೆಯ ಬಳಿಕ ಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಹಕ್ಕೊತ್ತಾಯ ಮಂಡನೆ ಪ್ರತಿಯನ್ನು ಸಲ್ಲಿಸಲಾಯಿತು. 
ಹಕ್ಕೊತ್ತಾಯ
ರೈತರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಅಡಿಕೆಗೆ ೧೨೫ ರೂ. ಬೆಂಬಲ ಬೆಲೆ ನೀಡಬೇಕು. 
ರೈತರ ಈ ವರ್ಷದ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. 
ಈಗಾಗಲೇ ಮನ್ನಾ ಮಾಡಿರುವುದಾಗಿ ಹೇಳಿರುವ ಕೃಷಿ ಸಾಲವನ್ನು ಸಹಕಾರಿ ಸಂಘಗಳಿಗೆ ತಕ್ಷಣವೇ ಬಿಡುಗಡೆ ಮಾಡಬೇಕು.
ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬೇಕು. 
ಅಕ್ರಮ ಮರಳುಗಾರಿಕೆ ದಂಧೆಯನ್ನು ತಡೆ ಗಟ್ಟಬೇಕು. 
ಕಂದಾಯ ಇಲಾಖೆಯ ಜಮೀನು ನಕ್ಷೆ ಸೇರಿದಂತೆ ಇತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು

Share: