ಮಂಗಳೂರು, ನವೆಂಬರ್ 28: ಇತ್ತೀಚಿನ ಉತ್ತರ ಕರ್ನಾಟಕದ ನೆರೆಯಲ್ಲಿ ಸಂತ್ರಸ್ತರಾದವರಿಗೆ ನೆರವಾಗುವ ನಿಟ್ಟಿನಲ್ಲಿ ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ವತಿಯಿಂದ ಮೂರು ಲಕ್ಷ ರೂಪಾಯಿಗಳನ್ನು ನೀಡಲಾಯಿತು.
ಹೋಲಿ ಕ್ರಾಸ್ ಚರ್ಚ್ ನ ಪಾರಿಶ್ ಪಾದ್ರಿಯವರಾದ ರೆ. ಫಾ. ವಲೇರಿಯನ್ ಪಿಂಟೋ ರವರು ಮೂರು ಲಕ್ಷ ರೂಪಾಯಿಗಳ ಚೆಕ್ ಅನ್ನು ಮಂಗಳೂರು ಡಯೋಸೀಸ್ ನ ಬಿಷಪ್ ರೆ. ಫಾ. ಡಾ. ಅಲೋಯ್ಶಿಯಸ್ ಪೌಲ್ ಡಿಸೋಜಾರವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಾರಿಶ್ ಕೌಂಸಿಲ್ ನ ಪೂರ್ವ ಉಪಾಧ್ಯಕ್ಷ ಶ್ರೀ ಸುಶೀಲ್ ನೊರೋನ್ಹಾ, ಉಪಾಧ್ಯಕ್ಷ ವಿಕ್ಟರ್ ವಾಝ್, ಆಡಳಿತ ಮಂಡಳಿ ಸದಸ್ಯರಾದ ಸ್ಟ್ಯಾನಿ ಡಿಸೋಜಾ, ಪ್ರವೀನ್ ಪಾತ್ರಾವ್, ಶ್ರೀಮತಿ ಎಮಿಲ್ಡಾ ಡಿ’ಸಿಲ್ವಾ ಉಪಸ್ಥಿತರಿದ್ದರು.