ಕಾರವಾರ: ಕೈಗಾದ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ದವರು ಏರ್ಪಡಿಸಿದ ಅಂತರ್ ಶಾಲಾ ಕ್ವಿಜ್ ಸ್ಪರ್ಧೆಯಲ್ಲಿ ಬಾಲಮಂದಿರ ಪ್ರೌಢಶಾಲೆಯ ಕು. ತೇಜಸ್ವಿ ಆಯ್. ತಾಂಡೇಲ್ ಮತ್ತು ಕು. ಶಿವಾನಿ ಎಸ್. ರಾಯ್ಕರ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಕೈಗಾದ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್‍ನ ಅಧಿಕಾರಿಗಳಾದ ಶ್ರೀ ಎನ್. ಶ್ರೀನಿವಾಸು ಹಾಗೂ ಶ್ರೀ ಕೆ. ಎಸ್. ಲಕ್ಷ್ಮೀಕಾಂತ ರವರು ಈ ಕಾರ್ಯಕ್ರಮ ಆಯೋಜಿಸಿದ್ದರು. ಬಾಲಮಂದಿರ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಭಾರತಿ ಐಸಾಕ್ ಮೊದಲಾದವರು ಸಹಕರಿಸಿದರು.
ಇವರ ಈ ಸಾಧನೆಗೆ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ಅಂಜಲಿ ಮಾನೆ, ಕಾರವಾರ ಎಜ್ಯುಕೇಶನ್ ಸೊಸೈಟಿಯ ಚೇರ್‍ಮನ್ ಶ್ರೀ ಎಸ್.ಪಿ. ಕಾಮತ್, ಕಾರ್ಯದರ್ಶಿ ಶ್ರೀ ಅನಿರುದ್ಧ ಹಳದಿಪುರಕರ್, ಆಡಳಿತಾಧಿಕಾರಿ ಶ್ರೀ ಜಿ.ಪಿ. ಕಾಮತ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಅಭಿನಂದನೆ ಸಲ್ಲಿಸಿರುತ್ತಾರೆ.