ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ದಾಂಡೇಲಿ ಇವರ ವತಿಯಿಂದ 10 ದಿನಗಳ ಟ್ರಾವೇಲ್ ಮತ್ತು ಟುರಿಸತ ಗೈಡ್ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ.
ತರಬೇತಿಯನ್ನು ಊಟ ವಸತಿಯೊಂದಿಗೆ ನೀಡಲಾಗುವುದು. 18 ರಿಂದ 45ರ ವರ್ಷದೊಳಗಿನ ಆಸಕ್ತ ಯುವಕರು ಎಸ್.ಎಸ್,ಎಲ್.ಸಿ ಅಂಕಪಟ್ಟಿ, ಹೆಸರು , ಹುಟ್ಟಿದ ದಿನಾಂಕ, ಪೂರ್ಣ ಪೊಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸದ ವಿವರಗಳೊಂದಿಗೆ ಅರ್ಜಿಯನ್ನು ಅರ್ಜಿಯನ್ನು ಮೇ. 10 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ವಿಸ್ತರಣಾ ಕೇಂದ್ರ ಹಸನಮಾಳ ದಾಂಡೇಲಿ 581325 ವಿಳಾಸಕ್ಕೆ ಅಥವಾ ವಾಟ್ಸಪ್ ಮೂಲಕವೂ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 6363459889, 9449782425, 08284-298547 ಗೆ ಸಂಪರ್ಕಿಸಬಹುದೆಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ವಿಸ್ತರಣಾ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.